ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ಬಿಟ್ಟ ಮುಠ್ಠಾಳ ಮುಖ್ಯಮಂತ್ರಿ ಅಧಿಕಾರನೂ ಬಿಡಲಿ

By Srinath
|
Google Oneindia Kannada News

cauvery-row-intensifies-madegowda-criticises-cm-shettar
ಬೆಳಗಾವಿ, ಡಿ.7: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳೋಣವೆಂದು ನಿನ್ನೆ ಸರ್ವಪಕ್ಷ ಸಭೆ ನಡೆಸಿದ್ದ ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸದನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸದನಕ್ಕೆ ತಿಳಿಸದೆಯೇ, ಏಕಪಕ್ಷೀಯವಾಗಿ, ಕದ್ದುಮುಚ್ಚಿ ನೀರು ಬಿಟ್ಟಿರುವುದಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಕರೆದಿರುವ ಬೆಳಗಾವಿ ವಿಶೇಷ ಅಧಿವೇಶನವನ್ನು ಇಂದೂ ಕಾವೇರಿ ವಿವಾದ ಆಪೋಶನ ತೆಗೆದುಕೊಳ್ಳಲಿದೆ. ನ್ಯಾಯಾಂಗ ನಿಂದನೆ ನೆಪವೊಡ್ಡಿ ಅಧಿಕಾರ ಉಳಿಸಿಕೊಳ್ಳುವ ಭರದಲ್ಲಿ ಸಿಎಂ ಶೆಟ್ಟರ್ ನೀರು ಬಿಟ್ಟಿದ್ದಾರೆ ಎಂದು ಪ್ರತಿಪಕ್ಷಗಳು ಈಗಾಗಲೇ ಅವರ ವಿರುದ್ಧ ಸಿಡಿದು ನಿಂತಿದೆ.

ಇನ್ನು ಕಾವೇರಿ ಹಿರತರಕ್ಷಣಾ ವೇದಿಕೆಯ ಜಿ ಮಾದೇಗೌಡರು 'ಕದ್ದುಮುಚ್ಚಿ ನೀರು ಬಿಟ್ಟ ಶೆಟ್ಟರ್' ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯವನ್ನು ಆಳಲು ಯೋಗ್ಯತೆಯಿಲ್ಲದ ಜನ. ಮುಠ್ಠಾಳ ಮುಖ್ಯಮಂತ್ರಿ ಶೆಟ್ಟರ್ ಅಧಿಕಾರದಲ್ಲಿ ಇರಬಾದರು. ನ್ಯಾಯಾಂಗ ನಿಂದನೆಯಾದರೇನಂತೆ? ಮೊದಲು ನಮ್ಮ ರೈತರ ಹಿತ ಮುಖ್ಯ' ಎಂದು ಗುಡುಗಿದ್ದು ಕೆಆರ್ ಎಸ್ ಗೆ ಮುತ್ತಿಗೆ ಹಾಕಲು ರೈತರಿಗೆ ಕರೆ ನೀಡಿದ್ದಾರೆ.

'ಇರುವ ಅಷ್ಟೋ ಇಷ್ಟೋ ನೀರನ್ನಾದರೂ ಉಳಿಸಿಕೊಳ್ಳೋಣ, ತಮಿಳುನಾಡಿಗೆ ನೀರು ಹರಿಸುವುದು ಬೇಡ' ಎಂದು ಪ್ರತಿಜ್ಞೆ ತೊಟ್ಟಿರುವ ಮಂಡ್ಯ ರೈತರು ಭಾರಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದರಿಂದ ಬೆಂಗಳೂರು- ಮೈಸೂರು ರಸ್ತೆ ಸಂಚಾರ ನಿಂತಿದೆ.

English summary
Cauvery row intensifies- G Madegowda criticises CM Shettar as Karnataka government has released 10,000 cusecs of Cauvery water to Tamil Nadu at midnight on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X