ಲಂಡನ್ : ಖಲಿಸ್ತಾನಿ ಪ್ರತಿಭಟನೆ ಮಧ್ಯೆ ಹೈಕಮಿಷನ್ ಕಚೇರಿ ಮೇಲೆ ಬೃಹತ್ 'ತ್ರಿವರ್ಣ ಧ್ವಜ' ಹಾಕಿದ ಸಿಬ್ಬಂದಿ
ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆಯ ನಡುವೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡದ ಮೇಲೆ ಬೃಹತ್ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಇದು ಈ ಹಿಂದೆ ಇದ್ದ ರಾಷ್ಟ್ರಧ್ವಜಗಳಿಗಿಂತಲೂ ಅತೀ ದೊಡ್ಡ ಧ್ವಜವಾಗಿದೆ.
ಬೆಂಗಳೂರು, ಮಾರ್ಚ್ 23: ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆಯ ನಡುವೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡದ ಮೇಲೆ ಬೃಹತ್ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಇದು ಈ ಹಿಂದೆ ಇದ್ದ ರಾಷ್ಟ್ರಧ್ವಜಗಳಿಗಿಂತಲೂ ಅತೀ ದೊಡ್ಡ ಧ್ವಜವಾಗಿದೆ.
ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡದ ಮುಂದೆ ಇತ್ತೀಚೆಗೆ ಪ್ರತಿಭಟನೆ ನಡೆಸುತ್ತಿದ್ದ ಖಲಿಸ್ತಾನಿಗರು ಕಚೇರಿ ಮೇಲೆ ಏರಿ ಭಾರತದ ರಾಷ್ಟ್ರಧ್ವಜ ಕೆಳೆಗೆ ಇಳಿಸಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು. ಇದರ ಬಳಿಕ ಮುಂದುವರೆದಿದ್ದ ಪ್ರತಿಭಟನೆ ನಡೆಯುವೆಯು ಎಂದಿನಂತೆ ಕಚೇರಿ ಮೇಲೆ ಬೃಹತ್ ತ್ರಿವರ್ಣ ಧ್ವಜವ್ನು ಹಾರಿಸಲಾಗಿದೆ ಎಂದು ಲಂಡನ್‌ನನಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಮತ್ತೆ ಬುಧವಾರ ಮಾರ್ಚ್ 22ರಂದು 2,000 ಕ್ಕೂ ಹೆಚ್ಚು ಖಲಿಸ್ತಾನಿ ಬೆಂಬಲಿಗರು ಪುನಃ ಹೈಕಮಿಷನ್ ಕಚೇರಿ ಕಟ್ಟಡದ ಮುಂದೆ ಜಮಾಸಿದರು. ಅವರಲ್ಲಿ ಕೆಲವರು ಅಲ್ಲಿನ ಲಂಡನ್ ಪೊಲೀಸರ ಮೇಲೆ ಶಾಯಿ, ನೀರಿನ ಬಾಟಲಿಗಳು ಮತ್ತು ಪುಡಿ ಬಣ್ಣಗಳನ್ನು ಎಸೆದರು ಘೋಷಣೆ ಕೂಗಿದರು. ಭಾರತೀಯ ರಾಯಭಾರ ಕಚೇರಿ ಮುಂದೆ ದೊಡ್ಡ ಹೈಡ್ರಾಮವೇ ನಡೆಯಿತು.
ರಾಯಭಾರ ಕಚೇರಿ ಸಿಬ್ಬಂದಿ ಮಾನವ ಸರಪಳಿ
ಈ ಮಧ್ಯೆ ಲಂಡನ್ ನಲ್ಲಿನ ರಾಯಭಾರ ಕಚೇರಿ ಸಿಬ್ಬಂದಿ ಧ್ವಜ ಹಾರಿಸಿದ ಫೋಟೋ/ವಿಡಿಯೋ ಹಂಚಿಕೊಂಡಿದೆ. ಅದರಲ್ಲಿ ಕಚೇರಿಯ ಟೆರೇಸ್ ಮೇಲೆ ಸುಮಾರು ಹನ್ನೆರಡು ರಾಯಭಾರ ಕಚೇರಿ ಸಿಬ್ಬಂದಿ ಮಾನವ ಸರಪಳಿ ಮಾಡಿ ನಿಂತು ತ್ರಿವರ್ಣ ಧ್ವಜ ಹಿಡಿದಿರುವ ದೃಶ್ಯ ಕಂಡು ಬರುತ್ತದೆ. ಆ ಮೂಲಕ ಸಿಬ್ಬಂದಿ ದೇಶಾಭಿಮಾನ ಮೆರೆದಿದ್ದಾರೆ.
ಕಳೆದ ಭಾನುವಾ ಖಲಿಸ್ತಾನಿ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನೆಗೆ ಇಳಿದಿದ್ದರು. ಈ ಸಂಬಂಧ ಅಂದಿನಿಂದ ಕಚೇರಿ ಮುಂದೆ ಪೊಲೀಸರು ಸೂಕ್ತ ಬಿಗಿ ಕ್ರಮ ಕೈಗೊಳ್ಳುತ್ತಿದ್ದರು.

ದೆಹಲಿಯ ಪೊಲೀಸರು ಬ್ರಿಟಿಷ್ ಹೈಕಮಿಷನ್‌ನ ಹೊರಗೆ ಟ್ರಾಫಿಕ್ ಬ್ಯಾರಿಕೇಡ್ ತೆಗೆದು ಹಾಕಿದ ಕೆಲವೇ ದಿನಗಳಲ್ಲಿ ಲಂಡನ್‌ನಲ್ಲಿ ಹೆಚ್ಚುವರಿ ಭದ್ರತೆಯು ಬಂದಿತು. ಈ ಕ್ರಮವು ಲಂಡನ್‌ನಲ್ಲಿನ ಉಲ್ಲಂಘನೆಯ ಬಗ್ಗೆ ಭಾರತದ ಅಸಮಾಧಾನದ ಪ್ರದರ್ಶನ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ. ಕಚೇರಿ ಮುಂದೆ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಹಾಕಲಾಗಿದ್ದ , ಸಂಚಾರಕ್ಕೆ ಅಡೆತಡೆ ಉಂಡು ಮಾಡುತ್ತಿದ್ದ ಬ್ಯಾರಿಕೇಡ್ ತೆಗೆದುಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಗೆ ಆಕ್ರೋಶ, ವಿವರಣೆ ಕೇಳಿದ್ದ ಭಾರತ
ಲಂಡನ್‌ನಲ್ಲಿನ ಹೈಕಮಿಷನ್ ಆವರಣದ ಮುಂದೆ ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪು ಪ್ರತಿಭಟನೆ ನಡೆಸುತ್ತಿತ್ತು. ಅದರಲ್ಲಿ ಒಂದಿಬ್ಬರು ಏಕಾಎಕಿ ಹೈಕಮಿಷನ್ ಕಚೇರಿ ಮೇಲೇರಿ ತ್ರಿವರ್ಣ ಧ್ವಜ ಕಳೆಗೆ ಇಳಿಸಿದ ಘಟನೆ ಭಾನುವಾರ ನಡೆದಿತ್ತು.
ಈ ಕುರಿತು ವಿಡಿಯೋ ವೈರಲ್ ಆಗಿತ್ತು.
ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಭಾನುವಾರ ರಾತ್ರಿಯೇ ಕೂಡಲೇ ಕ್ರಮ ವಹಿಸಿತು. ಹೈಕಮಿಷನ್ ಆವರಣಕ್ಕೆ ಖಾಲಿಸ್ತಾನಿಗಳ ಪ್ರವೇಶಕ್ಕೆ ಅನುಮತಿಸಿದ ಬ್ರಿಟಿಷ್ ಭದ್ರತೆಯ ವಿಫಲತೆ ಬಗ್ಗೆ ವಿವರಣೆ ಕೇಳಿತು. ಅಂದು ರಾತ್ರಿಯೇ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿತು. ಲಂಡನ್‌ನಲ್ಲಿ (UK) ಇರುವ ಭಾರತೀಯ ರಾಜತಾಂತ್ರಿಕ ಕಚೇರಿಗಳ ವಿಚಾರದಲ್ಲಿ ಅಲ್ಲಿನ ಬ್ರೀಟಿಷ್ ಸರ್ಕಾರ ಅಗತ್ಯ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ಸರಿಯಲ್ಲ ಎಚ್ಚರಿಕೆ ನೀಡಿತು.
ತ್ರಿವರ್ಣ ಧ್ವಜ ಕೆಳಗಿಳಿಸಿದ ಘಟನೆಯಲ್ಲಿ ಭಾಗಿಯಾದವರನ್ನು ಗುರುತಿಸಿ ಬಂಧಿಸಬೇಕು. ಅವರೆಲ್ಲರನ್ನು ವಿಚಾರಣೆಗೆ ಒಳಪಡಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಹಾಗೂ ಕಚೇರಿಗೆ ಅಗತ್ಯ ಭದ್ರತಾ ಕೈಗೊಳ್ಳುವಂತೆ ಹೇಳಿಕೆಯಲ್ಲಿ ಭಾರತ ಉಲ್ಲೇಖಿಸಿತ್ತು.












Click it and Unblock the Notifications