ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ & ಏರಿಕೆ!

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಅಂತ್ಯವಾಗಿದೆ. ಬಹುತೇಕ ಶಾಂತಿಯುತವಾಗಿ ಮತದಾನ ಮುಗಿದಿದ್ದರೂ, ಷೇರು ಮಾರುಕಟ್ಟೆಯಲ್ಲಿ ಇಂದು ಸಂಚಲನ ಸೃಷ್ಟಿ ಆಗಿತ್ತು. ಅದರಲ್ಲೂ ಇಂದು ಬೆಳಗ್ಗೆ ಷೇರು ಮಾರುಕಟ್ಟೆ ಆರಂಭವಾದ ಸಮಯದಲ್ಲಿ, ಭಾರಿ ದೊಡ್ಡ ಎಡವಟ್ಟೇ ನಡೆದಿತ್ತು!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಭಯ ಆವರಿಸಿದೆ. ಇದೇ ಸಮಯದಲ್ಲಿ ಇಂದು ಭಾರತದಲ್ಲಿ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಆದರೆ ಹೀಗೆ ಇಸ್ರೇಲ್ & ಇರಾನ್ ನಡುವೆ ಯುದ್ಧ ಭೀತಿ ಆವರಿಸಿದ ಕಾರಣಕ್ಕೆ, ಭಾರತದ ಷೇರು ಮಾರುಕಟ್ಟೆ ನಲುಗಿ ಹೋಗಿತ್ತು. ಆರಂಭದಲ್ಲಿ ಭಾರಿ ಕುಸಿತ ಕಂಡ ಭಾರತದ ಷೇರು ಮಾರುಕಟ್ಟೆ, ಅಂತಿಮವಾಗಿ ಹೂಡಿಕೆದಾರರಿಗೆ ಕೊಟ್ಟಿದ್ದು ಏನು ಗೊತ್ತಾ? ಮುಂದೆ ಓದಿ.

Share Market Down On Lok Sabha Election 2024 Phase 1 Polling Day

ಯುದ್ಧಕ್ಕೆ ಕಾರಣ ಏನು ಗೊತ್ತೆ?

ಅಂದಹಾಗೆ ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿ ಮೇಲೆ ಏಪ್ರಿಲ್ 1 ರಂದು ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್ ಅಟ್ಟಹಾಸ ಮೆರೆದಿದೆ ಎಂದು ಇರಾನ್ ಆರೋಪಿಸಿತ್ತು. ಡಮಾಸ್ಕಸ್ ಮೇಲೆ ಇಸ್ರೇಲ್ ದಾಳಿ ಮಾಡಿದಾಗ, ಇರಾನ್ ಸೇನಾಧಿಕಾರಿಗಳು ಸೇರಿ ಹಲವು ಇರಾನ್ ಅಧಿಕಾರಿ ವರ್ಗ ಜೀವ ಬಿಟ್ಟಿದೆ ಎಂದು ಮಾಹಿತಿ ನೀಡಿ ಆಕ್ರೋಶ ಹೊರಹಾಕಿತ್ತು ಇರಾನ್. ಆ ನಂತರವೇ ಯುದ್ಧ ಭೀತಿ ಆವರಿಸಿತ್ತು, ಇನ್ನು ಮತ್ತೊಂದು ಕಡೆ ಈಗಾಗಲೇ ಸುಮಾರು 200 ಮಿಸೈಲ್ ಹಾಗೂ ಡ್ರೋನ್‌ಗಳ ಮೂಲಕ ಇರಾನ್ ಸೇನೆ ದಾಳಿ ಮಾಡಿದೆ. ಆ ನಂತರ ಇಸ್ರೇಲ್ ಕೂಡ ಮರು ದಾಳಿ ನಡೆಸಿದೆ ಎಂಬ ಆರೋಪ ಇದೆ. ಇಷ್ಟೆಲ್ಲ ಬೆಳವಣಿಗೆಯಿಂದ ಇಂದು ಭಾರತದ ಷೇರು ಪೇಟೆ ನಲುಗಿತ್ತು, ಅದರಲ್ಲೂ ಲೋಕಸಭೆ ಚುನಾವಣೆ ಆರಂಭದ ದಿನವೇ ಹೀಗೆಲ್ಲಾ ಆತಂಕ ಮೂಡಿತ್ತು.

ಮೊದಲು ಕುಸಿತ, ನಂತರ ಏರಿಕೆ!

ಹೌದು, ಯುದ್ಧ ಭೀತಿ ಹಿನ್ನೆಲೆಯಲ್ಲಿ ಇಂದು ಭಾರತದ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿತ್ತು. ಆರಂಭದಲ್ಲಿ ಭಾರಿ ಹಿನ್ನಡೆ ಕಂಡಿದ್ದ ಭಾರತೀಯ ಷೇರುಪೇಟೆ, ಅಂತಿಮವಾಗಿ ಒಂದಷ್ಟು ಚೇತರಿಕೆ ಕಾಣುತ್ತಾ ಬಂದು, ಕೊನೆಗೂ ಉತ್ತಮ ರೀತಿಯಲ್ಲಿ ತನ್ನ ವಹಿವಾಟು ಮುಂದುವರಿಸಿತು. ಆದರೆ ಇಂದು ಷೇರು ಮಾರುಕಟ್ಟೆ ಆರಂಭ ಆದ ಸಮಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿತ್ತು. ಕೊನೆಗೂ ಅದನ್ನೆಲ್ಲಾ ನಿಭಾಯಿಸುವಲ್ಲಿ, ಭಾರತೀಯ ಷೇರು ಮಾರುಕಟ್ಟೆ ತನ್ನ ಬುದ್ಧಿ ಶಕ್ತಿ ಉಪಯೋಗಿಸಿತ್ತು. ಕೊನೆಗೂ ಹೂಡಿಕೆದಾರರಿಗೆ ಖುಷಿಯನ್ನ ಕೊಟ್ಟಿತ್ತು ಷೇರು ಮಾರುಕಟ್ಟೆ.

ಶೇಕಡಾ 60ರಷ್ಟು ಮತದಾನ

2024 ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ, ಇಂದು ಸಂಜೆ ಕೊನೆಯಾಗಿದೆ. ಭಾರತದ 21 ರಾಜ್ಯಗಳು & ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟಾರೆ 102 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದೆ. ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ವಿವಿಧ ರಾಜ್ಯಗಳಲ್ಲಿ ಒಟ್ಟಾರೆ ಶೇ. 60ರಷ್ಟು ಮತದಾನ ಆಗಿದೆ. ಇನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಶೇ. 77.57 ರಷ್ಟು ವೋಟಿಂಗ್ ಆಗಿದೆ. ತಮಿಳುನಾಡಿನಲ್ಲಿ ಶೇ. 63.2 ಮತದಾನ ನಡೆದಿದ್ದರೆ, ರಾಜಸ್ಥಾನದಲ್ಲಿ ಶೇ. 50.3, ಉತ್ತರ ಪ್ರದೇಶದಲ್ಲಿ ಶೇಕಡಾ 57.5ರಷ್ಟು & ಮಧ್ಯಪ್ರದೇಶದಲ್ಲಿ ಶೇ. 63.3ರಷ್ಟು ಮತದಾನ ನಡೆದಿದೆ. ಹಾಗೇ ಇನ್ನುಳಿದ ರಾಜ್ಯಗಳಲ್ಲೂ ಅದ್ಭುತವಾಗಿ ಮತದಾನ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+