ಕಾವೇರಿ ನದಿಯ ನೀರಿಗೆ ಕಾಯುತ್ತಿದ್ದ ರೈತರಿಗೆ ಕೊನೆಗೂ ಸಿಕ್ಕಿದೆ ಭರ್ಜರಿ ಸುದ್ದಿ!
ಮಳೆಯೇ ಇಲ್ಲದೆ ನರಳಾಡಿ ಹೋಗಿದ್ದ ಕಾವೇರಿ ಕೊಳ್ಳದ ಜನರಿಗೆ ಸಿಹಿಸುದ್ದಿ ಸಿಕ್ಕಿದೆ. ಅರೆ ಮಳೆಯೇ ಇಲ್ಲದೆ ಮುಂದಿನ ಬೇಸಿಗೆ ಸಮಯಕ್ಕೆ ಕುಡಿಯುವ ನೀರಿಗೆ ಏನಪ್ಪಾ ಮಾಡೋದು? ಅಂತಾ ಚಿಂತೆಯಲ್ಲಿ ಮುಳುಗಿದ್ದ ಜನರಿಗೆ ವರುಣ ದೇವ ಕೃಪೆ ತೋರಿದ್ದಾನೆ. ಕೃಷಿಗೂ ಭಾರಿ ಪ್ರಮಾಣದಲ್ಲಿ ನೀರು ಸಿಗಲಿದ್ದು, ಇನ್ನೂ ಒಂದು ಬೆಳೆ ಆರಾಮವಾಗಿ ಬೆಳೆಯಬಹುದು ಎಂಬ ವಾತಾವರಣ ಸೃಷ್ಟಿಯಾಗಿದೆ.
ಹೌದು, ಕರ್ನಾಟಕದಲ್ಲಿ ಮಳೆ ಇಲ್ಲದೆ ಕಾವೇರಿ ನದಿ ಬತ್ತಿ ಹೋಗುತ್ತಿದೆ. ಅದರಲ್ಲೂ ನೆರೆ ರಾಜ್ಯ ತಮಿಳುನಾಡು ಕಾವೇರಿ ನೀರಿಗೆ ಸಖತ್ ಕಿರಿಕ್ ಮಾಡಿ, ನಮ್ಮಿಂದ ನೀರನ್ನು ಕಸಿದು ಕೊಂಡು ಹೋಗಿದೆ. ಹೀಗಿದ್ದಾಗ ತಮಿಳುನಾಡು ರಾಜ್ಯಕ್ಕೆ ಭಾರಿ ಪ್ರಮಾಣದ ಮಳೆ ಸುರಿದು, ಅಲ್ಲಿನ ಹಳ್ಳ & ಕೊಳ್ಳ ತುಂಬಿ ತುಳುಕುತ್ತಿವೆ.

ಹಾಗೇ ಕಾವೇರಿ ನದಿಗೆ ತಮಿಳುನಾಡು ರಾಜ್ಯದಲ್ಲಿ ಅಡ್ಡಲಾಗಿ ಕಟ್ಟಿರುವ ಡ್ಯಾಂಗೆ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ಈ ಮೂಲಕ, ತಮಿಳುನಾಡು ಸಂಕಷ್ಟದಿಂದ ಪಾರಾಗಿದ್ದರೆ. ಕರ್ನಾಟಕದ ಕಾವೇರಿ ಕೊಳ್ಳದ ಜನರು ಈಗ ಸಮಸ್ಯೆಗೆ ಸಿಲುಕಿದ್ದಾರೆ.
ತಮಿಳುನಾಡಿನ ಕಾವೇರಿ ನದಿಗೆ ಭಾರಿ ನೀರು
ಈ ಬಾರಿ ಕರ್ನಾಟಕ ವರುಣನ ಶಾಪದಿಂದ ತತ್ತರಿಸಿದ್ದರೆ ನೆರೆ ರಾಜ್ಯ ತಮಿಳುನಾಡು ಭಾರಿ ಮಳೆಗೆ ಬೆಚ್ಚಿಬಿದ್ದಿದೆ. ಅದರಲ್ಲೂ ಎರಡೆರಡು ಬಾರಿ ಸೈಕ್ಲೋನ್ ಹಾವಳಿಗೆ ಸಿಲುಕಿ ನಲುಗಿ ಹೋಗಿರುವ ತಮಿಳುನಾಡಿನ ಡ್ಯಾಂಗಳು ಮತ್ತು ಜಲಪಾತಗಳು ತುಂಬಿ ಹರಿಯುತ್ತಿವೆ. ಈ ಸಮಯದಲ್ಲೇ ಕಾವೇರಿ ಕೊಳ್ಳದಲ್ಲಿ ಕೂಡ ಭಾರಿ ಪ್ರಮಾದ ನೀರು ಹರಿದು ಬರುತ್ತಿದೆ. ಇದೇ ರೀತಿ ಕಾವೇರಿ ಕೋಳ್ಳದ ಅತಿ ದೊಡ್ಡ ಜಲಾಶಯ ಎನಿಸಿಕೊಂಡಿರುವ, ಪ್ರತಿಬಾರಿ ಕಾವೇರಿ ನದಿ ನೀರಿನ ವಿಚಾರಕ್ಕೆ ಕಿರಿಕ್ ಆದಾಗಲೂ ಗಮನ ಸೆಳೆಯುವ ಮೆಟ್ಟೂರು ಡ್ಯಾಂ ಇದೀಗ ತುಂಬಿ ತುಳುಕಲು ಆರಂಭಿಸಿದೆ.

ಕಾವೇರಿ ನದಿಯ ಡ್ಯಾಂನ ಮಟ್ಟ ಇಷ್ಟು!
ಹೌದು, ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಸೈಕ್ಲೋನ್ ಹಾವಳಿ ಹಿನ್ನೆಲೆ ತಮಿಳುನಾಡು ಸೇರಿದಂತೆ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಹೀಗೆ ಸುಮಾರು 120 ಅಡಿ ಇರುವ ಮೆಟ್ಟೂರು ಜಲಾಶಯದಲ್ಲಿ 70.30 ಅಡಿ ನೀರು ಸಂಗ್ರಹವಾಗಿದೆ. 1,978 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, 2,753 ಕ್ಯುಸೆಕ್‌ಗೂ ಹೆಚ್ಚು ನೀರು ಹೊರ ಬಿಡಲಾಗುತ್ತಿದೆ. ಈ ಮೂಲಕ ನೆರೆ ರಾಜ್ಯ ತಮಿಳುನಾಡು ನೀರಿನ ಸಮಸ್ಯೆಯಿಂದ ಮುಕ್ತವಾಗುತ್ತಿದೆ.
ಕರ್ನಾಟಕದಲ್ಲಿ ಆವರಿಸಿದ ಬರದ ಛಾಯೆ
ಇಷ್ಟೆಲ್ಲದರ ನಡುವೆ ಕಾವೇರಿ ನದಿ ಹುಟ್ಟುವ ಕರ್ನಾಟಕದಲ್ಲಿ ಮಾತ್ರ ಈಗಲೂ ಬರ, ಬರ ಎನ್ನುವಂತಾಗಿದೆ. ಯಾಕಂದ್ರೆ ಈಗಲೂ ಕರ್ನಾಟಕದಲ್ಲಿ ಉತ್ತಮವಾಗಿ ಮಳೆ ಬಿದ್ದಿಲ್ಲ. ಈ ಹಿನ್ನೆಲೆ ಕನ್ನಡಿಗರು ಮುಂದಿನ ದಿನಗಳಲ್ಲಿ ಭಾರಿ ನೀರಿನ ಕೊರತೆ ಎದುರಿಸುವ ಸ್ಥಿತಿ ಕೂಡ ನಿರ್ಮಾಣವಾಗಿದೆ. ಅದರಲ್ಲೂ ಕಾವೇರಿ ನದಿ ಕೊಳ್ಳದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿ ರೈತರು ಪರದಾಡುವ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಕೈಮೀರಿ ಹೋಗುವ ಸಾಧ್ಯತೆ ಇದೆ.












Click it and Unblock the Notifications