Get Updates
Get notified of breaking news, exclusive insights, and must-see stories!

ವಿಮಾನದಲ್ಲಿ ಮಾರ್ಗಮಧ್ಯೆ ಮದ್ಯ ಮಾಡಿದ ಗಲಾಟೆ: ದೆಹಲಿಗೆ ವಾಪಸ್ಸಾದ ವಿಮಾನ- ಎಫ್‌ಐಆರ್ ದಾಖಲು!

ದೆಹಲಿ ಏಪ್ರಿಲ್ 10: ವಿಮಾನದಲ್ಲಿ ಪ್ರಯಾಣಿಕರು ಅಶಿಸ್ತಿನಿಂದ ವರ್ತಿಸುತ್ತಿರುವ ಘಟನೆಗಳು ಪ್ರತಿ ದಿನ ಕಂಡು ಬರುತ್ತಿವೆ. ಇತ್ತೀಚೆಗೆ ಪಾನಪತ್ತ ಪ್ರಯಾಣಿಕರು ವಿಮಾನ ಸಿಬ್ಬಂದಿಗಳಿಗೆ ಹಾಗೂ ಸಹ ಪ್ರಯಾಣಿಕರಿಗೆ ತೊಂದರೆಗಳನ್ನು ನೀಡುವ ಮೂಲಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವುದು ವಿಮಾನದಲ್ಲಿ ಪ್ರಯಾಣಿಕರ ಸುರಕ್ಷತೆಯ ಪ್ರಶ್ನೆ ಉದ್ಬವಿಸಿದೆ.

ಇಂದು ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ. ಏರ್ ಇಂಡಿಯಾ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನು ವಿಮಾನದಲ್ಲಿ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ. ದೆಹಲಿ-ಲಂಡನ್ AI 111 ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ಕಾರಣದಿಂದ ಏರ್ ಇಂಡಿಯಾ ದೆಹಲಿ-ಲಂಡನ್ ವಿಮಾನವನ್ನು ದೆಹಲಿಗೆ ಹಿಂದಿರುಗಿಸಲಾಗಿದೆ. ಅಶಿಸ್ತಿನ ಪುರುಷ ಪ್ರಯಾಣಿಕರಿದ್ದ ಕಾರಣ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGIA) ಮರಳಿದೆ.

Passenger riot in the plane: Flight returned to Delhi - FIR registered!

ವಿಮಾನಯಾನ ಸಂಸ್ಥೆಯ ಅಧಿಕಾರಿಯ ಪ್ರಕಾರ, ಪ್ರಯಾಣಿಕನೊಬ್ಬ ವಿಮಾನ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾನೆ. ಹೀಗಾಗಿ ಏರ್ ಇಂಡಿಯಾ, ಪ್ರಯಾಣಿಕನನ್ನು ಲ್ಯಾಂಡಿಂಗ್ ನಂತರ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದೆ. ವರದಿಯ ನಂತರ, ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದೆ.

"ಏರ್ ಇಂಡಿಯಾ ದೆಹಲಿ-ಲಂಡನ್‌ AI 111 ವಿಮಾನವನ್ನು ಇಂದು ದೆಹಲಿಗೆ ಹಿಂದಿರುಗಿಸಲು ನಿರ್ಧರಿಸಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕನ ಗಂಭೀರ ಅಶಿಸ್ತಿನ ವರ್ತನೆಯಿಂದಾಗಿ ನಿರ್ಗಮನದ ಸ್ವಲ್ಪ ಸಮಯದ ನಂತರ ದೆಹಲಿಗೆ ಮರಳಿತು. ಮೌಖಿಕ ಮತ್ತು ಲಿಖಿತ ಎಚ್ಚರಿಕೆಗಳಿಗೆ ಕಿವಿಗೊಡದೆ, ಇಬ್ಬರು ಕ್ಯಾಬಿನ್ ಸಿಬ್ಬಂದಿಗಳಿಗೆ ಪ್ರಯಾಣಿಕರು ದೈಹಿಕ ಹಾನಿಯನ್ನುಂಟುಮಾಡುವುದು ಸೇರಿದಂತೆ ಅಶಿಸ್ತಿನ ವರ್ತನೆಯನ್ನು ಮುಂದುವರೆಸಿದರು. ಹೀಗಾಗಿ ಪ್ರಯಾಣಿಕನನ್ನು ದೆಹಲಿ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿದ್ದಾರೆ" ಎಂದು ಟಾಟಾ ಗ್ರೂಪ್‌ನ ಏರ್‌ಲೈನ್ ಮಾಧ್ಯಮಕ್ಕೆ ತಿಳಿಸಿದೆ.

ಈ ಪ್ರಯಾಣಿಕ ಪ್ರಸ್ತುತ ದೆಹಲಿ ವಿಮಾನ ನಿಲ್ದಾಣದಲ್ಲಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ವಿಮಾನದಲ್ಲಿ ಸುಮಾರು 225 ಪ್ರಯಾಣಿಕರಿದ್ದರು. ಅಶಿಸ್ತಿನ ಪ್ರಯಾಣಿಕನನ್ನು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಮತ್ತು ನಂತರ ವಿಮಾನವು ಲಂಡನ್ ಹೀಥ್ರೂಗೆ ಹೊರಟಿದೆ.

Passenger riot in the plane: Flight returned to Delhi - FIR registered!

ಇತ್ತೀಚಿನ ದಿನಗಳಲ್ಲಿ, ಪುರುಷ ಪ್ರಯಾಣಿಕನೊಬ್ಬ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಗಳು ಮತ್ತು ವಿಮಾನಗಳ ಶೌಚಾಲಯದಲ್ಲಿ ಜನರು ಧೂಮಪಾನ ಮಾಡುವುದು ಸೇರಿದಂತೆ ವಿಮಾನ ಪ್ರಯಾಣಿಕರು ಅಶಿಸ್ತಿನ ವರ್ತನೆಯ ಅನೇಕ ಪ್ರಕರಣಗಳಿವೆ.

ಆದ್ದರಿಂದ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ಘಟನೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಮತ್ತು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು ಸಂಬಂಧಿಸಿದ ಪ್ರಯಾಣಿಕರಿಗೆ ಹಾರಾಟದ ನಿಷೇಧವನ್ನು ವಿಧಿಸಿವೆ. ಇತ್ತೀಚೆಗೆ ಡಿಜಿಸಿಎ ಮುಖ್ಯಸ್ಥರು ವಿಮಾನಗಳಲ್ಲಿ ಅಶಿಸ್ತಿನ ವರ್ತನೆಯಲ್ಲಿ ತೊಡಗಿರುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ಅಧಿಕಾರವಿದೆ ಎಂದು ಹೇಳಿದರು.

Passenger riot in the plane: Flight returned to Delhi - FIR registered!

ಜನವರಿಯಲ್ಲಿ, DGCA ಎರಡು ಬಾರಿ ಪ್ರಯಾಣಿಕರ ಅಶಿಸ್ತಿನ ವರ್ತನೆಯ ಘಟನೆಗಳಿಗೆ ಸಂಬಂಧಿಸಿದಂತೆ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಗೆ ದಂಡ ವಿಧಿಸಿತು. ಜನವರಿ 24 ರಂದು, ಡಿಸೆಂಬರ್ 6, 2022 ರಂದು ಪ್ಯಾರಿಸ್-ನವದೆಹಲಿ ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆಯ ಎರಡು ಘಟನೆಗಳನ್ನು ವರದಿ ಮಾಡದಿದ್ದಕ್ಕಾಗಿ ನಿಯಂತ್ರಕರು ಏರ್‌ಲೈನ್‌ಗೆ 10 ಲಕ್ಷ ರೂ. ದಂಡವನ್ನು ವಿಧಿಸಿದರು.

ಜನವರಿ 20 ರಂದು ವಾಚ್‌ಡಾಗ್ ಏರ್ ಇಂಡಿಯಾಕ್ಕೆ 30 ಲಕ್ಷ ದಂಡವನ್ನು ವಿಧಿಸಲಾಗಿತ್ತು. ನವೆಂಬರ್‌ನಲ್ಲಿ ಮಹಿಳಾ ಸಹ-ಪ್ರಯಾಣಿಕರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ನ್ಯೂಯಾರ್ಕ್-ದೆಹಲಿ ವಿಮಾನದ ಪೈಲಟ್-ಇನ್-ಕಮಾಂಡ್ ಪರವಾನಗಿಯನ್ನು ಅಮಾನತುಗೊಳಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ, ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಏರ್ ಇಂಡಿಯಾದ ವಿಮಾನದೊಳಗಿನ ಸೇವೆಗಳ ನಿರ್ದೇಶಕರಿಗೆ 3 ಲಕ್ಷ ದಂಡವನ್ನು ವಿಧಿಸಲಾಗಿದೆ. 2017 ರಿಂದ ಒಟ್ಟು 143 ಪ್ರಯಾಣಿಕರನ್ನು 'ನೊ ಫ್ಲೈ ಲಿಸ್ಟ್'ಗೆ ಸೇರಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+