ಮೈಸೂರು ಹುಲಿ ಟಿಪ್ಪು ಸುಲ್ತಾನ್ ಖಡ್ಗಕ್ಕೆ ಕಡಿಮೆಯಾಗದ ಮೌಲ್ಯ, 140 ಕೋಟಿ ರೂ.ಗೆ ಹರಾಜು
ವಾಷಿಂಗ್ಟನ್, ಮೇ. 25: 18ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಅವರ ಖಡ್ಗಕ್ಕೆ ದಿನ ದಿನಕ್ಕೂ ಮೌಲ್ಯ ಹೆಚ್ಚಾಗುತ್ತಲೇ ಇದೆ. ಮದ್ಯದ ದೊರೆ ವಿಜಯ್ ಮಲ್ಯ ಬಳಿಯಿದ್ದ ಈ ಖಡ್ಗವನ್ನು ಲಂಡನ್‌ನಲ್ಲಿ ಹರಾಜು ಮಾಡಲಾಗಿದ್ದು, ಅದರ ಬೆಲೆ ಮತ್ತಷ್ಟು ಹೆಚ್ಚಿದೆ. ಬರೋಬ್ಬರಿ 140 ಕೋಟಿ ರೂಪಾಯಿಗೆ ಟಿಪ್ಪು ಸುಲ್ತಾನ್ ಅವರ ಖಡ್ಗ ಹರಾಜಾಗಿದೆ.
ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 14 ಮಿಲಿಯನ್ ಪೌಂಡ್‌ಗಳಿಗೆ ($ 17.4 ಮಿಲಿಯನ್ ಅಥವಾ 140 ಕೋಟಿ ರೂ) ಮಾರಾಟವಾಗಿದೆ. ಖಡ್ಗದ ಬೆಲೆ ಅಂದಾಜಿನ ಏಳು ಪಟ್ಟು ಹೆಚ್ಚಾಗಿದೆ ಎಂದು ಮಾರಾಟವನ್ನು ಆಯೋಜಿಸಿದ ಹರಾಜು ಸಂಸ್ಥೆ ಬೊನ್‌ಹಾಮ್ಸ್ ಹೇಳಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜೊತೆಗೆ ವೈಯಕ್ತಿಕ ಸಂಬಂಧವನ್ನು ಸಾಬೀತುಪಡಿಸಿದ ಶಸ್ತ್ರಾಸ್ತ್ರಗಳಲ್ಲಿ ಈ ಖಡ್ಗವು ಅತ್ಯಂತ ಪ್ರಮುಖವಾಗಿದೆ ಎಂದು ಬೊನ್‌ಹಾಮ್ಸ್ ಹೇಳಿದೆ.
#TipuSultan's sword sold for an eye popping INR 144.6 Crores.
— India Muslim History (@syedurahman) May 23, 2023
The Bedchamber Sword of Tipu Sultan (reg. 1782-1799), a fine gold-koftgari-hilted steel sword (sukhela) has been sold for a staggering £14,080,900 pic.twitter.com/ASgrFtd5IF
ಟಿಪ್ಪು ಸುಲ್ತಾನ್ 18 ನೇ ಶತಮಾನದ ಮೈಸೂರಿನ ಪ್ರಮುಖ ದೊರೆ. ಮೈಸೂರು ಹುಲಿ ಎಂದು ಖ್ಯಾತಿ ಪಡೆದಿರುವ ಅವರು, 1175 ಮತ್ತು 1779 ರ ನಡುವೆ ಹಲವಾರು ಸಂದರ್ಭಗಳಲ್ಲಿ ಮರಾಠರ ವಿರುದ್ಧ ಹೋರಾಡಿದ್ದಾರೆ.

"ಈ ಖಡ್ಗವು ಅಸಾಧಾರಣ ಇತಿಹಾಸವನ್ನು ಹೊಂದಿದೆ. ಬೆರಗುಗೊಳಿಸುವ ಮೂಲ ಮತ್ತು ಅಪ್ರತಿಮ ಕರಕುಶಲತೆಯನ್ನು ಹೊಂದಿದೆ. ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಎಲ್ಲಾ ಆಯುಧಗಳಲ್ಲಿ ಶ್ರೇಷ್ಠವಾಗಿದೆ. ಸುಲ್ತಾನನೊಂದಿಗಿನ ಅದರ ನಿಕಟ ವೈಯಕ್ತಿಕ ಒಡನಾಟ, ಅದನ್ನು ವಶಪಡಿಸಿಕೊಂಡ ದಿನದವರೆಗೆ ಇದ್ದದ್ದು ನೋಡಬಹುದು" ಎಂದು ಇಸ್ಲಾಮಿಕ್ ಮತ್ತು ಭಾರತೀಯ ಕಲೆ ಮತ್ತು ಹರಾಜುದಾರರ ಬೋನ್‌ಹಾಮ್ಸ್ ಮುಖ್ಯಸ್ಥ ಆಲಿವರ್ ವೈಟ್ ಹೇಳಿದರು.
ಈ ಖಡ್ಗವು ಮೇ 4, 1799 ರಂದು ಟಿಪ್ಪು ಸುಲ್ತಾನ್ ಅವರ ಸೋಲಿನ ನಂತರ ಸೆರಿಂಗಪಟ್ಟಣದ ಅರಮನೆಯಿಂದ ಬ್ರಿಟಿಷ್ ಪಡೆಗಳು ತೆಗೆದುಕೊಂಡು ಹೋದ ಆಯುಧಗಳಲ್ಲಿ ಒಂದಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೇಳುತ್ತದೆ. ಅವರ ಖಾಸಗಿ ಕೋಣೆಯಲ್ಲಿ ಈ ಖಡ್ಗ ಪತ್ತೆಯಾಗಿದೆ. ಅದೆಲ್ಲಿ ' ಸ್ವೋರ್ಡ್ ಆಫ್ ದಿ ರೂಲರ್' ಎಂದು ಕೆತ್ತಲಾಗಿದೆ. ಬ್ರಿಟಿಷರು ಮೇಜರ್ ಜನರಲ್ ಡೇವಿಡ್ ಬೇರ್ಡ್‌ಗೆ ಟ್ರೋಫಿಯಾಗಿ ಈ ಖಡ್ಗವನ್ನು ನೀಡಿದ್ದರು.

2004 ರಲ್ಲಿ ವಿಜಯ್ ಮಲ್ಯ ಖರೀದಿಸಿದ್ದ ಈ ಖಡ್ಗದ ಬೆಲೆ 1.5 ಕೋಟಿ, ಅದೇ ಖಡ್ಗ ಈಗ 145 ಕೋಟಿ ರೂಪಾಯಿಗೆ ಹರಾಜಾಗಿದೆ. ಆದರೆ, ಈ ಖಡ್ಗ ತಮ್ಮ ಕುಟುಂಬಕ್ಕೆ ದುರಾದೃಷ್ಟ ರಂದಿದೆ ಎಂದು ಮಲ್ಯ ಭಾವಿಸಿದ್ದರು.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications