Lok Sabha Election: ಅಟಲ್, ಮನಮೋಹನ್, ಮೋದಿ ವಿರುದ್ಧ ಸ್ಪರ್ಧಿಸಿರುವ ಎಲೆಕ್ಷನ್ ಕಿಂಗ್: ಇವರ ಹೆಸರಿನಲ್ಲಿದೆ ಲಿಮ್ಕಾ ದಾಖಲೆ
ಒಂದು ಚುನಾವಣೆಯಲ್ಲಿನ ಸೋಲು ಅಭ್ಯರ್ಥಿಗಳಿಗೆ ಅರಿಗಿಸಿಕೊಳ್ಳಲು ವರ್ಷವೇ ಬೇಕಾಗುತ್ತದೆ. ಅಂತಹದರಲ್ಲಿ ಈ ವ್ಯಕ್ತಿ ಚುನಾವಣೆಗಳನ್ನು ಎದುರಿಸಿಯೇ ಹೆಸರು ವಾಸಿಯಾಗಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದಲೇ ಕಣಕ್ಕೆ ಇಳಿಯುತ್ತಾನೆ. ಆದರೆ, ಈ ವ್ಯಕ್ತಿಗೆ ಸ್ಪರ್ಧಿಸುವ ಮುನ್ನವೇ ಫಲಿತಾಂಶ ಏನಾಗುತ್ತದೆ ಎಂಬ ಬಗ್ಗೆ ಅರಿವು ಇರುತ್ತದೆ. ಇನ್ನು ಹಲವು ಸೆಲೆಬ್ರಿಟಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಇವರು ಚುನಾವಣೆಗಳಿಗೆ ಸ್ಪರ್ಧಿಸಿಯೇ ಸೆಲೆಬ್ರಿಟಿ ಆಗಿದ್ದಾರೆ.
ಚುನಾವಣೆ ಅಂದರೆ ಹಾಗೆ ಕಣ್ಣು ಹಾಗೂ ಕಿವಿಗಳಿಗೆ ಹಬ್ಬ.. ಪ್ರಜಾಪ್ರಭುತ್ವದ ಜಾತ್ರೆಯಲ್ಲಿ ಎಲ್ಲರೂ ಹಿಗ್ಗಿನಿಂದ ಪಾಲ್ಗೊಳುತ್ತಾರೆ. ಕಣದಲ್ಲಿರುವ ಅಭ್ಯರ್ಥಿಗಳ ಪೋಸ್ಟರ್‌ಗಳು, ಬ್ಯಾನರ್‌ಗಳು, ರೋಡ್ ಶೋಗಳು ಚುನಾವಣೆಯ ರಂಗನ್ನು ಹೆಚ್ಚಿಸುತ್ತವೆ. ಚುನಾವಣೆ ಎಂಬ ಪದ ಕಿವಿಗಳ ಮೇಲೆ ಬೀಳುತ್ತಿದ್ದಂತೆ ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರಿನವರಾದ ಕೆ. ಪದ್ಮರಾಜನ್ ಅಲರ್ಟ್ ಆಗುತ್ತಾರೆ.

ಎಲೆಕ್ಷನ್ ಕಿಂಗ್ ಯಾರು?
ಭಾರತದ ಸಂವಿಧಾನ ಹೇಳುವಂತೆ ಚುನವಾಣೆಗೆ ಸ್ಪರ್ಧಿಸಲು ಅರ್ಹನಾದ ವ್ಯಕ್ತಿ ಯಾವುದೇ ಕ್ಷೇತ್ರದಿಂದಲಾದರೂ ಸ್ಪರ್ಧಿಸಬಹುದು. ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಕೆ. ಪದ್ಮರಾಜನ್ ಭಾರತದಲ್ಲಿ ಒಟ್ಟು 239 ಚುನಾವಣೆಗಳನ್ನು ಸ್ಫರ್ಧಿಸಿ ಸೋಲನ್ನು ಕಂಡಿದ್ದಾರೆ. ಅಲ್ಲದೆ ಭಾರತದಲ್ಲಿ ಅತಿ ಹೆಚ್ಚು ಚುನಾವಣೆಗಳನ್ನು ಎದುರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ನಮೂದಿಸಿಕೊಂಡಿದ್ದಾರೆ. ಕೆ. ಪದ್ಮರಾಜನ್ ದೇಶದ 12 ರಾಜ್ಯಗಳ ವಿವಿಧ ಕ್ಷೇತ್ರಗಳಿಂದ ಚುನಾವಣೆ ಸ್ಪರ್ಧಿಸಿದ್ದರೆ. ಬರೀ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಅಷ್ಟೆ ಇವರು ಸ್ಪರ್ಧಿಸಿಲ್ಲ. ರಾಷ್ಟ್ರಪತಿ ಚುನಾವಣೆಯಲ್ಲೂ ಒಂದು ಕೈ ನೋಡಿಕೊಂಡಿದ್ದಾರೆ.
ವೃತ್ತಿ ಏನು?
ಇಷ್ಟು ಚುನಾವಣೆಗೆ ಸ್ಪರ್ಧಿಸಿದ್ದ ಕೆ. ಪದ್ಮರಾಜನ್ ಎಲೆಕ್ಷನ್ ಕಿಂಗ್ ಎಂದೇ ಖ್ಯಾತಿ. ಮಧ್ಯಮ ಕುಟುಂಬದಿಂದ ಬರುವ ಇವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಹವ್ಯಾಸವನ್ನು ಬೆಳಿಸಿಕೊಂಡರು. ಕೆ. ಪದ್ಮರಾಜನ್ ಮೂಲ ವೃತ್ತಿ ಸೈಕಲ್ ರಿಪೇರಿ ಕಾರ್ಯ. ಈ ವೃತ್ತಿಯನ್ನು ಮಾಡಿಕೊಂಡೆ ಇವರು ಇಷ್ಟು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಇವರಿಗೆ ಮೂಲ ಬಂಡವಾಳ ಸೈಕಲ್ ರಿಪೇರಿ. ಈಗಾಲೇ ಚುನಾವಣೆಗಳಲ್ಲಿ ಸ್ಪರ್ಧಿಸಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಸೈಕಲ್ ಶಾಪ್‌ನಲ್ಲಿ ಕುಳಿತಾಗ ಒಂದು ದಿನ ಇವರಿಗೆ ಚುನಾವಣೆಗಳನ್ನು ಸ್ಪರ್ಧಿಸುವ ಆಸೆ ಹುಟ್ಟಿತು. ಇದನ್ನು ಇವರು ತಮ್ಮ ಸ್ನೇಹಿತರ ಎದುರು ಹೇಳಿದಾಗ ಗೇಲಿ ಮಾಡಿದರು. ಆದರೂ ಧೃತಿ ಗೆಡದೆ ಚುನಾವಣೆಗಳಿಗೆ ಸ್ಪರ್ಧಿಸಲು ಮುಂದಾದರು. ಇವರ ಈ ಹವ್ಯಾಸ ಇವರ ಕುಟುಂಬಕ್ಕೆ ಕೆಲವೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.
ಯಾರ ಯಾರ ವಿರುದ್ಧ ಸ್ಪರ್ಧೆ?
ಕೆ. ಪದ್ಮರಾಜನ್ 1991ರಲ್ಲಿ ಆಂಧ್ರಪ್ರದೇಶದ ನಂದ್ಯಾಲ್‌ನಿಂದ ಉಪಚುನಾವಣೆಗೆ ಪಿವಿ ನರಸಿಂಹರಾವ್ ವಿರುದ್ಧ 2004 ರಲ್ಲಿ ಲಕ್ನೋದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಿರುದ್ಧ, 2007 ಮತ್ತು 2013 ರಲ್ಲಿ ಅಸ್ಸಾಂನಲ್ಲಿ ಮನಮೋಹನ್ ಸಿಂಗ್ ಮತ್ತು 2014 ರಲ್ಲಿ ವಡೋದರಾದಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದಾರೆ. ಇಷ್ಟೇ ಅಲ್ಲದೆ ಮಾಜಿ ರಾಷ್ಟ್ರಪತಿಗಳಾದ ಕೆಆರ್ ನಾರಾಯಣನ್, ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಮತ್ತು ರಾಮನಾಥ್ ಕೋವಿಂದ್ ಹಾಗೂ ಹಾಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧವೂ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ತಮಿಳುನಾಡಿನಲ್ಲಿ ಅವರು ಕೆ. ಕರುಣಾನಿಧಿ, ಜೆ. ಜಯಲಲಿತಾ, ಎಂಕೆ ಸ್ಟಾಲಿನ್ ಮತ್ತು ಇಕೆ ಪಳನಿಸ್ವಾಮಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ,ವಿರುದ್ಧವೂ ಚುನಾವಣೆಗೆ ಸ್ಪರ್ಧಿಸಿದ್ದಾರೆ.












Click it and Unblock the Notifications