ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ಮತದಾನ ಆರಂಭ ಆಗಿದ್ದು, ಕೋಟ್ಯಂತರ ಭಾರತೀಯ ಪ್ರಜೆಗಳು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹೀಗಿದ್ದಾಗ ಸಿನಿಮಾ ನಟ & ನಟಿಯರು ಕೂಡ ತಮ್ಮ ಹಕ್ಕು ಚಲಾಯಿಸಿ, ಭಾರತದ ಭವಿಷ್ಯ ಬರೆಯಲು ಕೈಜೋಡಿಸಿದ್ದಾರೆ. ಅದರಲ್ಲೂ ತಮಿಳುನಾಡಿನಲ್ಲಿ ಸಿನಿಮಾ ತಾರೆಯರ ದಂಡೇ ಮತಹಾಕಿ ತಮ್ಮ ಹಕ್ಕು ಚಲಾಯಿಸಿದೆ.
ಭಾರತ ಇಡೀ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಭಾರತದ ಲೋಕಸಭೆ ಚುನಾವಣೆಗೆ ಇಂದಿನಿಂದ ಮೊದಲನೇ ಹಂತದಲ್ಲಿ ಮತದಾನವು ಆರಂಭವಾಗಿದೆ. ಒಟ್ಟಾರೆ 21 ರಾಜ್ಯ & ಕೇಂದ್ರಾಡಳಿ ಪ್ರದೇಶಗಳ 102 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಒಟ್ಟಾರೆ 1,625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಹಲವು ಪ್ರಮುಖ ರಾಜ್ಯದಲ್ಲಿ ಈ ದಿನ ಮತದಾನ ನಡೆಯುತ್ತಿದೆ. ಅದೇ ರೀತಿ ಸಿನಿಮಾ ಸ್ಟಾರ್ಸ್ ಕೂಡ ಮತ ಹಾಕಿ ತಮ್ಮ ಕರ್ತ್ಯವ್ಯ ಮರೆದಿದ್ದಾರೆ. ಹಾಗಾದ್ರೆ ಯಾರೆಲ್ಲ ಸಿನಿ ನಟ & ನಟಿಯರು ಮತ ಹಾಕಿದ್ದಾರೆ? ಮುಂದೆ ಓದಿ.

ರಜನಿಕಾಂತ್ + ರಜನಿಕಾಂತ್ ಅಳಿಯ!
ಸೂಪರ್ ಸ್ಟಾರ್ ರಜನಿಕಾಂತ್ ಅವರು, ತಮಿಳುನಾಡಿನಲ್ಲಿ ಮತ ಚಲಾವಣೆ ಮಾಡಿದರು. ಚೆನ್ನೈನಲ್ಲಿ ನಟ ರಜನಿಕಾಂತ್ ಅವರು ಮತ ಹಾಕಿ, 2024ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯನಾದ ಧನುಷ್ ಅವರು ಮತದಾನ ಮಾಡಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಹಾಗೇ ಬಹುಭಾಷಾ ನಟ ವಿಜಯ್ ಸೇತುಪಥಿ ಅವರು ಮತದಾನ ಮಾಡಿದರು. ಜೊತೆಗೆ ಹಲವು ನಟ & ನಟಿಯರು ತಮ್ಮ ಹಕ್ಕು ಚಲಾಯಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಿದ್ದಾರೆ.
ಯಾವ ಯಾವ ರಾಜ್ಯದಲ್ಲಿ ಎಲೆಕ್ಷನ್?
ಇಂದು ತಮಿಳುನಾಡು ರಾಜ್ಯದಲ್ಲಿ ಒಟ್ಟು ಎಲ್ಲಾ 39 ಲೋಕಸಭೆ ಕ್ಷೇತ್ರಗಳಿಗೂ ಚುನಾವಣೆಯು ನಡೆಯುತ್ತಿದೆ. ಹಾಗೇ, ರಾಜಸ್ಥಾನದ 25 ಸ್ಥಾನಗಳ ಪೈಕಿ 12, ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 8 ಸ್ಥಾನಕ್ಕೆ, ಮಧ್ಯಪ್ರದೇಶದ 29 ಸ್ಥಾನಗಳ ಪೈಕಿ 6 ಸ್ಥಾನಕ್ಕೆ, ಮಹಾರಾಷ್ಟ್ರದಲ್ಲಿನ 48 ಸ್ಥಾನ ಪೈಕಿ 5 ಸ್ಥಾನಕ್ಕೆ, ಉತ್ತರಾಖಂಡದ ಎಲ್ಲಾ 5 ಸ್ಥಾನಕ್ಕೆ, ಅಸ್ಸಾಂ 14 ಸ್ಥಾನಗಳ ಪೈಕಿ 5 ಸ್ಥಾನಕ್ಕೆ, ಬಿಹಾರ ರಾಜ್ಯದ ಒಟ್ಟು 40 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಹಾಗೇ ಪಶ್ಚಿಮ ಬಂಗಾಳ ರಾಜ್ಯದ 42 ಸ್ಥಾನಗಳ ಪೈಕಿ 3 ಸ್ಥಾನಗಳಿಗೆ, ಅರುಣಾಚಲ ಪ್ರದೇಶದ 2 ಸ್ಥಾನ ಪೈಕಿ ಎಲ್ಲಾ 2 ಸ್ಥಾನಕ್ಕೆ, ಮಣಿಪುರದ 2 ಸ್ಥಾನಗಳ ಪೈಕಿ ಎಲ್ಲಾ 2 ಸ್ಥಾನಕ್ಕೆ ಚುನಾವಣೆ ಆರಂಭ ಆಗಿದೆ. ಹಾಗೇ ಮೇಘಾಲಯದ 2 ಸ್ಥಾನಗಳ ಪೈಕಿ ಎಲ್ಲಾ 2, ಛತ್ತೀಸ್‌ಘಡದ 11 ಸ್ಥಾನ ಪೈಕಿ 1 ಸ್ಥಾನಕ್ಕೆ, ಮಿಜೋರಾಂ ರಾಜ್ಯದ ಎಲ್ಲಾ 1 ಸ್ಥಾನಕ್ಕೆ, ನಾಗಾಲ್ಯಾಂಡ್ ರಾಜ್ಯದ ಎಲ್ಲಾ 1 ಸ್ಥಾನಕ್ಕೆ, ಸಿಕ್ಕಿಂನ ಎಲ್ಲಾ 1 ಸ್ಥಾನಕ್ಕೆ, ತ್ರಿಪುರದ 2 ಸ್ಥಾನ ಪೈಕಿ 1 ಸ್ಥಾನಕ್ಕೆ ಇಂದು ಮತದಾನ ನಡೆಯುತ್ತಿದೆ. ಜಮ್ಮು & ಕಾಶ್ಮೀರದ 5 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಮತದಾನವು ನಡೆಯುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಎಲ್ಲಾ 1 ಸ್ಥಾನ, ಲಕ್ಷದ್ವೀಪದ ಎಲ್ಲಾ 1 ಸ್ಥಾನಕ್ಕೆ, ಪುದುಚೇರಿಯ ಒಂದು ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ.












Click it and Unblock the Notifications