ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್ ನಿಂದ 312 ಕೋಟಿ ವಜ್ರ ಅಪಹರಣ

|
Google Oneindia Kannada News

diamond
ಲಂಡನ್, ಜು.29 : ಕ್ಯಾನಸ್ ನಲ್ಲಿ ನಡೆಯುತ್ತಿದ್ದ ಆಭರಣ ಪ್ರದರ್ಶನಕ್ಕೆ ನುಗ್ಗಿದ್ದ ಬಂದೂಕುಧಾರಿಯೊಬ್ಬ ಬರೋಬ್ಬರಿ 312 ಕೋಟಿ ಬೆಳೆಬಾಳುವ ವಜ್ರವನ್ನು ಅಪಹರಿಸಿ, ಪರಾರಿಯಾಗಿರುವ ಘಟನೆ ನಡೆದಿದೆ.

ಕ್ಯಾನಸ್ ನ ಕಾರ್ಲ್ ಟನ್ ಹೋಟೆಲ್ ನಲ್ಲಿ ಇಸ್ರೇಲಿ ಮೂಲದ ಲೆವೀವ್ ಎಂಬುವವರ ಆಭರಣದ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಫ್ರೆಂಚ್ ಇತಿಹಾಸದಲ್ಲೇ ಇದು ಎರಡನೇ ದೊಡ್ಡ ಕಳ್ಳತನ ಎಂದು ಹೇಳಲಾಗುತ್ತಿದೆ.

ಸಮುದ್ರಕ್ಕೆ ಹೊಂದಿಕೊಂಡಂತಿರುವ ಕಾರ್ಲ್ ಟನ್ ಹೋಟೆಲ್ ನಲ್ಲಿ ಮೇ ತಿಂಗಳಿನಿಂದ ಆಗಸ್ಟ್ ವರೆಗೆ ವಜ್ರದ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಗ್ರಾಹಕರ ಸೋಗಿನಲ್ಲಿ ಇಲ್ಲಿಗೆ ಆಗಮಿಸಿದ ಚಾಲಾಕಿ ಕಳ್ಳ, ಸೂಟ್ ಕೇಸ್ ವೊಂದರಲ್ಲಿ 312 ಕೋಟಿ ಬೆಳೆಬಾಳುವ ವಜ್ರವನ್ನು ಕದ್ದು ಪರಾರಿಯಾಗಿದ್ದಾನೆ.

ಭಾನುವಾರ ಬೆಳಗ್ಗೆಯಿಂದಲೇ ಕಳ್ಳ ಗ್ರಾಹಕರ ಸೋಗಿನಲ್ಲಿ ಪ್ರದರ್ಶನದಲ್ಲಿ ಸುತ್ತಾಡುತ್ತಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಆದರೆ, ಭದ್ರತಾ ಅಧಿಕಾರಿಗಳ ಕಣ್ಣು ತಪ್ಪಿಸಿ ಹೇಗೆ ವಜ್ರ ಕದ್ದು, ಪರಾರಿಯಾಗಿದ್ದಾನೆ ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.

ಪೊಲೀಸರು ನಗರದ ಟ್ರಾಫಿಕ್ ಅನ್ನು ತಡೆದು ಕಳ್ಳನಿಗಾಗಿ ಶೋಧ ನಡೆಸಿದರೂ ಅವನ ಪತ್ತೆಯಾಗಿಲ್ಲ. 2008ರಲ್ಲಿ ಪ್ಯಾರಿಸ್ ಹ್ಯಾರಿ ವಿಂಟ್ ಸನ್ ಜ್ಯುವೆಲರ್ಸ್ ನಲ್ಲಿ 80 ಮಿಲಿಯನ್ ಯುರೋ ಬೆಳೆಬಾಳುವ ತಡೆದು ವಜ್ರವನ್ನು ಅಪಹರಿಸಲಾಗಿತ್ತು. (ಕ್ಯಾನೆ ಚಿತ್ರೋತ್ಸವ: 22 ಕೋಟಿ ರೂ ಆಭರಣ ಕಳವು)

ಕೆಲವು ದಿನಗಳ ಹಿಂದೆ ಪಿಂಕ್ ಪ್ಯಾಥರ್ ಎಂಬ ಆಭರಣ ಕಳ್ಳರ ಗುಂಪು ಜೈಲಿನಿಂದ ತಪ್ಪಿಸಿಕೊಂಡಿತ್ತು. ಅವರ ತಂಡದ ಸದಸ್ಯರ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವರ್ಷಪೂರ್ತಿ ಶ್ರೀಮಂತ ಗ್ರಾಹಕರಿಂದ ತುಂಬಿರುವ ಹೋಟೆಲ್ ನಲ್ಲಿ ಕಳ್ಳತನ ನಡೆದಿರುವುದು ಹೋಟೆಲ್ ಸಿಬ್ಬಂದಿಗೆ ತೀವ್ರ ಮುಜುಗರ ಉಂಟು ಮಾಡಿದೆ.

English summary
An armed man stole jewels with an estimated value of 40 million euros ($53 million) in a brazen heist in broad daylight at a diamond exhibition in the French Riviera resort of Cannes Investigators said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X