UK: ಭಾರತದಲ್ಲಿ ಏನು ಬದಲಾಗಿದೆ? ಎಂದವರಿಗೆ ಜೈ ಶಂಕರ್ ಉತ್ತರ
ಲಂಡನ್, ನವೆಂಬರ್ 14: ಯುಕೆ ಪ್ರವಾಸದಲ್ಲಿರುವ ಬಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಲಂಡನ್‌ನಲ್ಲಿ ಭಾರತದ ಆರ್ಥಿಕ ಕ್ರಾಂತಿ ಕುರಿತು ಪ್ರಶಂಶಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ (ದಶಕ) ಭಾರತ ಕಂಡ ಸಾಮಾಜಿಕ ಆರ್ಥಿಕ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವೇ ಕಾರಣ ಎಂದು ಅವರು ಸೋಮವಾರ ತಿಳಿಸಿದ್ದಾರೆ.
ಪ್ರಪಂಚ, ಯುಕೆ ಮತ್ತು ವಿಕಸನಗೊಳ್ಳುತ್ತಿರುವ ಭಾರತದಲ್ಲಿ ಅಭಿವೃದ್ಧಿ ಪರಿವರ್ತನೆಗಳು ಆಗುತ್ತಿವೆ. ರಾಷ್ಟ್ರದ ಪಥವನ್ನು ರೂಪಿಸುವಲ್ಲಿ ಪ್ರಧಾನಿ ಮೋದಿಯವರ ಪಾತ್ರ ಪ್ರಮುಖವಾದದ್ದು. ಹಿಂದು ಒಂದು ದಶಕದಲ್ಲಿ ಪ್ರಧಾನಿ ಮೋದಿಯವರ ನೀರ್ಧಾರ, ಯೋಜನೆಗಳು ಮಹತ್ವದ ಪರಿಣಾಮ ಬೀರಿವೆ. ಇದರಿಂದ ಭಾರತದಲ್ಲಿ ಸಾಮಾಜಿಕ ಆರ್ಥಿಕ ಕ್ರಾಂತಿ ಉಂಟಾಗಿದೆ ಎಂದು ವಿವರಿಸಿದರು.

ಜಗತ್ತು ಬದಲಾಗಿದೆ, ಯುಕೆ ಮತ್ತು ಭಾರತ ದೇಶಗಳು ಬದಲಾಗಿವೆ. ನಮ್ಮ ಸಂಬಂಧ ಬದಲಾಗಿದೆ ಎಂದು ಅವರು ಲಂಡನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತು ಆರಂಭಿಸಿದರು. ಭಾರತದಲ್ಲಿ ಬೇಟಿ ಪಢಾವೋ ಬೇಟಿ ಬಚಾವೋ, ಜನಧನ್ ಯೋಜನೆ, ಆವಾಸ್ ಯೋಜನೆ, ಸ್ಟಾರ್ಟ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಅಭಿಯಾನ ಮತ್ತು ಡಿಜಿಟಲ್ ಇಂಡಿಯಾಗಳಿಂದ ಸಾಕಷ್ಟು ಬದಲಾವಣೆ ಆಗಿದೆ.
ಉಪಕ್ರಮಗಳಿಂದ ಸಾಕಷ್ಟು ಬದಲಾವಣೆ
ಭಾರತದಲ್ಲಿ ಏನು ಬದಲಾಗಿದೆ ಎಂಬುವವರಿಗೆ ಈ ಉಪಕ್ರಮಗಳೇ ಉತ್ತರ ನೀಡುತ್ತವೆ. ಬೇಟಿ ಪಢಾವೋ, ಬೇಟಿ ಬಚಾವೋ ಮುಂತಾದ ಉಪಕ್ರಮಗಳು ಹೆಣ್ಣುಮಕ್ಕಳಿಗೆ ನೆರವಾಗಿವೆ. ಜನಧನ್ ಯೋಜನೆ, ಡಿಜಿಟಲ್ ಆರ್ಥಿಕ ವಹಿವಾಟು, ಮನೆಗಳ ನಿರ್ಮಾನ, ಕುಡಿಯುವ ನೀರು ಯೋಜನೆ, ಡಿಜಿಟಲ್ ಇಂಡಿಯಾ, ಉದ್ಯಮಕ್ಕೆ ಆದ್ಯತೆ ನೀಡಲಾಗಿದೆ ಎಂದು ಹತ್ತು ವರ್ಷಗಳಲ್ಲಿ ದೇಶದಲ್ಲಿ ಆದ ಬದಲಾವಣೆಗಳ ಕುರಿತು ಅವರು ಬೆಳಕು ಚೆಲ್ಲಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ವಹಿಸಿದ ಬಳಿಕ ಭಾರತದಲ್ಲಿ ಒಂದು ಸಾಮಾಜಿಕ ಆರ್ಥಿಕ ಕ್ರಾಂತಿಯಾಗಿದೆ. ಮುಂದಿನ ವರ್ಷ ಬಿಜೆಪಿ ಕೇಂದ್ರ ಸರ್ಕಾರ ತನ್ನ ಎರಡನೇ ಅವಧಿ ಪೂರ್ಣಗೊಳಿಸಲಿದೆ. ದೇಶದಲ್ಲಿ ಅನೇಕ ಹೊಸ ವಿಶ್ವವಿದ್ಯಾಲಯಗಳು, ಕಾಲೇಜುಗಳ ಸ್ಥಾಪನೆ ಆಗಿದೆ. ದೇಶವು ಹಿಂದಿನ 65 ವರ್ಷಗಳಲ್ಲಿ ಆಗದ ಬದಲಾವಣೆ ಕಳೆದ ಹತ್ತು ವರ್ಷಗಳಲ್ಲಿ ಆಗಿದೆ ಎಂದು ಹೇಳಿದರು.

ಪಾಲುದಾರಿಕೆಯ ಅಗತ್ಯತೆ ಇದೆ: ಜೈಶಂಕರ್
ಭಾರತ ಮತ್ತು ಯುಕೆ ರಾಷ್ಟ್ರಗಳಲ್ಲಿ ಆಳವಾದ ಬದಲಾವಣೆಗಳ ಬೆಳಕಿನಲ್ಲಿ ಮತ್ತೆ ಪಾಲುದಾರಿಕೆ ರೂಪಸಬೇಕಿದೆ. ಪಾಲುದಾರಿಗೆ ಮರುರೂಪಿಸಬೇಕಿದೆ. ಸಮಕಾಲೀನ ಯುಗದ ತಯಾರಿ ಜೊತೆಗೆ ಹೊಸದನ್ನು ಜತೆಯಾಗಿ ಅನ್ವೇಷಿಸಬೇಕಿದೆ. ಹಲವು ದಶಕಗಳಲ್ಲಿ ಈವರೆರಡು ದೇಶಗಳು ದೇಶಗಳು ಆಳವಾಗಿ ಪರಿವರ್ತನೆಗೊಂಡಿವೆ.
ನಮ್ಮ ದೇಶಗಳ ಸಂಬಂಧಗಳು, ಸಂಪರ್ಕಗಳು ಮತ್ತು ವಿಧಾನಗ ಅಳವಡಿಕೆಯಲ್ಲಿ ಬದಲಾಗಿದ್ದೇವೆ. ಇಂದಿನ ಸಮಕಾಲೀನ ಯುಗಕ್ಕೆ ನಾವು ಪಾಲುದಾರಿಕೆಯನ್ನು ಹೊಂದುವುದು ಮುಖ್ಯವಾಗಿದೆ ಎಂದು ಭವಿಷ್ಯದ ಪಾಲುದಾರಿಕೆಗಳ, ಉತ್ತಮ ಸಂಬಂಧದ ಆದ್ಯತೆ ಕುರಿತು ಅವರು ಮಾತನಾಡಿದರು.
ಸದ್ಯ ಲಂಡನ್ ಭೇಟಿಯಲ್ಲಿರುವ ಜೈಶಂಕರ್ ಅವರು ಶನಿವಾರ ಬ್ರಿಟನ್‌ಗೆ ತೆರಳಿದ್ದರು. ನವೆಂಬರ್ 15 ರಂದು ಅವರ ಯುಕೆ ಬೇಟಿ ಮುಕ್ತಾಯಗೊಳ್ಳಲಿದೆ. ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯು 'ಭಾರತ-ಯುಕೆ ಮಾರ್ಗಸೂಚಿ 2030' ಅನ್ನು 2021 ರಲ್ಲಿ ಆರಂಭಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications