ಖ್ಯಾತ ವಕೀಲ ಹರೀಶ್ ಸಾಳ್ವೆ ಮದುವೆಯಲ್ಲಿ ಲಲಿತ್ ಮೋದಿ ಹಾಜರ್!
ಭಾರತದ ಮಾಜಿ ಸಾಲಿಸಿಟರ್ ಜನರಲ್ ಹಾಗೂ ಖ್ಯಾತ ವಕೀಲರಾದ ಹರೀಶ್ ಸಾಳ್ವೆ ಅವರು, ತಮ್ಮ 68ನೇ ವಯಸ್ಸಿನಲ್ಲಿ ಮತ್ತೊಮ್ಮೆ ಸಪ್ತಪದಿ ತುಳಿದಿದ್ದಾರೆ. ಈ ಮೂಲಕ ವಕೀಲರಾದ ಸಾಳ್ವೆ 68ನೇ ವಯಸ್ಸಲ್ಲಿ 3ನೇ ಬಾರಿಗೆ ಸಪ್ತಪದಿ ತುಳಿದಿದ್ದಾರೆ. ಇದೀಗ ಮದುವೆ ಜೊತೆಗೆ ಮತ್ತೊಂದು ವಿಚಾರವೂ ಸದ್ದು ಮಾಡುತ್ತಿದ್ದು, ಹರೀಶ್ ಸಾಳ್ವೆ ಅವರ ಮದುವೆಗೆ ಹಾಜರ್ ಆಗಿದ್ದ ಅತಿಥಿಗಳಲ್ಲಿ ಲಲಿತ್ ಮೋದಿ ಕೂಡ ಸೇರಿದ್ದರು.
ಹೌದು, ಟ್ರಿನಾ ಎಂಬುವವರ ಜೊತೆ ಹರೀಶ್ ಸಾಳ್ವೆ ಲಂಡನ್‌ನಲ್ಲಿ ಮದುವೆ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಜಗತ್ತಿನ ಹಲವು ಗಣ್ಯರು ಹಾಜರಾಗಿ ಶುಭ ಕೋರಿದ್ದಾರೆ. ಸಾಳ್ವೆ ಅವರ ವಿವಾಹ ಸಮಾರಂಭದಲ್ಲಿ ನೀತಾ ಅಂಬಾನಿ ಸೇರಿದಂತೆ ಗೋಪಿ ಹಿಂದುಜಾ & ಉಜ್ವಲ್ ರಾವತ್ ಭಾಗವಹಿಸಿದ್ದರು. ಜೊತೆಗೆ ಲಲಿತ್ ಮೋದಿ ಕೂಡ ಕಾರ್ಯಕ್ರಮಕ್ಕೆ ಹಾಜರಾಗಿ ನವ ಜೋಡಿಗೆ ಶುಭ ಕೋರಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ಮದುವೆ ವಿಡಿಯೋ ಹಾಗೂ ಫೋಟೋಗಳು ಫುಲ್ ಹವಾ ಎಬ್ಬಿಸಿವೆ.

ಹಿಂದೆಯೂ ಮದುವೆಯಾಗಿದ್ದರು ಸಾಳ್ವೆ
ಇನ್ನು ಹರೀಶ್ ಸಾಳ್ವೆ ಅವರು 1982ರಲ್ಲಿ ಮೀನಾಕ್ಷಿ ಅವರನ್ನು ಮದುವೆಯಾಗಿದ್ದರು. ಆದರೆ 2020ರಲ್ಲಿ ವಿಚ್ಛೇದನ ನೀಡಿದ್ದರು. 2020ರಲ್ಲಿ ಕಾರೋಲಿನ್ ಬ್ರೊಸಾರ್ಡ್ ಜೊತೆಗೆ ಸಪ್ತಪದಿ ತುಳಿದಿದ್ದರು. ಇದೀಗ ಮತ್ತೊಮ್ಮೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಕುಲಭೂಷಣ್ ಜಾಧವ್ ಕೇಸ್ ಸೇರಿ ಹಲವು ಉನ್ನತ ಮಟ್ಟದ ಕೇಸ್‌ಗಳಲ್ಲಿ ಸಾಳ್ವೆ ವಕೀಲರಾಗಿದ್ದರು. ಜಾಧವ್ ಪ್ರಕರಣದಲ್ಲಿ ₹1 ಶುಲ್ಕ ಹಣ ಪಡೆದು ಸುದ್ದಿಯಾಗಿದ್ದರು. ಅಲ್ಲದೆ 2015ರಲ್ಲಿ ಹರೀಶ್ ಸಾಳ್ವೆ ಪದ್ಮ ಭೂಷಣ ಪ್ರಶಸ್ತಿಗೆ ಕೂಡ ಭಾಜನರಾಗಿದ್ದರು.
()[IN PICS]- Former Solicitor General of India, Harish Salve took wedding vows for the third time at the age of 68. #HarishSalve #marriage pic.twitter.com/KJn665rhtC
— TIMES NOW (@TimesNow) September 4, 2023
ಕೇವಲ 1 ರೂಪಾಯಿ ಶುಲ್ಕ!
ಅಂದಹಾಗೆ ಗೂಢಚಾರದ ಆರೋಪದಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್‌ನಿಂದ ಗಲ್ಲುಶಿಕ್ಷೆಗೆ ಗುರಿಯಾಗಿದ್ದ, ಭಾರತೀಯ ಕುಲಭೂಷಣ್ ಜಾಧವ್ ಅವರ ಕೇಸ್ ಅನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಿಭಾಯಿಸಿದ್ದರು. ಭಾರತದ ಪರವಾಗಿ ವಾದ ಮಂಡಿಸಿ, ಭಾರತೀಯರ ಮನಸ್ಸು ಗೆದ್ದಿದ್ದರು ಹರೀಶ್ ಸಾಳ್ವೆ. ಹಾಗೇ ಈ ಕೇಸ್‌ನಲ್ಲಿ ವಾದ ಮಾಡಿದ ಹಿನ್ನೆಲೆ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವ್ರು, ವಕೀಲ ಹರೀಶ್ ಸಾಳ್ವೆ ಅವರಿಗೆ ಶುಲ್ಕ ನೀಡಲು ಮುಂದಾಗಿದ್ದರು. ಆದರೆ ಆಗ ಭಾರತ ಸರ್ಕಾರದಿಂದ ಕೇವಲ 1 ರೂಪಾಯಿ ಶುಲ್ಕ ಪಡೆದು ಮತ್ತೆ ಭಾರತೀಯರ ಹೃದಯ ಗೆದ್ದರು.
()Former Solicitor general of India, #HarishSalve got married for the 3rd time. Nita Ambani, Lalit Modi amongst others attended the ceremony.
— Kumar Mihir Mishra (@Mihirlawyer) September 4, 2023
Hopefully he is lucky the third time. pic.twitter.com/RVSPXyTujC
ಒಟ್ನಲ್ಲಿ ಹಿರಿಯ ವಕೀಲರ ಮದುವೆ ಇದೀಗ ಸದ್ದು ಮಾಡುತ್ತಿದೆ. ದೊಡ್ಡ ದೊಡ್ಡ ಸಂಸ್ಥೆ ಹಾಗೂ ದೊಡ್ಡ ದೊಡ್ಡ ಉದ್ಯಮಿಗಳು ಹರೀಶ್ ಸಾಳ್ವೆ ಅವರ ಮದುವೆಗೆ ಹಾಜರಾಗಿದ್ರು. ಲಂಡನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮದುವೆ ನೆರವೇರಿದ್ದು, ಎಲ್ಲೆಲ್ಲೂ ಈ ಮದುವೆ ವಿಡಿಯೋ ಹಾಗೂ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.












Click it and Unblock the Notifications