Bengaluru Rent: ಮನೆ ಖಾಲಿ ಮಾಡಬೇಡಿ ಪ್ಲೀಸ್ ಎಂದ ಬಾಡಿಗೆ ಮನೆ ಮಾಲೀಕ, ವೈರಲ್ ಪೋಸ್ಟ್‌

Bengaluru Rent: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ವಿಷಯಗಳೇ ಹೆಚ್ಚು ಚರ್ಚೆ ಆಗುತ್ತಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ದುಬಾರಿಯಾಗುತ್ತಿವೆ ಹಾಗೂ ಮನೆಯ ಮಾಲೀಕರು ಅನವಶ್ಯಕವಾಗಿ ದುಬಾರಿ ಮೊತ್ತವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳೇ ಕೇಳಿ ಬರುತ್ತಿವೆ. ಅಲ್ಲದೆ ಮನೆ ಮಾಲೀಕರು ಬಾಡಿಗೆ ಮನೆದಾರರು ಬಾಡಿಗೆ ಮನೆ ಖಾಲಿ ಮಾಡುವಾಗ ಕಿರಿಕಿರಿ ಮಾಡುತ್ತಾರೆ ಎನ್ನುವ ಆರೋಪವೂ ಸಹ ಇದೆ. ಈ ರೀತಿ ಇರುವಾಗಲೇ ಬೆಂಗಳೂರಿನ ಮನೆ ಮಾಲೀಕರೊಬ್ಬರು ನಡೆದುಕೊಂಡ ವಿಧಾನವು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಬೆಂಗಳೂರಿನ ಮನೆ ಮಾಲೀಕರೊಬ್ಬರು ವಾಟ್ಸ್ ಆ್ಯಪ್ ನಲ್ಲಿ ಕಳುಹಿಸಿರುವ ಸಂದೇಶವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ನಡೆದ ವಾಟ್ಸ್‌ಆ್ಯಪ್ ಸಂಭಾಷಣೆಯು ಗಮನ ಸೆಳೆದಿದೆ. ಕ್ಷಣ ಮಾತ್ರದಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ ವೈರಲ್ ಆಗಿದೆ. ಈ ಸಂಭಾಷಣೆಯು ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ಕ್ಷಣಗಳಿಗೆ ಇದು ಸಾಕ್ಷಿಯಾಗಿದೆ.

ಬೆಂಗಳೂರು ಮೂಲದ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ತಮ್ಮ ಮನೆ ಮಾಲೀಕರಿಂದ ಬಂದಿದ್ದ ವಾಟ್ಸ್‌ಆ್ಯಪ್ ಸಂದೇಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಾಡಿಗೆದಾರರು ಜುಲೈ ವೇಳೆಗೆ ಅಪಾರ್ಟ್ಮೆಂಟ್ ಖಾಲಿ ಮಾಡುವುದಕ್ಕೆ ಯೋಜಿಸಿದ್ದರು. ಆದರೆ, ನಂತರ ಹೊಸ ಮನೆ ಸಿಗದ ಕಾರಣ ಅದೇ ಮನೆಯಲ್ಲಿ ಇನ್ನಷ್ಟು ದಿನಗಳ ಕಾಲ ಮುಂದುವರಿಯುವುದಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕರನ್ನು ಸಂಪರ್ಕಿಸಿದ್ದರು. ಈ ಮನವಿಗೆ ಮನೆಯ ಮಾಲೀಕರು ಹೆಚ್ಚಿನ ಬಾಡಿಗೆ ಕೇಳಲಿಲ್ಲ. ಅಲ್ಲದೆ ಮನೆಯ ಮಾಲೀಕರು ಸ್ನೇಹಪರವಾಗಿ ಪ್ರತಿಕ್ರಿಯಿಸಿದರು ಎಂದು ಅವರು ಹೇಳಿಕೊಂಡಿದ್ದಾರೆ. ಮನೆಯ ಮಾಲೀಕರು ಹಾಗೂ ಅವರ ನಡುವೆ ನಡೆದ ಮಾತುಕತೆಯ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಮನೆಯ ಮಾಲೀಕರು ಮಾಡಿರುವ ಸಂದೇಶದಿಂದ ಮನೆ ಖಾಲಿ ಮಾಡುವುದಕ್ಕೆ ಮನಸ್ಸು ಆಗುತ್ತಿಲ್ಲ ಎಂದಿದ್ದಾರೆ.

Bengaluru Rent

"ನಾನು ಜುಲೈ ಅಂತ್ಯದ ವೇಳೆಗೆ ಖಾಲಿ ಮಾಡುತ್ತೇನೆ ಎಂದು ನನ್ನ ಮನೆ ಮಾಲೀಕರಿಗೆ ತಿಳಿಸಿದ್ದೆ, ಆದರೆ ನನಗೆ ಫ್ಲಾಟ್ ಸಿಗಲಿಲ್ಲ. ಹಾಗಾಗಿ, ಸೆಪ್ಟೆಂಬರ್ ವರೆಗೆ ನಾನು ಇರಬಹುದೇ ಎಂದು ಕೇಳಿ ಮೆಸೇಜ್ ಕಳುಹಿಸಿದೆ. ಇರುವ ಫ್ಲಾಟ್‌ನಲ್ಲೇ ಮುಂದುವರಿಯುವ ಮನವಿಗೆ ಮನೆಯ ಮಾಲೀಕರು ಉತ್ತರಿಸಿದ್ದು, "ದಯವಿಟ್ಟು ಹೋಗಬೇಡಿ. ನೀವು ಹೆಚ್ಚಿನ ಅವಧಿಗೆ ಬಾಡಿಗೆಗೆ ಪಡೆಯಬೇಕೆಂದು ನಾನು ಬಯಸುತ್ತೇನೆ" ಅಂತ ಹೇಳಿದ್ದಾರೆ ಎಂದು ಜೆಪ್ಟೋದಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿರುವ ಕೃತಿಕಾ ಕುಮಾರಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

Bengaluru Rent: ನೀವೇ ಅದೃಷ್ಟವಂತರು ಎಂದ ನೆಟ್ಟಿಗರು

ಇನ್ನು ಈ ಪೋಸ್ಟ್‌ಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆದಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಬಾಡಿಗೆದಾರರೊಂದಿಗೆ ಮನೆಯ ಮಾಲೀಕರು ಈ ರೀತಿ ನಡೆದುಕೊಳ್ಳುವುದು ತುಂಬಾ ಕಡಿಮೆ. ಮನೆ ಖಾಲಿ ಮಾಡುವುದಕ್ಕೆ ನಿಗದಿ ಮಾಡಿದ ದಿನಕ್ಕಿಂತಲೂ ಹೆಚ್ಚಿನ ಅವಧಿಗೆ ಬಾಡಿಗೆ ಮನೆಯಲ್ಲಿ ಇರಬೇಕು ಅಂತ ಕೇಳಿದರೆ, ಕಿರಿಕಿರಿ ಮಾಡುತ್ತಾರೆ. ಇಲ್ಲವೇ ಅನವಶ್ಯಕವಾಗಿ ಹೆಚ್ಚು ಹಣ ಪಾವತಿ ಮಾಡುವಂತೆ ಮಾಡುತ್ತಾರೆ. ಆದರೆ ನಿಮ್ಮ ಮನೆಯ ಮಾಲೀಕರು ತುಂಬಾ ಒಳ್ಳೆಯವರು ಎಂದು ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+