ಲಂಡನ್: ಭಾರತೀಯ ಹೈಕಮಿಷನ್ ಕಚೇರಿಯ ತ್ರಿವರ್ಣ ಧ್ವಜ ಕೆಳಗಿಳಿಸಿದ ಖಲಿಸ್ತಾನಿ: UK ಸರ್ಕಾರಕ್ಕೆ ವಿವರಣೆ ಕೇಳಿದ ಭಾರತ
ಲಂಡನ್ ದೇಶದಲ್ಲಿನ ಭಾರತೀಯ ಹೈಕಮಿಷನ್ ಕಚೇರಿ ಹೊರಗೆ ಪ್ರತಿಭಟನೆ ವೇಳೆ ಖಲಿಸ್ತಾನಿಯರ ವ್ಯಕ್ತಿಯೊಬ್ಬ ತ್ರಿವರ್ಣ ಧ್ವಜ ಕೆಳಗೆ ಇಳಿಸಿ ಅಪಮಾನ ಮಾಡಿದ್ದಾನೆ. ಈ ಬಗ್ಗೆ ಭಾರತ ಬ್ರೀಟಿಷ್ ವರ್ತನೆಗೆ ಅಸಮಾಧಾನ ಹೊರ ಹಾಕಿದೆ.
ಲಂಡನ್, ಮಾರ್ಚ್ 20: ಲಂಡನ್ ದೇಶದಲ್ಲಿನ ಭಾರತೀಯ ಹೈಕಮಿಷನ್ ಕಚೇರಿ ಹೊರಗೆ ಪ್ರತಿಭಟನೆ ವೇಳೆ ಖಲಿಸ್ತಾನಿ ವ್ಯಕ್ತಿಯೊಬ್ಬ ಭಾರತೀಯ ಧ್ವಜ ಕೆಳಗಿಳಿಸಿ ಅಪಮಾನ ಮಾಡಿದ್ದಾನೆ. ಇದಕ್ಕೆ ಬ್ರಿಟಿಷ್ ಸರ್ಕಾರದ "ಉದಾಸೀನತೆ" ಕಾರಣ ಎಂದಿರುವ ಕೇಂದ್ರ ಸರ್ಕಾರ ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (MEA) ವಿಚಾರಣೆಗೆ ಕರೆಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸಿಖ್ ವ್ಯಕ್ತಿಯೊಬ್ಬ ಧ್ವಜ ಕೆಳಗಿಸಿದ ಘಟನೆ ಬಗ್ಗೆ ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಶ್ರೀಮತಿ ಸ್ಕಾಟ್ ಅವರರಿಂದ ವಿವರಣೆ ಮತ್ತು ಸಂಪೂರ್ಣ ವಿಚಾರಣೆಗೆ ಸಚಿವಾಲಯ ಆಹ್ವಾನಿಸಿದೆ. ಭಾರತೀಯ ರಾಜತಾಂತ್ರಿಕರ ಭದ್ರತೆಗೆ ಬ್ರಿಟಿಷ್ ಸರ್ಕಾರದ ಉದಾಸೀನತೆ ಸ್ವೀಕಾರಾರ್ಹವಲ್ಲ ಎಂದು ಭಾರತ ಅಸಮಧಾನ ಹೊರ ಹಾಕಿದೆ.

ವಾರಿಸ್ ಪಂಜಾಬ್ ಡಿ (WPD) ಗುಂಪಿನ ಮೇಲೆ ಪಂಜಾಬ್‌ನಲ್ಲಿ ಭದ್ರತಾ ಪಡೆಗಳ ದಮನದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಪ್ರತಿಭಟನಾಕಾರರು, ಖಲಿಸ್ತಾನಿ ಘೋಷಣೆಗಳನ್ನು ಕೂಗಿದ್ದಲ್ಲದೇ ಹೈಕಮಿಷನ್ ಕಚೇರಿ ಪ್ರವೇಶಕ್ಕೂ ಪ್ರಯತ್ನಿಸಿದರು ಅದು ಸಫಲವಾಗಲಿಲ್ಲ. ಬಳಿಕ ಒಬ್ಬ ಸಿಖ್ ವ್ಯಕ್ತಿ ರಸ್ತೆಯಿಂದ ನೇರವಾಗಿ ಭಾರತೀಯ ಹೈಕಮಿಷನ್ ಕಚೇರಿಯ ಬಾಲ್ಕನಿಗೆ ಏರಿದರು. ಭಾರತದ ತ್ರಿವರ್ಣ ಧ್ವಜ ಕೆಳಗಿಳಿಸಿದರು.
ರಾತ್ರಿಯೇ ಸಚಿವಾಲಯದ ಹೇಳಿಕೆ ಬಿಡುಗಡೆ
ಈ ಘಟನೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾನುವಾರ ರಾತ್ರಿ ಗಮನಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಲೇ ಕ್ರಮ ವಹಿಸಿದೆ. ಹೈಕಮಿಷನ್ ಆವರಣಕ್ಕೆ ಖಾಲಿಸ್ತಾನಿಗಳ ಪ್ರವೇಶಕ್ಕೆ ಅನುಮತಿಸಿದ ಬ್ರಿಟಿಷ್ ಭದ್ರತೆಯ ವಿಫಲತೆ ಬಗ್ಗೆ ವಿವರಣೆ ಕೇಳಲಾಗಿದೆ. ಈ ಕುರಿತ ಸಚಿವಾಲಯದ ಹೇಳಿಕೆಯೊಂದನ್ನು ರಾತ್ರಿ ಬಿಡುಗಡೆ ಮಾಡಲಾಗಿದೆ.
ಲಂಡನ್‌ನಲ್ಲಿ (UK) ಇರುವ ಭಾರತೀಯ ರಾಜತಾಂತ್ರಿಕ ಕಚೇರಿಗಳ ವಿಚಾರದಲ್ಲಿ ಅಲ್ಲಿನ ಬ್ರೀಟಿಷ್ ಸರ್ಕಾರ ಅಗತ್ಯ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ಸರಿಯಲ್ಲ ಎಂದು ಭಾರತ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಈ ಹಿಂದೆ 2019ರಲ್ಲಿ ಕಾಶ್ಮೀರಿ ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪುಗಳ ರಾಯಭಾರಿ ಕಚೇರಿಯನ್ನು ಸುತ್ತುವರೆದು ಮೊಟ್ಟೆ ಸೇರಿದಂತೆ ಇನ್ನಿತರ ವಸ್ತು ಎಸೆದಿದ್ದರು. ಇವತ್ತಿನ ಘಟನೆ ಅದಕ್ಕಿಂತಲೂ ಕೆಟ್ಟದಾಗಿದೆ ಎಂದು ಹಳೆಯ ಘಟನೆಯೊಂದನ್ನು ಇಲ್ಲಿ ವಿವರಿಸಲಾಗಿದೆ.

ತ್ರಿವರ್ಣ ಧ್ವಜ ಕೆಳಗಿಳಿಸಿದ ಘಟನೆಯಲ್ಲಿ ಭಾಗಿಯಾದವರನ್ನು ಗುರುತಿಸಿ ಬಂಧಿಸಬೇಕು. ಅವರೆಲ್ಲರನ್ನು ವಿಚಾರಣೆಗೆ ಒಳಪಡಿಸಬೇಕು. ಮುಂದೆಂದೂ ಇಂತಹ ಪ್ರತಿಭಟನೆಗಳು/ಘಟನೆ ಮರುಕಳಿಸದಂತೆ ಅತ್ಯಗತ್ಯ ಮತ್ತು ಸೂಕ್ತ ಭದ್ರತಾ ಕ್ರಮಗಳನ್ನು ಯುಕೆ ಸರ್ಕಾರ ಕೈಗೊಳ್ಳಬೇಕೆಂದು ಭಾರತವು ನಿರೀಕ್ಷಿಸುತ್ತದೆ ಎಂದು ಬಿಡುಗಡೆಯಾದ ಹೇಳಿಕೆ ಮೂಲಕ ತಿಳಿಸಲಾಗಿದೆ.
ಹೈಕಮಿಷನ್ ಕಚೇರಿ ಭದ್ರತೆಗೆ ಆದ್ಯತೆ ನೀಡಿ
ಘಟನೆ ಬಳಿಕ ಹೈಕಮಿಷನ್ ಅಧಿಕಾರಿಯೊಬ್ಬರು ತಮ್ಮ ಸಿಬ್ಬಂದಿಯ ಸದಸ್ಯರ ಮೂಲಕ ತ್ರಿವರ್ಣ ಧ್ವಜವನ್ನು ಸೂಕ್ತವಾಗಿ ಕಚೇರಿ ಒಳಗೆ ಒಯ್ಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ಕರಿತು ಲಂಡನ್‌ನಲ್ಲಿರುವ U.K. ವಿದೇಶಿ ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ (FCDO) ಕಚೇರಿಯು ಎಲ್ಲಿಸ್ ಅವರು ಟ್ವೀಟ್ ಮಾಡಿದ್ದಾರೆ.
'ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಇಂದು ನಡೆದ ದಾಳಿಯಿಂದ ದಿಗ್ಭ್ರಮೆಗೊಂಡಿದ್ದೇನೆ. ಮಿಷನ್ ಮತ್ತು ಅದರ ಸಿಬ್ಬಂದಿಯ ಸಮಗ್ರತೆಯ ವಿರುದ್ಧ ಇದು ಸಹಿಸಿಕೊಳ್ಳುವಂತಥದ್ದಲ್ಲ. ಬ್ರಿಟಿಷ್ ಸರ್ಕಾರವು ಯಾವಾಗಲೂ ಭಾರತೀಯ ಹೈಕಮಿಷನ್ ಕಚೇರಿಗೆ ನೀಡುವ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಟ್ವೀಟ್ ನಲ್ಲಿ ಅವರು ಉಲ್ಲೇಖಿಸಿದ್ದಾರೆ.












Click it and Unblock the Notifications