Covid 'Eris' Variant: ಮತ್ತೆ ಶುರುವಾಯ್ತು ಕೊರೊನಾ ರೂಪಾಂತರಿ EG.5.1 ಪತ್ತೆ, ಏನಿದರ ಲಕ್ಷಣ?
ಬೆಂಗಳೂರು, ಆಗಸ್ಟ್ 07: ಭಾರತ ಸೇರಿದಂತೆ ವಿಶ್ವವನ್ನ ಬೆಚ್ಚಿ ಬೀಳಿಸಿದ್ದ ಕೋವಿಡ್ 19 (Covid 19 Eris Variant) ವೈರಸ್ ಭೀತಿ ಎಲ್ಲಡೆ ಕಡಿಮೆಯಾಗಿ ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳಿತು ಎನ್ನುಷ್ಟರಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಕೊರೊನಾ ಉಪತಳಿ 'ಇರಿಸ್' ಎನ್ನಲಾಗುತ್ತಿರುವ ವೈಜ್ಞಾನಿಕವಾಗಿ EG.5.1 ವೈರಸ್ ತಳಿ ಭೀತಿ ಸೃಷ್ಟಿಸುತ್ತಿದೆ.
ಕೋವಿಡ್ 19 ಮಹಾಮಾರಿ ನಮ್ಮನ್ನು ಸಂಪೂರ್ಣವಾಗಿ ತೊರೆದಿಲ್ಲ ಎಂಬುದಕ್ಕೆ ಹೊಸ ಪ್ರಕರಣಗಳು ಲಭಿಸಿದೆ. ಕೊರೊನಾ ಹೊಸ ಉಪತಳಿ (ರೂಪಾಂತರ) ಬ್ರಿಟನ್‌ನಲ್ಲಿ ಪತ್ತೆಯಾಗಿದೆ. ಕಳೆದ ಜುಲೈ ತಿಂಗಳಲ್ಲಿ ಇಂಗ್ಲೆಂಡ್ (UK) ಮೊದಲ ಬಾರಿಗೆ ಕೊರೊನಾ ಓಮಿಕ್ರಾನ್ ರೂಪಾಂತರಿಯು ವೇಗವಾಗಿ ಹರಡುತ್ತಿರುವುದನ್ನು ಅಲ್ಲಿನ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಬ್ರಿಟನ್ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಬಹಿರಂಗಗೊಳಿಸಿರುವ ಮಾಹಿತಿ ಪ್ರಕಾರ, ಪತ್ತೆಯಾದ ಈ ರೂಪಾಂತರಿ ಕೊರೊನಾ ತಳಿ EG.5.1 ಎಂದು ಅಡ್ಡಹೆಸರಿನಿಂದ ಕರೆಯಲಾಗುತ್ತಿದೆ. EG.5.1 ರೂಪಾಂತರದ ಒಂದು ಹೊಸ ಪ್ರಕರಣ ವರದಿ ಆಗಿದೆ. ಸದ್ಯ ಇದು ಸಹ ಸಾಮಾನ್ಯ ಕೊರೊನಾದಂತಹ ಲಕ್ಷಣಗಳನ್ನೇ ಹೊಂದಿದೆ ಎನ್ನಲಾಗಿದೆ.
ಜುಲೈ 31ರಂದು ಪ್ರಕರಣ ಪತ್ತೆ
ಅಂತಾರಾಷ್ಟ್ರ ಮಟ್ಟದಲ್ಲಿ ಕಂಡುಬರುತ್ತಿರುವ ಪ್ರಕರಣಗಳ ಪೈಕಿ ಜುಲೈ 31 ರಂದು ಪತ್ತೆಯಾದ ಈ ಪ್ರಕರಣವನ್ನು ಹೊಸ ರೂಪಾಂತರಿ ಎಂದು ವರ್ಗೀಕರಿಸಲಾಗಿದೆ. ವ್ಯಕ್ತಿ ಯೊಬ್ಬರ ಮಾದರಿ ಸಂಗ್ರಹಿಸಿ ತಳಿ ಸಂಶೋನಾ ಪ್ರಯೋಗಾಲಯದಲ್ಲಿ (ಜಿನೋಮ್) ಪರೀಕ್ಷಿಸಿದಾಗ ಈ EG.5.1 ಕೊರೊನಾ ತಳಿ ಪತ್ತೆ ಆಗಿದೆ.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ಸಾರ್ವಜನಿಕರಿಗೆ ಕೋವಿಡ್ ಲಸಿಕೆಗಳು ದೊರೆಯಬೇಕು. ಸೋಂಕಿನಿಂದ ಜನರನ್ನು ರಕ್ಷಿಸಬೇಕು ಎಂದು ಅವರು ಕರೆ ನೀಡಿದ್ದರು. ಅದರ ಬೆನ್ನಲ್ಲೆ ಎರಡು ವಾರದ ಹಿಂದಷ್ಟೇ ವಿಶ ಆರೋಗ್ಯ ಸಂಸ್ಥೆ (WHO) EG.5.1 ರೂಪಾಂತರಿ ಪತ್ತೆ ಮಾಡಲು ಕಾರ್ಯಾರಂಭ ಮಾಡಿತು. ಅದರ ಬೆನ್ನಲ್ಲೆ ಲಂಡನ್‌ನಲ್ಲಿ ಈ ರೂಪಾಂತರಿ ಪ್ರಕರಣ ಬೆಳಕಿಗೆ ಬಂದ ಆತಂಕ ನಿರ್ಮಿಸಿದೆ.

ಹೆಚ್ಚು ಗಂಭೀರ ಸ್ವರೂಪದ್ದಲ್ಲ: ಎಚ್ಚರಿಕೆ ಅಗತ್ಯ
ಇಂಗ್ಲೆಂಡ್‌ನ ಇತ್ತೀಚಿನ ಅಂಕಿ ಅಂಶಗಳನ್ನು ಗಮನಿಸಿದರೆ, ದೇಶದ ಎಲ್ಲ ಕೊರೊನಾ ಪ್ರಕರಣಗಳ ಪೈಕಿ ಈ ಇಜಿ 5.1 ತಳಿ ಶೇಕಡಾ 14.6 ರಷ್ಟಿದೆ ಎಂದು ತಿಳಿಸಿದೆ. ಆದರೆ ಈ ಉಪತಳಿ ಹೆಚ್ಚು ಗಂಭೀರ ಸ್ವರೂಪದ್ದಲ್ಲ ಎಂದು ಹೇಳಿದೆ. ಆದರೆ ಕಟ್ಟುನಿಟ್ಟಿನ ಜಾಗೃತೆ ವಹಿಸುವುದು, ಲಸಿಕೆ ಪಡೆಯುವುದು ಮುಂದುವರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಈ ದೇಶದಲ್ಲಿ ಪ್ರತಿ ವಾರದ ಕಂಡು ಬರುತ್ತಿದ್ದ ಪ್ರಕರಣಗಳಲ್ಲಿ ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಸಣ್ಣ ಪ್ರಯಾಣದಲ್ಲಿ ಏರಿಕೆ ಆಗಿದೆ. ಆದ್ದರಿಂದ ನಿರ್ಲಕ್ಷ್ಯ ವಹಿಸದೇ ಜನಮರು ಅನಾರೋಗ್ಯ, ವೈರಸ್ ಗುಣಲಕ್ಷಣಗಳು ಕಂಡು ಬರುತ್ತಿದ್ದಂತೆ ಜಾಗೃತರಾಗಬೇಕು. ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಕೆ ಹೆಚ್ಚಾಗಬೇಕು ಎಂದು ಬ್ರಿಟನ್ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.












Click it and Unblock the Notifications