Lok Sabha Election Survey: ಇಂಡಿಯಾ ಮೈತ್ರಿ ಕ್ಲೀನ್ ಸ್ವೀಪ್; ಬಿಜೆಪಿ ಸಾಧನೆ ಬಿಗ್ ಝೀರೋ!
ನವದೆಹಲಿ, ಏಪ್ರಿಲ್ 16: ಲೋಕಸಭಾ ಚುನಾವಣೆಗೆ ಇಡೀ ದೇಶವೆ ಭರ್ಜರಿ ಸಿದ್ಧವಾಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಗೆಲುವಿನ ಹಾದಿಯನ್ನು ರಚಿಸಿದೆ. ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಅಬ್ಬರ ಪ್ರಚಾರವನ್ನ ನಡೆಸುತ್ತಿದ್ದು, ಇದೀಗ ಈ ಸಮಯದಲ್ಲಿ ಹಲವು ಮಾಧ್ಯಮ ಮತ್ತು ಸ್ವತಂತ್ರ ಸಂಸ್ಥೆಗಳು ಈಗಾಗಲೇ ಚುನಾವಣಾ ಫಲಿತಾಂಶದ ಮೇಲೆ ಕಣ್ಣಿಟ್ಟಿವೆ.
ಹೌದು, ಲೋಕಸಭಾ ಚುನಾವಣೆ ಹಿನ್ನೆಲೆ ಸಮೀಕ್ಷೆಗಳು ನಡೆಯುತ್ತಿದ್ದು, ಲೋಕ್ ಪೋಲ್ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ. ರಾಜ್ಯದ ನೆರೆಯ ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಯೂ ಎಲ್ಲಾ ಸ್ಥಾನಗಳಲ್ಲಿ ಜಯ ಸಾಧಿಸಲಿದ್ದು, ಬಿಜೆಪಿಯ ಸಾಧನೆ ಶೂನ್ಯ ಎಂದು ಸಮೀಕ್ಷೆ ತಿಳಿಸಿದ್ದು, ಬಿಜೆಪಿಗೆ ಬಿಗ್ ಶಾಕ್ ನೀಡಿದೆ.

ತಮಿಳುನಾಡಿನ ಎಲ್ಲಾ 39 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಇಂಡಿಯಾ ಬಣ ಜಯಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನಿಂದ ಲೋಕಸಭಾ ಸ್ಥಾನವನ್ನು ಗೆಲ್ಲಲು ಬಿಜೆಪಿ ನೇತೃತ್ವದ ಎನ್‌ಡಿಎ ವಿಫಲವಾಗಿದೆ. ಈ ಬಾರಿ ಮತ್ತೆ ಪುಟಿದೇಶಬೇಕು ಎಂದುಕೊಂಡಿದ್ದ ಬಿಜೆಪಿಗೆ ಸಮೀಕ್ಷೆಯಲ್ಲಿ ಮುಖಭಂಗವನ್ನ ಅನುಭವಿಸಿದೆ.
ಈಗಾಗಲೇ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹಲವು ವಿಷಯಗಳಲ್ಲಿ ರಾಜ್ಯ ಸರ್ಕಾರವನ್ನು ದೂಷಿಸುತ್ತಾ ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದು, ಈ ಸಮೀಕ್ಷೆಯಿಂದಾಗಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಬಿಜೆಪಿ ವಿರುದ್ಧ ರಾಜ್ಯದಲ್ಲಿ ವಿರೋಧಿ ಅಲೆ ಸೃಷ್ಟಿಯಾಗಿದ್ದು, ಕೆಲವು ಹಾಲಿ ಸಂಸದರು ಎದುರಿಸುತ್ತಿರುವ ಆಡಳಿತ ವಿರೋಧಿ ಸವಾಲುಗಳ ಹೊರತಾಗಿಯೂ ಬಿಜೆಪಿ ತಮಿಳುನಾಡಿನಲ್ಲಿ ಒಂದಕ್ಕಿ ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಲೋಕ ಪೋಲ್ ಸಮೀಕ್ಷೆಯು ತಿಳಿಸಿದೆ.
ಈ ಬಾರಿ ಕೆಲವು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿದೆ. ಕೊಯಮತ್ತೂರು ಮತ್ತು ಕನ್ನಿಯಾಕುಮಾರಿ ಸೇರಿದಂತೆ ಕೆಲವು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿತ್ತು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಲೋಕ್ ಪೋನ್ ನಡೆಸಿದ ಅಭಿಪ್ರಾಯ ಸಂಗ್ರಹವು ತಮಿಳುನಾಡಿನ ಎಲ್ಲಾ 39 ಸ್ಥಾನಗಳನ್ನು ಇಂಡಿಯಾ ಮೈತ್ರಿ ಕೂಟ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ಇನ್ನೂ ಈ ಹಿಂದೆ ಇಂಡಿಯಾ ಟುಡೇ ಗ್ರೂಪ್‌ನ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಫಲಿತಾಂಶ (MOTN) ಈ ಬಾರಿಯೂ ಬಿಜೆಪಿ ಯಾವುದೇ ಸ್ಥಾನ ಗೆಲ್ಲುವುದಿಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯನ್ನು ಡಿಸೆಂಬರ್ 15, 2023 ಮತ್ತು ಜನವರಿ 28, 2024 ರ ನಡುವೆ ನಡೆಸಲಾಗಿದೆ. ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ 35,801 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲಾ ರಾಜ್ಯಗಳ ಫಲಿತಾಂಶವನ್ನು ಇಂಡಿಯಾ ಟುಡೆ ಪ್ರಕಟಿಸಿದ್ದು, ಇದೀಗ ಲೋಕ್‌ಪೋನ್ ಸಹ ಬಿಜೆಪಿ ಸಾಧನೆ ಶೂನ್ಯ ಎಂದು ಹೇಳಿದೆ.












Click it and Unblock the Notifications