ಪತ್ರಕರ್ತೆಯ ಕೆನ್ನೆ ಸವರಿದ ರಾಜ್ಯಪಾಲರ ವಿರುದ್ಧ ಸಿಡಿದ ಟ್ವಿಟ್ಟಿಗರು

Recommended Video

      ತಮಿಳುನಾಡಿನ ರಾಜ್ಯಪಾಲರು ಪತ್ರಕರ್ತೆಯ ಕೆನ್ನೆ ಸವರಿದ್ದು ಸರೀನಾ?| Oneindia Kannada

      ಚೆನ್ನೈ, ಏಪ್ರಿಲ್ 18: ಮಧುರೈ ಕಾಮರಾಜ ವಿಶ್ವವಿದ್ಯಾಲಯದ ವಿವಾದದ ಸುಳಿಯಲ್ಲಿ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಹೆಸರೂ ಕೇಳಿಬಂದ ಒಂದೆರಡು ದಿನಗಳಲಲ್ಲಿ ಮತ್ತೊಂದು ವಿವಾದವನ್ನು ಅವರು ಮೈಮೇಲೆಳೆದುಕೊಂಡಿದ್ದಾರೆ.

      ಮಧುರೈ ವಿವಿ ಗೆ ಸಂಬಂಧಿಸಿದ ವಿವಾದಗಳಿಗೆ ತೆರೆ ಎಳೆಯಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಹಿಳಾ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವ ಬದಲು ಅವರ ಕೆನ್ನೆ ಸವರಿ ಮಹಿಳಾಮಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

      ಮಧುರೈ ವಿವಿಯ ಪ್ರಾಧ್ಯಾಪಕಿ ನಿರ್ಮಲಾ ದೇವಿ ಎಂಬುವವರು ತಮ್ಮ ವಿದ್ಯಾರ್ಥಿನಿಯರಿಗೆ, 'ಪದವಿಬೇಕೆಂದರೆ ಹಿರಿಯ ಅಧಿಕಾರಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು.

      ಈ ವಿವಾದದ ನಂತರ ಅವರು, 'ವಿವಿಯ ಕುಲಪತಿಯಾಗಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ನನಗೆ ಚೆನ್ನಾಗಿ ಗೊತ್ತು' ಎಂದು ಹೇಳುವ ಮೂಲಕ ಈ ಪ್ರಕರಣದಲ್ಲಿ ರಾಜ್ಯಪಾಲರ ಹೆಸರನ್ನೂ ಸಿಲುಕಿಸಿದ್ದರು.

      ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

      ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರೊಬ್ಬರ ಕೆನ್ನೆ ಸವರುವ ಮೂಲಕ ರಾಜ್ಯಪಾಲರು ಮತ್ತೆ ವಿವಾದ ಸೃಷ್ಟಿಸಿದ್ದಾರೆ. ರಾಜ್ಯಪಾಲರ ಈ ನಡೆಯನ್ನು ಡಿಎಂಕೆ ನಾಯಕಿ ಕನ್ನಿಮೋಳಿ ಸೇರಿದಂತೆ ಹಲವರು ಖಂಡಿಸಿದ್ದಾರೆ.

      ಈ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜ್ಯಪಾಲರು ಕ್ಷಮೆ ಯಾಚಿಸಿದ್ದಾರೆ. ಆದರೂ ಟ್ವಿಟ್ಟರ್ ಸಾಕಷ್ಟು ಜನರು 72 ರ ಹರೆಯದ ರಾಜ್ಯಪಾಲರ ನಡೆಯನ್ನು ಖಂಡಿಸಿದ್ದಾರೆ.

      "ನನ್ನ ಕೆನ್ನೆ ಸವರಿದ ರಾಜ್ಯಪಾಲರು"

      "ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆಯೇ ನಾನು ರಾಜ್ಯಪಾಲರನ್ನು ಒಂದು ಪ್ರಶ್ನೆ ಕೇಳಿದೆ. ಅದಕ್ಕೆ ಅವರು ಉತ್ತರ ಎಂಬಂತೆ ನನ್ನ ಕೆನ್ನೆ ಸವರಿದರು. ಅದೂ ನನ್ನ ಒಪ್ಪಿಗೆ ಇಲ್ಲದೆ" ಎಂದು ಪತ್ರಕರ್ತೆ ಟ್ವೀಟ್ ಮಾಡಿದ್ದಾರೆ.

      ಸಾರ್ವಜನಿಕ ಹುದ್ದೆಯಲ್ಲಿರುವವರಿಗೆ ಜವಾಬ್ದಾರಿ ಇರಬೇಕು!

      ಸಾರ್ವಜನಿಕ ಹುದ್ದೆಯಲ್ಲಿರುವ ಒಬ್ಬ ವ್ಯಕ್ತಿಗೆ ಜವಾಬ್ದಾರಿ ಇರಬೇಕು. ಒಬ್ಬ ಮಹಿಳೆಯನ್ನು ಆಕೆಯ ಒಪ್ಪಿಗೆ ಇಲ್ಲದೆ ಮುಟ್ಟುವುದು ಹಿದ್ದೆಯ ಘನತೆಯನ್ನು ಕಡಿಮೆ ಮಾಡುತ್ತದೆ. ಪ್ರತಿ ಮನುಷ್ಯನಿಗೆ ಗೌರವ ನೀಡಬೇಕು ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕಿ ಕನ್ನಿಮೋಳಿ ಟ್ವೀಟ್ ಮಾಡಿದ್ದಾರೆ.

      ಒಪ್ಪಿಗೆ ಇಲ್ಲದೆ ಸ್ಪರ್ಶಿಸುವುದು ಅಪರಾಧವೇ?

      ಹಲವರು ಇದನ್ನು ದೌರ್ಜನ್ಯವಲ್ಲ ಎಂದು ವ್ಯಾಖ್ಯಾನಿಸುತ್ತಿರುವುದನ್ನು ನಾನು ಕೇಳುತ್ತಿದ್ದೇನೆ. ಆದರೆ ಮಹಿಳೆಯ ಒಪ್ಪಿಗೆ ಇಲ್ಲದೆ ಆಕೆಯನ್ನು ಸ್ನೇಹಭಾವದಿಂದಲೇ ಆದರೂ ಸ್ಪರ್ಶಿಸುವುದು ತಪ್ಪು. ಅದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ ಶ್ರೇಯಾ ಬಲ್ದ್ವಾ.

      ಬಿಜೆಪಿ ಬೆಂಬಲಿಗ ಎಂಬುದನ್ನು ಸಾಬೀತುಪಡಿಸಿದ್ದಾರೆ!

      ಈ ವಿಷಯದ ಬಗ್ಗೆ ನಾವು ಹೆಚ್ಚು ಚರ್ಚಿಸುವುದು ಬೇಡ. ತಮಿಳುನಾಡು ರಾಜ್ಯಪಾಲರು ತಾವು ಬಿಜೆಪಿ ಬೆಂಬಲಿಗರು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಕೀರ್ತಿಕಾ ನವನೀಥನ್ ಟ್ವೀಟ್ ಮಾಡಿದ್ದಾರೆ.

      ಉನ್ನಾವೋ, ಕತುವಾ ಮರೆಸುವ ಯತ್ನ!

      ಉನ್ನಾವೋ, ಕತುವಾ ಮತ್ತು ಸೂರತ್ ಗಳಲ್ಲಿ ನಡೆದ ಅತ್ಯಅಚಾರದ ಘಟನೆಗಳನ್ನು ಮರೆಸಲು ತಮಿಳುನಾಡು ರಾಜ್ಯಪಾಲರ ವಿಷಯವನ್ನು ಮುಂದೆ ತರಲಾಗುತ್ತಿದೆ. ಪತ್ರಕರ್ತರು ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದು ತಪ್ಪಲ್ಲವೇ ಎಂದು ಪ್ರಶ್ನಿಸಿದ್ದಾರೆ ಪವನ್ ಖೇರ ಎಂಬುವವರು.

      ನಾನು ಈ ನಡೆಯನ್ನು ಖಂಡಿಸುತ್ತೇನೆ

      ತಮಿಳುನಾಡು ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಅವರ ಅಸಭ್ಯ ವರ್ತನೆಯನ್ನು ನಾನು ವಿರೋಧಿಸುತ್ತೇನೆ. ಆಯಕಟ್ಟಿನ ಹುದ್ದೆಯನ್ನು ಹೊಂದಿರುವ ಇಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ರಾಷ್ಟ್ರಪತಿಗಳನ್ನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ ಸುಚರಿತಾ ಮೊಹಾಂತಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+