ನಿಮ್ಮ ಜನ್ಮರಾಶಿಗೆ ನಿಜವಾದ ಮನರಂಜನೆ ಯಾವುದು? 12 ರಾಶಿಗಳ ಗುಟ್ಟನ್ನು ಹೇಳುತ್ತದೆ ಜ್ಯೋತಿಷ್ಯ!

ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಜನ್ಮರಾಶಿಯವರಿಗೂ ಸಂತೋಷ, ಮನರಂಜನೆ ಮತ್ತು ವಿಶ್ರಾಂತಿ ಪಡೆಯುವ ವಿಧಾನ ವಿಭಿನ್ನವಾಗಿರುತ್ತದೆ. ಜ್ಯೋತಿಷ್ಯದಲ್ಲಿ ಹೇಳಲಾಗುವ ಸಾಮಾನ್ಯ ಲಕ್ಷಣಗಳಿವು. ವ್ಯಕ್ತಿಯಿಂದ ವ್ಯಕ್ತಿಗೆ ಇದು ತುಸು ಭಿನ್ನವಾಗಿರಬಹುದು. ಆದರೆ ಜನ್ಮರಾಶಿಯ ಗ್ರಹ, ದೇವತೆ ಒಂದೇ ಆಗಿರುವುದರಿಂದ ಸ್ವಭಾವ ಹೆಚ್ಚು ಕಡಿಮೆ ಸಮಾನ ಅನಿಸುವ ಸಾಧ್ಯತೆಗಳಿವೆ. ಹಾಗದರೆ ನಿಮ್ಮ ಜನ್ಮರಾಶಿಗೆ ನಗು ತರಿಸುವ, ಮನರಂಜನೆ ನೀಡುವ ಚಟುವಟಿಕೆ ಯಾವುದು? ಇಲ್ಲಿದೆ ನೋಡಿ.

ಮೇಷ (Aries): ಸಾಹಸಮಯ ಘಟನೆಗಳು, ಸ್ನೇಹಿತರ ಜೊತೆ ಮಸ್ತಿ, ಸ್ಪೋರ್ಟ್ಸ್ ಮತ್ತು ಹಾಸ್ಯಭರಿತ ಸ್ಪರ್ಧೆಗಳು ಇವರನ್ನು ಹೊಟ್ಟೆ ತುಂಬಾ ನಗಿಸುತ್ತವೆ. ಟ್ರೆಕ್ಕಿಂಗ್, ಜಿಮ್ ಅಥವಾ ಔಟ್‌ಡೋರ್ ಚಟುವಟಿಕೆಗಳಿಂದ ರಿಲ್ಯಾಕ್ಸ್ ಆಗುತ್ತಾರೆ. ಸಾಹಸಪ್ರಿಯರು. ಟ್ರೆಕ್ಕಿಂಗ್, ಅಡ್ವೆಂಚರ್ ಪಾರ್ಕ್, ಬೆಟ್ಟ-ಗುಡ್ಡ, ಬೈಕ್ ರೈಡ್ ಅಥವಾ ಕ್ರೀಡಾಂಗಣಗಳಿಗೆ ಹೋಗಲು ಇಷ್ಟಪಡುತ್ತಾರೆ.

Zodiac Sign Personality

ವೃಷಭ (Taurus): ರುಚಿಯಾದ ಊಟ, ಮ್ಯೂಸಿಕ್, ಕುಟುಂಬದ ಜೊತೆಗಿನ ಸಮಯ ಮತ್ತು ಹಗುರವಾದ ಕಾಮಿಡಿ ಇವರಿಗೆ ತುಂಬಾ ಇಷ್ಟ. ಒಳ್ಳೆಯ ನಿದ್ರೆ, ಪ್ರಕೃತಿಯಲ್ಲಿ ಸಮಯ ಕಳೆಯುವುದು ಇವರ ವಿಶ್ರಾಂತಿ. ಆರಾಮ ಮತ್ತು ಸೌಂದರ್ಯಪ್ರಿಯರು. ರೆಸಾರ್ಟ್, ಉದ್ಯಾನವನ, ಉತ್ತಮ ರೆಸ್ಟೋರೆಂಟ್, ಪ್ರಕೃತಿ ತಾಣಗಳು ಮತ್ತು ಸ್ಪಾಗಳಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ.

ಮಿಥುನ (Gemini): ಜೋಕ್ಸ್, ಚುರುಕಾದ ಮಾತುಕತೆ, ಮೀಮ್ಸ್ ಮತ್ತು ಹೊಸ ವಿಷಯಗಳು ಇವರಿಗೆ ಮನರಂಜನೆ. ಸ್ನೇಹಿತರ ಜೊತೆ ಮಾತನಾಡುವುದು, ಪುಸ್ತಕ ಓದುವುದು ಅಥವಾ ಚಿಕ್ಕ ಟ್ರಿಪ್ ಹೋಗುವುದು ಇವರಿಗೆ ರಿಲ್ಯಾಕ್ಸ್. ಹೊಸ ಜನರನ್ನು ಭೇಟಿ ಮಾಡುವವರು. ಮಾಲ್, ಪುಸ್ತಕ ಮೇಳ, ಕಫೆ, ಸ್ನೇಹಿತರ ಜೊತೆಗಿನ ಕೂಟ, ನಗರ ಸುತ್ತಾಟ ಇವರಿಗೆ ಇಷ್ಟ.

ಈ ರಾಶಿಯವರಿಗೆ ಗಜಕೇಸರಿ ರಾಜಯೋಗ : ಆದಾಯದಲ್ಲಿ ಹೆಚ್ಚಳ, ಆಸೆಗಳು ಈಡೇರುವ ಕಾಲ
ಈ ರಾಶಿಯವರಿಗೆ ಗಜಕೇಸರಿ ರಾಜಯೋಗ : ಆದಾಯದಲ್ಲಿ ಹೆಚ್ಚಳ, ಆಸೆಗಳು ಈಡೇರುವ ಕಾಲ

ಕಟಕ (Cancer): ಕುಟುಂಬದ ನೆನಪುಗಳು, ಮಕ್ಕಳ ತುಂಟಾಟ ಮತ್ತು ಭಾವನಾತ್ಮಕ ಕಾಮಿಡಿ ಇವರನ್ನು ನಗಿಸುತ್ತದೆ. ಮನೆಯಲ್ಲೇ ಶಾಂತವಾಗಿ ಸಮಯ ಕಳೆಯುವುದು, ಸಿನಿಮಾ ನೋಡುವುದು ಇವರ ವಿಶ್ರಾಂತಿ. ಕುಟುಂಬಪ್ರಿಯರು. ಬೀಚ್, ಕೆರೆ, ನದಿತೀರ, ಮನೆ ಸಮಾರಂಭ ಅಥವಾ ಬಂಧುಗಳ ಮನೆಗೆ ಹೋಗುವುದರಿಂದ ಸಂತೋಷ ಪಡೆಯುತ್ತಾರೆ.

ಸಿಂಹ (Leo): ಸ್ಟೇಜ್ ಶೋಗಳು, ಕಾಮಿಡಿ ಕಾರ್ಯಕ್ರಮಗಳು, ಪ್ರಶಂಸೆ ಸಿಗುವ ಕ್ಷಣಗಳು ಇವರಿಗೆ ಖುಷಿ. ಪಾರ್ಟಿ, ಪ್ರವಾಸ ಮತ್ತು ಕ್ರಿಯೇಟಿವ್ ಹವ್ಯಾಸಗಳಿಂದ ರಿಲ್ಯಾಕ್ಸ್ ಆಗುತ್ತಾರೆ. ವೈಭವ ಮತ್ತು ಮನರಂಜನೆ ಇಷ್ಟ. ಸಿನಿಮಾ, ಸಂಗೀತ ಕಾರ್ಯಕ್ರಮ, ದೊಡ್ಡ ಹೋಟೆಲ್, ರೆಸಾರ್ಟ್ ಅಥವಾ ಪ್ರವಾಸಿ ತಾಣಗಳಿಗೆ ಹೋಗಲು ಇಷ್ಟಪಡುತ್ತಾರೆ.

ಕನ್ಯಾ (Virgo): ಬುದ್ಧಿವಂತ ಹಾಸ್ಯ, ಪದಗಳ ಆಟ ಮತ್ತು ಸಣ್ಣ ಸಣ್ಣ ವಿನೋದ ಇವರಿಗೆ ಇಷ್ಟ. ತೋಟಗಾರಿಕೆ, ಓದು ಅಥವಾ ಮನೆ ಸುವ್ಯವಸ್ಥೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ. ಶಾಂತ ವಾತಾವರಣ ಇಷ್ಟ. ಗ್ರಂಥಾಲಯ, ಮ್ಯೂಸಿಯಂ, ಸಸ್ಯೋದ್ಯಾನ, ದೇವಾಲಯ ಅಥವಾ ಪ್ರಕೃತಿಯ ನಡುವೆ ಸಮಯ ಕಳೆಯಲು ಇಷ್ಟಪಡುತ್ತಾರೆ.

ಜುಲೈ 27 ಬಳಿಕ ಈ 6 ರಾಶಿಯವರಿಗೆ ಶುಭಕಾಲ! ಹಣದ ಮಳೆ, ವೃತ್ತಿಜೀವನದಲ್ಲಿ ಭರ್ಜರಿ ಯಶಸ್ಸು
ಜುಲೈ 27 ಬಳಿಕ ಈ 6 ರಾಶಿಯವರಿಗೆ ಶುಭಕಾಲ! ಹಣದ ಮಳೆ, ವೃತ್ತಿಜೀವನದಲ್ಲಿ ಭರ್ಜರಿ ಯಶಸ್ಸು

ತುಲಾ (Libra): ರೊಮ್ಯಾಂಟಿಕ್ ಕಾಮಿಡಿ, ಸಂಗೀತ, ಸ್ನೇಹಿತರ ಜೊತೆಗಿನ ಕೂಟ ಇವರಿಗೆ ಮನರಂಜನೆ. ಕಫೆಯಲ್ಲಿ ಸಮಯ ಕಳೆಯುವುದು, ಕಲೆ ಮತ್ತು ಸಂಗೀತ ಇವರಿಗೆ ವಿಶ್ರಾಂತಿ. ಸೌಂದರ್ಯ ಮತ್ತು ಕಲೆಪ್ರಿಯರು. ಆರ್ಟ್ ಗ್ಯಾಲರಿ, ಶಾಪಿಂಗ್ ಮಾಲ್, ಕಫೆ, ಉದ್ಯಾನವನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗಲು ಇಷ್ಟಪಡುತ್ತಾರೆ.

ವೃಶ್ಚಿಕ (Scorpio): ವ್ಯಂಗ್ಯ ಹಾಸ್ಯ, ರಹಸ್ಯಭರಿತ ಕಥೆಗಳು ಮತ್ತು ಆಳವಾದ ಸಂಭಾಷಣೆ ಇವರನ್ನು ಸೆಳೆಯುತ್ತವೆ. ಏಕಾಂತ, ಧ್ಯಾನ ಅಥವಾ ರಾತ್ರಿ ನಡಿಗೆ ಇವರಿಗೆ ರಿಲ್ಯಾಕ್ಸ್. ಏಕಾಂತ ಮತ್ತು ರಹಸ್ಯಮಯ ಸ್ಥಳಗಳನ್ನು ಇಷ್ಟಪಡುತ್ತಾರೆ. ಬೆಟ್ಟ, ಕಾಡು, ಐತಿಹಾಸಿಕ ಕೋಟೆ, ಗುಹೆ ಅಥವಾ ಶಾಂತ ಸ್ಥಳಗಳಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ.

ಧನು (Sagittarius): ಟ್ರಾವೆಲ್ ಕಥೆಗಳು, ಸಾಹಸ, ಸ್ಟ್ಯಾಂಡ್‌ಅಪ್ ಕಾಮಿಡಿ ಮತ್ತು ಮಸ್ತಿ ಇವರಿಗೆ ತುಂಬಾ ಇಷ್ಟ. ಹೊಸ ಸ್ಥಳಗಳಿಗೆ ಹೋಗುವುದು, ಪ್ರಕೃತಿಯಲ್ಲಿ ಸಮಯ ಕಳೆಯುವುದು ಇವರ ವಿಶ್ರಾಂತಿ. ಪ್ರವಾಸವೇ ಇವರ ಮನರಂಜನೆ. ಹೊಸ ನಗರ, ಬೆಟ್ಟ, ವಿದೇಶ ಪ್ರವಾಸ, ಧಾರ್ಮಿಕ ಕ್ಷೇತ್ರಗಳು ಮತ್ತು ಕ್ಯಾಂಪಿಂಗ್ ಸ್ಥಳಗಳಿಗೆ ಹೋಗಲು ಇಷ್ಟಪಡುತ್ತಾರೆ.

ಮಕರ (Capricorn): ಚಾಣಾಕ್ಷ ಹಾಸ್ಯ, ಸಾಧನೆಯ ಕಥೆಗಳು ಮತ್ತು ಹಳೆಯ ಸ್ನೇಹಿತರ ಜೊತೆಗಿನ ನೆನಪುಗಳು ಇವರಿಗೆ ಸಂತೋಷ ಕೊಡುತ್ತವೆ. ಕೆಲಸ ಮುಗಿಸಿ ಶಾಂತವಾಗಿ ಪುಸ್ತಕ ಓದುವುದು ಅಥವಾ ಸಂಗೀತ ಕೇಳುವುದು ಇವರಿಗೆ ರಿಲ್ಯಾಕ್ಸ್. ಶಿಸ್ತಿನ ಜೊತೆಗೆ ವಿಶ್ರಾಂತಿ ಬಯಸುವವರು. ಐತಿಹಾಸಿಕ ತಾಣಗಳು, ಪರ್ವತ ಪ್ರದೇಶಗಳು, ಶಾಂತ ರೆಸಾರ್ಟ್ ಅಥವಾ ಕೆಲಸದ ಒತ್ತಡದಿಂದ ದೂರದ ಸ್ಥಳಗಳನ್ನು ಆರಿಸಿಕೊಳ್ಳುತ್ತಾರೆ.

ಕುಂಭ (Aquarius): ವಿಚಿತ್ರ ಐಡಿಯಾಗಳು, ವೈಜ್ಞಾನಿಕ ಹಾಸ್ಯ, ಹೊಸ ತಂತ್ರಜ್ಞಾನ ಮತ್ತು ಸೃಜನಾತ್ಮಕ ವಿಡಿಯೊಗಳು ಇವರಿಗೆ ಮನರಂಜನೆ. ಹೊಸ ವಿಷಯ ಕಲಿಯುವುದು ಅಥವಾ ಸ್ನೇಹಿತರೊಂದಿಗೆ ಚರ್ಚೆ ಮಾಡುವುದು ಇವರ ವಿಶ್ರಾಂತಿ. ವಿಭಿನ್ನ ಅನುಭವಗಳನ್ನು ಹುಡುಕುವವರು. ವಿಜ್ಞಾನ ಕೇಂದ್ರ, ಟೆಕ್ ಎಕ್ಸಿಬಿಷನ್, ಸಂಗೀತೋತ್ಸವ, ಸಾಮಾಜಿಕ ಕಾರ್ಯಕ್ರಮ ಅಥವಾ ಹೊಸ ಸಂಸ್ಕೃತಿಯ ಸ್ಥಳಗಳಿಗೆ ಹೋಗಲು ಇಷ್ಟಪಡುತ್ತಾರೆ.

ಮೀನ (Pisces): ಭಾವನಾತ್ಮಕ ಕಾಮಿಡಿ, ಸಂಗೀತ, ಸಿನಿಮಾ ಮತ್ತು ಕಲಾತ್ಮಕ ವಿಷಯಗಳು ಇವರಿಗೆ ಖುಷಿ ಕೊಡುತ್ತವೆ. ಧ್ಯಾನ, ಸಂಗೀತ ಕೇಳುವುದು, ಸಮುದ್ರ ಅಥವಾ ನದಿಯ ತೀರದಲ್ಲಿ ಸಮಯ ಕಳೆಯುವುದು ಇವರಿಗೆ ನೆಮ್ಮದಿ. ಕನಸುಗಾರರು. ಸಮುದ್ರತೀರ, ನದಿತೀರ, ಆಶ್ರಮ, ದೇವಾಲಯ, ಕಲಾ ಪ್ರದರ್ಶನ ಅಥವಾ ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+