Bengaluru Viral: ಬೆಂಗಳೂರು ಊರ ಹಬ್ಬಕ್ಕೆ ನಾರ್ಥಿ ವ್ಯಂಗ್ಯ ಕನ್ನಡಿಗರ ತಿರುಗೇಟು, "ಈ ಊರಿನವರಿಗೆ ಮಾಡೋಕೆ ಕೆಲಸ ಇಲ್ವಾ"

Bengaluru Viral: ಬೆಂಗಳೂರಿನ ವಿವಿಧ ವಿಷಯಗಳ ಬಗ್ಗೆ ಚಕಾರ ತೆಗೆಯುತ್ತಿದ್ದ ನಾರ್ಥಿಗಳು ಇದೀಗ ಬೆಂಗಳೂರಿನ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆಯೂ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಬೆಂಗಳೂರಿನ ಊರ ಹಬ್ಬದ ಬಗ್ಗೆ ನಾರ್ಥಿ / ವಲಸಿಗರೊಬ್ಬರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಟ್ವೀಟ್‌ಗೆ ಕನ್ನಡಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. Heer Shingala ಎನ್ನುವ ಖಾತೆಯಿಂದ ಯುವತಿಯೊಬ್ಬಳು ಮಾಡಿರುವ ಟ್ವೀಟ್ ವೈರಲ್ ಆಗಿದ್ದು, ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ "ಬೆಂಗಳೂರಿನಲ್ಲಿ ಊರ ಹಬ್ಬವಂತೆ, ಇದರ ಅವಶ್ಯಕತೆಯಾದರೂ ಏನಿದೆ ಎಂಬರ್ಥದಲ್ಲಿ" ಮಾಡಿರುವ ಟ್ವೀಟ್ ಕನ್ನಡಿಗರ ಕೆಂಗಣಿಗ್ಗೆ ಗುರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಾರ್ಥಿ ಯುವತಿ ಮಾಡಿರುವ ಟ್ವೀಟ್ ಏನು, ಇದಕ್ಕೆ ಕನ್ನಡಿಗರು ಹೇಳಿರುವುದು ಏನು ಎನ್ನುವ ವಿವರ ಇಲ್ಲಿದೆ.

Bengaluru Viral: ಬೆಂಗಳೂರಿನ ಊರ ಹಬ್ಬದ ಬಗ್ಗೆ ನಾರ್ಥಿ ವ್ಯಂಗ್ಯ

ಇನ್ನು ಬೆಂಗಳೂರಿನ ಊರ ಹಬ್ಬದ ಬಗ್ಗೆ ನಾರ್ಥಿ ಯುವತಿ "ಅಯ್ಯೋ, ಜೆ.ಪಿ. ನಗರ 7ನೇ ಹಂತದಲ್ಲಿ ಭಾರೀ ಗದ್ದಲವಾಗಿದೆ. ಈ ಸಮಯದಲ್ಲೂ ಪಟಾಕಿ, ಡ್ರಮ್‌ ಸೇರಿದಂತೆ ಎಲ್ಲವೂ ಜೋರಾಗಿ ನಡೆಯುತ್ತಿದೆ. ಏನೋ ಊರ ಹಬ್ಬವಂತೆ. ಈ ಜನರಿಗೆ ಇಷ್ಟು ರಾತ್ರಿ ಸಮಯದಲ್ಲಿ ಇದಕ್ಕೆ ಹೇಗೆ ಅನುಮತಿ ಕೊಡಲಾಗಿದೆ. ತೆರಿಗೆ ಪಾವತಿಸುವ ನಾಗರಿಕರಿಗೆ ಇಂದು ಕೆಲಸದ ದಿನವಲ್ಲವೇ ಎಂದು ನಾರ್ಥಿ ಯುವತಿ ಮಾಡಿರುವ ಪೋಸ್ಟ್‌ ಇದೀಗ ವೈರಲ್ ಆಗುತ್ತಿದೆ. ಇದಕ್ಕೆ ಕನ್ನಡಿಗರು ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಊರ ಹಬ್ಬ ಮಾಡಿದ್ರೆ ವಲಸಿಗರಿಗೆ ತೊಂದರೆ! ಇನ್ನು ಕೆಲವೇ ವರ್ಷಗಳು ಅಷ್ಟೇ. ಕರ್ನಾಟಕದ ಯಾವ ಹಳ್ಳಿಯಲ್ಲೂ ಊರ ಹಬ್ಬ ಮಾಡದಂಗೆ ಹಿಂದಿ ಹೈಕಮಾಂಡ್ ಪಕ್ಷಗಳು ವಲಸಿಗರನ್ನು ತುಂಬಿಸುತ್ತವೆ ಎಂದು ಕನ್ನಡಿಗ ಸಿದ್ದೇಗೌಡ ಶ್ಯಾಮ್ ಪ್ರಸಾದ್ ಎನ್ನುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bengaluru Viral

ಆಕ್ರೋಶ ಹೊರ ಹಾಕಿದ ಕನ್ನಡಿಗರು

ಪ್ರಶಾಂತ್ ಮಾಲೂರು ಎನ್ನುವವರು, ನಾವು ಅವರನ್ನು ಬಿಟ್ಟುಕೊಂಡಿದ್ದು ತಪ್ಪಲ್ಲ ಆದರೆ ಅವರಿಗೆ ನಮ್ಮ ಭಾಷೆ ಕಲಿಸುವ ಬದಲು ನಾವೇ ಅವರ ಭಾಷೆ ಕಲಿತು ಮಾತನಾಡಿದಾಗ, ಸ್ಥಳೀಯ ಸೊಗಡು ಹೇಗೆ ಗೊತ್ತಾಗುತ್ತೆ. ಇಷ್ಟು ದಿನ ಕನ್ನಡ ಯಾಕೆ ಕಲಿಯಬೇಕು, ಮಾತಾಡಬೇಕು ಎನ್ನುವವರಿದ್ದರು ಇನ್ಮೇಲೆ ಆಗುವ ಹಬ್ಬ ಅಂತಯೇ ಎಲ್ಲದಕ್ಕೂ ಆಕ್ಷೇಪಣೆ ಮಾಡುತ್ತಾರೆ. ಅದನ್ನು ಇಲ್ಲಿ ಪೋಸ್ಟ್ ಹಾಕಿ ಸುಮ್ಮನಾಗೋಣ. ಕನ್ನಡ ಮಾತಾಡಲು ಪ್ರೇರೇಪಿಸುವುದಿಲ್ಲ, ವಾತಾವರಣ ಸೃಷ್ಟಿ ಮಾಡಲ್ಲ... ಹೀಗಿದ್ದಾಗ ಅವರಿಗೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಅಭಿಮಾನ ಬರಬೇಕು ಎಂದಿದ್ದಾರೆ. ಕೃಷ್ಣನ್ ವೈದ್ಯನಾಥನ್ ಎನ್ನುವವರು, ಪೋಸ್ಟ್‌ನಲ್ಲಿ ಅವರಿಗೆ ಉತ್ತರಗಳನ್ನು ನೀಡಬೇಕು ಎಂದಿದ್ದಾರೆ.

ಹರಿಪ್ರಸಾದ್ ಆರ್ ಎನ್ನುವವರು, ಮಧ್ಯರಾತ್ರಿ ಟೈಟಾಗಿ ಕುಡಿದುಕೊಂಡು ಬಂದು ರೋಡಲ್ಲಿ ಬೀಳುವ ಈ ನಾರ್ಥಿಗಳು ನಮ್ಮ ನಾಡಿನ ಊರು ಹಬ್ಬದ "ಈ ಹೊತ್ತಿನಲ್ಲಿ ಆಚರಣೆ ಮಾಡಬಾರದು" ಅಂತ ಬುದ್ದಿ ಹೇಳಲು ಬಂದಿದ್ದಾರೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ನಮ್ಮ ದಕ್ಷಿಣ ಭಾರತದಲ್ಲಿ ಯಾವುದರಲ್ಲಿಯೂ ಅವರದ್ದೇ ಆದ ಹಬ್ಬ ಹರಿದಿನ ಇದೆ. ಕಾರಣ ನಾವು ನಮ್ಮ ನೆಮ್ಮದಿಗಾಗಿ ನಮ್ಮಲ್ಲಿ ಆಚರಣೆಯನ್ನು ಆದ ಕಾರಣ ತೊಂದ್ರೆ ಅನ್ನುವವರು ತಮ್ಮ ತಮ್ಮ ಊರುಗಳಿಗೆ ಹೋಗುವುದು ಉತ್ತಮ ಎಂದು ತಿರುಗೇಟು ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+