Adani: ಗಣಿಗಾರಿಕೆ ಪ್ರದೇಶದಲ್ಲಿ 16 ಲಕ್ಷ ಸಸಿಗಳಿಂದ ಪರಿಸರ ಪುನಶ್ಚೇತನ: ಯೋಜನೆಗೆ ಭಾರೀ ಮೆಚ್ಚುಗೆ

ಛತ್ತೀಸ್‌ಗಢದ ಸುರ್ಗುಜ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ಪ್ರದೇಶವನ್ನು ಹಸಿರುಮಯವಾಗಿಸಲು ಅದಾನಿ ಸಮೂಹವು ಮುಂದಾಗಿದೆ. ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು ಸುರ್ಗುಜದ ಪರ್ಸಾ ಈಸ್ಟ್ ಮತ್ತು ಕಾಂತ ಬಸನ್ (PEKB) ಗಣಿಯಲ್ಲಿ ಗಿಡಗಳನ್ನು ನೆಡುವ ಕಾರ್ಯ ಆರಂಭಿಸಿದೆ. ಇಲ್ಲಿನ 568 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಸುಮಾರು 1.6 ದಶಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದು, ಪೋಷಣೆ ಮಾಡಲಾಗುತ್ತಿದೆ. ಈ ಮೂಲಕ ಅದಾನಿ ಕಂಪನಿಯು ಪರಿಸರಸ್ನೇಹಿ ಕಾರ್ಯಕ್ಕೆ ಮುಂದಾಗಿದೆ.

ಈ ಗಣಿ ಪ್ರದೇಶವನ್ನು ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನ್ ನಿಗಮದ (RVUNL) ಪರವಾಗಿ ನಿರ್ವಹಿಸಲಾಗುತ್ತಿದೆ. ಅದಾನಿ ಕಂಪನಿಯು ಗಣಿಗಾರಿಕೆ ಮುಗಿದ ಬಳಿಕ ಭೂಮಿಯನ್ನು ಮರುಸ್ಥಾಪಿಸುವ, ಹಸಿರುಮಯವಾಗಿ ಪರಿವರ್ತಿಸುವ ಗುರಿ ಹೊಂದಿದೆ. ಈ ದಶಕದ ಕೊನೆಯ ವೇಳೆಗೆ 4 ದಶಲಕ್ಷಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಯೋಜನೆ ಇದೆ. ಪರಿಸರವನ್ನು ಮರುಸ್ಥಾಪಿಸುವುದು ಮತ್ತು ಜೀವವೈವಿಧ್ಯತೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

Adani s PEKB Mine Plants

ಗಣಿಗಾರಿಕೆಯ ನಂತರ ಅರಣ್ಯೀಕರಣಕ್ಕೆ ಒತ್ತು

ಗಣಿಗಾರಿಕೆ ನಡೆಸಲು ಈಗಾಗಲೇ ಕತ್ತರಿಸಲಾದ ಪ್ರತಿ ಒಂದು ಮರಕ್ಕೆ ಬದಲಾಗಿ 40 ಸಸಿಗಳನ್ನು ನೆಡಲಾಗುತ್ತಿದೆ. ಸಾಲ್, ಮಹುವಾ, ಟೆಂಡು, ಅಮಲ್ತಾಸ್ ಮತ್ತು ಸಿದ್ಧ ಜಾತಿಯ ಮರಗಳನ್ನು ಇಲ್ಲಿ ನೆಡಲಾಗಿದೆ. ಈ ಸಸಿಗಳ ಬದುಕುಳಿಯುವ ಪ್ರಮಾಣವು ಸುಮಾರು 88 ಪ್ರತಿಶತದಷ್ಟಿದೆ ಎಂದು ಸಂಸ್ಥೆ ವರದಿ ಮಾಡಿದೆ. ಕೇಂದ್ರ ಕಲ್ಲಿದ್ದಲು ಸಚಿವಾಲಯವು ಅರಣ್ಯೀಕರಣದ ಪ್ರಯತ್ನವನ್ನು ಶ್ಲಾಘಿಸಿದೆ.

ಈ ಕಾರ್ಯವನ್ನು ಸಚಿವಾಲಯವು ಒಂದು ಗಮನಾರ್ಹ ಮಾದರಿ ಎಂದು ಬಣ್ಣಿಸಿದೆ. ಕಲ್ಲಿದ್ದಲು ತೆಗೆದ ನಂತರವೂ ಪರಿಸರದ ಕಡೆಗೆ ತೋರಿದ ಕಾಳಜಿಗೆ ಸಚಿವಾಲಯವು ಮೆಚ್ಚುಗೆ ಮಾತುಗಳನ್ನಾಡಿದೆ. ಈ ಗಣಿ ಈಗ ಹಸಿರುಮಯ ತಾಣವಾಗಿ ಬದಲಾಗಲಿದೆ. ಸುಸ್ಥಿರ ಭವಿಷ್ಯಕ್ಕಾಗಿ ಇದು ಒಂದು ಉದಾಹರಣೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸಂಸ್ಥೆಯು 3.5 ಹೆಕ್ಟೇರ್ ನರ್ಸರಿಯನ್ನು ಅಭಿವೃದ್ಧಿಪಡಿಸಿದೆ. ಇಲ್ಲಿ ಸುಮಾರು 5,00,000 ಸಸಿಗಳನ್ನು ಬೆಳೆಸಲಾಗುತ್ತಿದೆ. ಸಾಲ್ ಅರಣ್ಯಗಳ ಪುನರುಜ್ಜೀವನವು ಯಶಸ್ವಿಯಾಗಿ ನಡೆದಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಛತ್ತೀಸ್‌ಗಢದ ಸುರ್ಗುಜ, ಕೋರಿಯಾ, ಬಲರಾಮ್‌ಪುರ ಮತ್ತು ಸೂರಜ್‌ಪುರ ಅರಣ್ಯ ವಿಭಾಗಗಳಲ್ಲಿ 4,000 ಹೆಕ್ಟೇರ್‌ಗೂ ಹೆಚ್ಚು ಜಾಗದಲ್ಲಿ ಅರಣ್ಯೀಕರಣ ಕಾರ್ಯ ಪ್ರಗತಿಯಲ್ಲಿದೆ.

ಗಣಿ ಪ್ರದೇಶದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಛತ್ತೀಸ್‌ಗಢ ರಾಜ್ಯ ಸರ್ಕಾರಕ್ಕೆ 259 ಕೋಟಿ ರೂಪಾಯಿಗೂ ಹೆಚ್ಚು ಹಣ ಒದಗಿಸಲಾಗಿದೆ. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ನಿರ್ವಹಣೆಗೆ ಈ ಹಣ ಬಳಕೆಯಾಗಲಿದೆ. ಅಧಿಕಾರಿಗಳ ಪ್ರಕಾರ, ಗಣಿ ಕಾರ್ಯಾಚರಣೆಯ ಜೊತೆಗೆ ಸ್ಥಳೀಯ ಅಭಿವೃದ್ಧಿಗೂ ಸಂಸ್ಥೆ ಒತ್ತು ನೀಡಿದೆ. ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದಂತಹ ಕಾರ್ಯಕ್ರಮಗಳನ್ನು ಸ್ಥಳೀಯ ಜನರಿಗಾಗಿ ನಡೆಸಲಾಗುತ್ತಿದೆ ಎಂದು ಅದಾನಿ ಕಂಪನಿಯು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+