Annamalai: ಅಣ್ಣಾಮಲೈ ವಿರುದ್ಧ ಎಫ್‌ಐಆರ್ ದಾಖಲು

ತಮಿಳುನಾಡು ಬಿಜೆಪಿ ಅಧ್ಯಕ್ಷ ಮತ್ತು ಕೊಯಮತ್ತೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಾಮಲೈ ವಿರುದ್ಧ ಕೊಯಮತ್ತೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಗುರುವಾರ ರಾತ್ರಿ 10 ಗಂಟೆಯ ನಂತರವೂ ಚುನಾವಣಾ ಪ್ರಚಾರ ಮಾಡಿರುವ ಆರೋಪದ ಮೇಲೆ ಅವರ ವಿರುದ್ಧ ದೂರು ದಾಖಲಾಗಿದೆ.

ಕಾನೂನು ಬಾಹಿರ ಸಭೆ, ಅಕ್ರಮ ತಡೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅನುಮತಿ ನೀಡಿದ ಸಮಯವ್ನು ಮೀರಿ ಬಿಜೆಪಿ ಪ್ರಚಾರ ಮಾಡಿದ್ದಕ್ಕೆ ಡಿಎಂಕೆ ಮತ್ತು ಎಡಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ನಂತರ ವಾಗ್ವಾದ ನಡೆದಿದೆ.

Tamil Nadu BJP Chief Annamalai Faces Police Case for Campaigning Beyond Permitted Hours

"ಸೆಕ್ಷನ್ 143, 341 ಮತ್ತು 290 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಡಿಎಂಕೆಯಿಂದ ಹಲ್ಲೆ ದೂರಿನ ಆಧಾರದ ಮೇಲೆ ಬಿಜೆಪಿ ವಿರುದ್ಧ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಸೋಲಿನ ಭಯ ಎಂದ ಡಿಎಂಕೆ

ಅಣ್ಣಾಮಲೈ ಅವರು ಸೋಲಿನ ಭಯದಿಂದ ಜನರನ್ನು ಬೆದರಿಸುತ್ತಿದ್ದು, ಗಲಭೆಗಳಿಗೆ ಪ್ರಚೋದನೆ ಕೊಡುತ್ತಿದ್ದಾರೆ ಎಂದು ಡಿಎಂಕೆ ನಾಯಕ ಎ ಸರವಣನ್ ಆರೋಪ ಮಾಡಿದ್ದಾರೆ.

ದುರಹಂಕಾರದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಅಣ್ಣಾಮಲೈ ಅವರಿಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.

ತಪ್ಪು ಮಾಡಿಲ್ಲ ಎಂದ ಅಣ್ಣಾಮಲೈ

ಇನ್ನು ಡಿಎಂಕೆ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ರಾತ್ರಿ 10 ಗಂಟೆಯ ನಂತರ ಜನರನ್ನು ಭೇಟಿ ಮಾಡಲು ನನಗೆ ಎಲ್ಲಾ ರೀತಿಯ ಹಕ್ಕಿದೆ. ಯಾವ ಚುನಾವಣಾ ಆಯೋಗವು ಅದನ್ನು ತಡೆಯಲು ಸಾಧ್ಯವಿಲ್ಲ, ಆ ರೀತಿಯ ಆದೇಶ ಎಲ್ಲಿದೆ ಎಂದು ನನಗೆ ತೋರಿಸಿ ಎಂದಿದ್ದಾರೆ.

ಅಣ್ಣಾಮಲೈ ವಿರುದ್ಧ ಕುತಂತ್ರ

ಘಟನೆ ಬಗ್ಗೆ ಪಕ್ಷದ ಬಿಜೆಪಿ ರಾಜ್ಯ ವಕ್ತಾರ ಎಎನ್‌ಎಸ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಅಣ್ಣಾಮಲೈ ಗೆಲ್ಲುವುದನ್ನು ತಡೆಯಲು ಈ ರೀತಿಯ ಸಂಚು ಮಾಡಲಾಗುತ್ತಿದೆ. ಡಿಎಂಕೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಮತ್ತು ಜಿಲ್ಲಾಧಿಕಾರಿಯನ್ನು ದುರುಪಯೋಗಪಡಿಸಿಕೊಂಡು ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಯಮತ್ತೂರಿನಲ್ಲಿ ಬಿಜೆಪಿ ಅಣ್ಣಾಮಲೈ ಅವರನ್ನು ಕಣಕ್ಕಿಳಿಸುವ ಮೂಲಕ ಮೊದಲ ಎಂಪಿ ಸೀಟು ಗೆಲ್ಲುವ ವಿಶ್ವಾಸದಲ್ಲಿದೆ. ಆಡಳಿತಾರೂಢ ಡಿಎಂಕೆ ಗಣಪತಿ ರಾಜ್‌ಕುಮಾರ್‌ ಅವರನ್ನು ಕಣಕ್ಕಿಳಿಸಿದ್ದು, ಎಐಎಡಿಎಂಕೆ ಅಭ್ಯರ್ಥಿಯಾಗಿ ಸಿಂಗೈ ರಾಮಚಂದ್ರನ್‌ ಕಣಕ್ಕಿಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+