Annamalai: ತಮಿಳುನಾಡಿನಲ್ಲಿ ಅಣ್ಣಾಮಲೈ ಸಭೆಗಳಿಗೆ ಜನರೇ ಬರ್ತಿಲ್ಲ, ಆದ್ರೂ ನ್ಯಾಷನಲ್ ಮೀಡಿಯಾಗಳ ಬೊಗಳೆ ತಪ್ತಿಲ್ಲ!
ಕರ್ನಾಟಕದಲ್ಲಿ ಸಿಂಗಂ ಅಂತಾ ಕರೆಸಿಕೊಂಡು, ಪೊಲೀಸ್ ಇಲಾಖೆಯಲ್ಲಿ ಹೆಸರು ಮಾಡಿ ಈಗ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಅಣ್ಣಾಮಲೈ ಅವರು ಸುದ್ದಿಯಲ್ಲಿ ಇದ್ದಾರೆ. ಅದ್ರಲ್ಲೂ ಲೋಕಸಭಾ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ಅಣ್ಣಾಮಲೈ ಅವರನ್ನ ಹೀರೋ ರೀತಿ ಬಿಂಬಿಸಲಾಗುತ್ತಿದೆ. ಆದರೆ ಅಸಲಿಗೆ ಅಣ್ಣಾಮಲೈಗೆ ಅಷ್ಟೊಂದು ಹವಾ ಇದೆಯಾ? ಮುಂದೆ ಓದಿ.
2024ರ ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ & ಇಂಡಿಯಾ ಮೈತ್ರಿಕೂಟಗಳ ನಡುವೆ ಭಾರಿ ಪೈಪೋಟಿ ನಿರೀಕ್ಷೆ ಮಾಡಲಾಗುತ್ತಿದೆ. ಎರಡೂ ಪಕ್ಷಗಳ ನಾಯಕರ ಮಧ್ಯೆ ಮಾತಿನ ಮಹಾಯುದ್ಧ ಕೂಡ ನಡೆಯುತ್ತಿದೆ. ಅದರಲ್ಲೂ ತಮಿಳುನಾಡು ರಾಜಕೀಯದಲ್ಲಿ ಬಿಜೆಪಿ ಬಾವುಟ ನೆಡುತ್ತೆ ಅಂತಲೂ ಹೈಕಮಾಂಡ್‌ಗೆ ನಂಬಿಕೆ ಇದೆ. ಹೀಗಿದ್ದಾಗ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರ ಸಭೆಗೆ ಜನ ಬರ್ತಿಲ್ಲ. ಆದರೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುಳ್ಳು ತೋರಿಸಲಾಗುತ್ತಿದೆ ಎಂಬ ಆರೋಪ ಈಗ ಕೇಳಿಬರುತ್ತಿದೆ.

ಅಣ್ಣಾಮಲೈಗೆ ದೊಡ್ಡ ಆಘಾತ!
ತಮಿಳುನಾಡು ರಾಜಕೀಯದಲ್ಲಿ ಬಿಜೆಪಿ ಬಾವುಟ ಹಾರಿಸುವುದು ಸುಲಭದ ಮಾತು ಅಲ್ಲ. ಯಾಕಂದ್ರೆ ಬಿಜೆಪಿ ಪಕ್ಷಕ್ಕೆ ತಮಿಳುನಾಡು ರಾಜ್ಯದಲ್ಲಿ ಬಿಗಿಯಾದ ನೆಲೆ ಇಲ್ಲ. ಹೀಗಿದ್ದಾಗ ಅಲ್ಲಿ ಗೆದ್ದು ಬೀಗುವುದು ಬಿಜೆಪಿ ಸುಲಭದ ವಿಚಾರ ಅಲ್ಲ. ಹೀಗಾಗಿಯೇ ಬಿಜೆಪಿ ಲೀಡರ್ಸ್ ಅಣ್ಣಾಮಲೈ ಅವರಿಗೆ ಸಂಪೂರ್ಣ ಜವಾಬ್ದಾರಿ ನೀಡಿ ದೊಡ್ಡ ಗೆಲುವಿನ ನಿರೀಕ್ಷೆ ಇಟ್ಟು, ಕಾಯುತ್ತಿದ್ದಾರೆ. ಆದರೆ ಏನ್ ಮಾಡೋದು? ಅಣ್ಣಾಮಲೈ ಅವರ ಕಾರ್ಯಕ್ರಮ ಹಾಗೂ ಪ್ರಚಾರ ಸಭೆಗಳಿಗೆ ಜನರೇ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಾಷ್ಟ್ರೀಯ ಮಾಧ್ಯಮದಲ್ಲಿ ಓಳು?
ಇನ್ನು ಮತ್ತೊಂದು ಕಡೆ ಅಣ್ಣಾಮಲೈ ಅವರ ಕಾರ್ಯಕ್ರಮಕ್ಕೆ ಜನರೇ ಬರ್ತಿಲ್ಲ ಅಂತಾನೆ ಹೇಳಲಾಗುತ್ತಿದೆ. ಹೀಗಿದ್ದರೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಮಾತ್ರ ಅಣ್ಣಾಮಲೈ ಅವರಿಗೆ ಭಾರಿ ಜನ ಬೆಂಬಲ ಸಿಗುತ್ತಿದೆ ಎಂಬ ರೀತಿ ಬಿಂಬಿಸಲಾಗುತ್ತಿದೆ. ಈ ಮೂಲಕ ಅಣ್ಣಾಮಲೈ ಕಾರ್ಯಕ್ರಮಗಳಿಗೆ ಜನರು ಬರದೇ ಇದ್ದರೂ, ಖಾಲಿ ಖಾಲಿ ಕುರ್ಚಿ ಇದ್ದರೂ ಈ ಕುರಿತಾಗಿ ಉಲ್ಟ ಹೇಳ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಜನ ಇದ್ದಾರೆ, ಅನ್ನೋ ರೀತಿಯ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೆ. ಅಣ್ಣಾಮಲೈ ಅವರನ್ನ ಕಂಡರೆ ಪ್ರಧಾನಿ ನರೇಂದ್ರ ಮೋದಿ ಅವರ ಸಮೇತ ಆರ್‌ಎಸ್‌ಎಸ್ ಮುಖಂಡರ ತನಕ ಪ್ರತಿಯೊಬ್ಬರಿಗೂ ಭಾರಿ ಗೌರವವಿದೆ. ಬಿಜೆಪಿಗೆ ಬಂದು ಕೆಲವೇ ವರ್ಷದಲ್ಲಿ ಅಣ್ಣಾಮಲೈ ಅವರು ದೊಡ್ಡ ಹೆಸರನ್ನೂ ಸಂಪಾದಿಸಿದ್ದಾರೆ. ಅದ್ರಲ್ಲೂ ಕೆಲವು ದಿನಗಳ ಹಿಂದೆ ಅಷ್ಟೇ ಪ್ರಧಾನಿ ಮೋದಿ ಅವರು ಅಣ್ಣಾಮಲೈ ಅವರನ್ನು ಹೊಗಳಿದ್ದರು. ಇದರ ಜೊತೆ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗ ಬಿ.ಎಲ್. ಸಂತೋಷ್‌ರ, ಆಪ್ತ ಬಳಗದಲ್ಲಿ ಕೆ. ಅಣ್ಣಾಮಲೈ ಇದ್ದಾರೆ. ಹೀಗಿದ್ದರೂ ತಮಿಳುನಾಡು ರಾಜಕೀಯದಲ್ಲಿ ಈಗ ಅಣ್ಣಾಮಲೈ ಅವರಿಗೆ ಸರಿಯಾದ ಬೆಂಬಲ ಸಿಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.
ತಮಿಳುನಾಡಲ್ಲಿ ಬಿಜೆಪಿ ಕಮಾಲ್?
ಒಟ್ನಲ್ಲಿ ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗೆ 2024ರ ಲೋಕಸಭೆ ಚುನಾವಣೆಯು ಬಂದೇ ಬಿಡುತ್ತೆ. ಯಾಕಂದ್ರೆ 2024ರ ಲೋಕಸಭೆ ಚುನಾವಣೆಗೆ ಕಡಿಮೆ ಸಮಯ ಇದ್ದು. ಹೀಗಾಗಿಯೇ ದೇಶದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತೀವ್ರ ಪೈಪೋಟಿ ಶುರುಮಾಡಿವೆ. ಬಿಜೆಪಿಗೆ ಈ ಗೆಲುವು ದೊಡ್ಡ ಬಲ ತಂದುಕೊಡುವ ನಿರೀಕ್ಷೆ ಇದ್ದು, ಹೀಗಾಗಿ ಕಮಲ ಪಡೆಯು ಅಭ್ಯರ್ಥಿ ಆಯ್ಕೆಯಲ್ಲಿ ಭಾರಿ ಮುನ್ನೆಚ್ಚರಿಕೆ ವಹಿಸಿದೆ. ಆದರೂ ತಮಿಳುನಾಡು ರಾಜ್ಯದಲ್ಲಿ ಇದೆಲ್ಲವೂ ವರ್ಕೌಟ್ ಆಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ? ಈ ಮೂಲಕ ತಮಿಳುನಾಡಲ್ಲೂ ಬಿಜೆಪಿ ಬಾವುಟ ಹಾರಲಿದೆಯಾ? ಅನ್ನೋದನ್ನ ಈಗ ಕಾದು ನೋಡಬೇಕಿದೆ.












Click it and Unblock the Notifications