ಅಸಭ್ಯವಾಗಿ ವರ್ತಿಸಿದ ಪೊಲೀಸರಿಗೇ ಪಂಚುಕೊಟ್ಟ ಗಟ್ಟಿಗಿತ್ತಿ ಈಕೆ!

Posted By:
Subscribe to Oneindia Kannada

ರೋಹ್ಟಕ್, ಏಪ್ರಿಲ್ 7 : ಅಸಭ್ಯವಾಗಿ ವರ್ತಿಸಿದ್ದಕ್ಕೆ ಪೊಲೀಸರಿಗೇ ಮಹಿಳೆಯೊಬ್ಬರು ಪಂಚುಕೊಟ್ಟ ಘಟನೆ ಹರ್ಯಾಣದ ರೋಹ್ಟಕ್ ನಲ್ಲಿ ನಡೆದಿದೆ.

ಮಗಳಿರಬೇಕು ಮನೆಗೆ, ಹೆಣ್ಣುಮಗುವಿಗೀಗ ಡಿಮ್ಯಾಂಡೋ, ಡಿಮ್ಯಾಂಡು!

ಕರಾಟೆ ಪಟುವೂ ಆಗಿದ್ದ ಈ ಗಟ್ಟಿಗಿತ್ತಿ ಹುಡುಗಿ, ತನಗೆ ನಿರಂತರವಾಗಿ ತೊಂದರೆ ನೀಡುತ್ತಿದ್ದ ಟ್ರಾಫಿಕ್ ಪೊಲೀಸ್ ಗೆ ಚೆನ್ನಾಗಿ ಹೊಡೆದು ಪಾಠ ಕಲಿಸಿದ್ದಾಳೆ. ಶೇರ್ಡ್ ಆಟೋನಲ್ಲಿ ಚಲಿಸುತ್ತಿದ್ದ ಸಮಯದಲ್ಲಿ ಟ್ರಾಫಿಕ್ ಪೊಲೀಸ್ ವೊಬ್ಬ ಆಕೆಯ ಬಳಿ ಸ್ನೇಹ ಬಯಸುತ್ತಿರುವುದಾಗಿ ಹೇಳಿದ್ದಾನೆ. ನಂತರ ಆಕೆಯ ಬಳಿ ಫೋನ್ ನಂಬರ್ ಕೇಳಿದ್ದಾನೆ. ಕೊಡದೆ ಇದ್ದಾಗ ಒತ್ತಾಯಿಸಿ, ಅಸಭ್ಯವಾಗಿ ವರ್ತಿಸಿದ್ದಾನೆ.

ಮೊದಲೇ ಕರಾಟೆ ಕ್ಲಾಸ್ ಮುಗಿಸಿ ಆಟೋದಲ್ಲಿ ಬರುತ್ತಿದ್ದ ಹುಡುಗಿಗೆ ಕೋಪ ನೆತ್ತಿಗೇರಿದೆ. ಹಿಂದೆ ಮುಂದೆ ನೋಡದೆ ಪೊಲೀಸಪ್ಪನಿಗೆ ಚೆನ್ನಾಗಿ ಥಳಿಸಿದ್ದಾಳೆ.

Rohtak girl repeatedly slaps traffic policeman after he harassed her

ನಂತರ ಈ ಕುರಿತು ಹತ್ತಿರದ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀದಿದ್ದಾಳೆ. ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ ಸ್ಥಳೀಯ ಪೊಲೀಸರು, ಈ ಟ್ರಾಫಿಕ್ ಪೊಲಿಸ್ ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rohtak girl repeatedly slaps traffic policeman after he harassed her by asking for friendship & her number, during a ride in a shared auto. Girl was returning from Karate classes when incident took place. Police says traffic policeman has been suspended & probe is on.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ