Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, ಚಿನ್ನಾಭರಪ್ರಿಯರಿಗೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು: ಬೆಳ್ಳಿ ಮತ್ತು ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್ ಸಿಕ್ಕಿದೆ. ದಿನೇ ದಿನೇ ಇಳಿಕೆ ಆಗುತ್ತಿರುವ ಹಳದಿ ಮತ್ತು ಬಿಳಿ ಲೋಹಗಳ ದರ ಇಂದು ಗುರುವಾರ ಒಂದೇ ದಿನಕ್ಕೆ ದಾಖಲೆಯ ಮಟ್ಟದಲ್ಲಿ ಕುಸಿದಿದೆ. ಗ್ರಾಹಕರಿಗೆ ಆಭರಣ ಖರೀದಿಗೆ ಇದೊಂದು ಸೂಕ್ತ ಸಮಯ ಅಂತಲೂ ಹೇಳಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ಇಳಿಕೆ ಕಂಡ ಅತ್ಯಧಿಕ ಪ್ರಮಾಣದಲ್ಲಿ ಬೆಲೆಯಲ್ಲಿ ಕುಸಿತವಾಗಿದೆ.

ಬೆಳ್ಳಿ ದರವು ಒಂದೇ ದಿನಕ್ಕೆ 10,000 ರೂಪಾಯಿ ಇಳಿಕೆ ಕಂಡಿದೆ. ಚಿನ್ನದ 10 ಗ್ರಾಂ ಬೆಲೆಯು ಬರೋಬ್ಬರಿ 2700 ರೂಪಾಯಿಗೂ ಅಧಿಕ ಕುಸಿತ ದಾಖಲಿಸಿದೆ. ಈ ಮೂಲಕ ನೆಗಟಿವ್ ಟ್ರೆಂಡ್‌ನತ್ತ ಚಿನ್ನ ಸಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಅಮೆರಿಕ ಕೈಗೊಳ್ಳುವ ನಿರ್ಧಾರಗಳು, ಯುದ್ಧ ಹಾಗೂ ಜಾಗತಿಕ ಒಂದಷ್ಟು ಕಾರಣಗಳ ಎಫೆಕ್ಟ್ ಈ ಚಿನ್ನ-ಬೆಳ್ಳಿ ಮೇಲಾಗುತ್ತಿದೆ. ಚಿನ್ನದ ಮೇಲೆ ಹೂಡಿಕೆ ಕಡಿಮೆ ಆಗುತ್ತಿದೆ ಎಂದು ಹೇಳಲಾಗಿದೆ.

Gold-Silver Price

ಒಂದೇ ದಿನಕ್ಕೆ 2780 ರೂ. ದಾಖಲೆಯ ಕುಸಿತ

22 ಕ್ಯಾರಟ್ ಚಿನ್ನದ 10ಗ್ರಾಂ ಬೆಲೆಯು 2550 ರೂಪಾಯಿ ಕುಸಿತ ಕಂಡಿದ್ದು, ಗುರುವಾರ (ಜೂನ್ 25ರಂದು) ಒಟ್ಟು 1,28,450 ರೂಪಾಯಿ ಮುಟ್ಟಿದೆ. ಇದು ಚಿನ್ನಾಭರಣ ತಯಾರಿಕೆಗೆ ಬಳಕೆ ಆಗುವ ಬಂಗಾರವಾಗಿದ್ದು, ಹೆಚ್ಚಿನ ದರ ಕುಸಿತ ಕಂಡು ಹಿನ್ನೆಲೆಯಲ್ಲಿ ಗ್ರಾಹಕರು ಖರೀದಿಗೆ ಮುಂದಾಗಿದ್ದಾರೆ ಎಂದು ವರದಿ ಆಗಿದೆ.

Gold Rate Today: ಇಂದಿನ ಚಿನ್ನದ ಬೆಲೆ ಮತ್ತಷ್ಟು ಅಗ್ಗ: 22k, 24k ಬಂಗಾರದ ದರ 2ನೇ ದಿನವು ಕುಸಿತ
Gold Rate Today: ಇಂದಿನ ಚಿನ್ನದ ಬೆಲೆ ಮತ್ತಷ್ಟು ಅಗ್ಗ: 22k, 24k ಬಂಗಾರದ ದರ 2ನೇ ದಿನವು ಕುಸಿತ

ಇನ್ನೂ 24 ಕ್ಯಾರಟ್ ಚಿನ್ನದ 10 ಗ್ರಾಂ ದರದಲ್ಲಿ ಬರೋಬ್ಬರಿ 2780 ರೂಪಾಯಿ ಇಳಿಕೆ ಆಗಿದ್ದು, ಅದರ ಒಟ್ಟು ಬೆಲೆ ಇವತ್ತು 1,40,130 ರೂಪಾಯಿಗೆ ತಲುಪಿದೆ. ಇದರೊಂದಿಗೆ 18 ಕ್ಯಾರಟ್ ಚಿನ್ನದ ಬೆಲೆಯು ಹತ್ತು ಗ್ರಾಂಗೆ 2080 ರೂ.ಗೆ ಇಳಿಕೆ ಆಗುವ ಮೂಲಕ ಒಟ್ಟು ಬೆಲೆ 1,05,100 ರೂಪಾಯಿಯಷ್ಟಿದೆ.

ಜೂನ್ 1ರಿಂದ ಚಿನ್ನವು ಆಗಾಗ ಅಲ್ಪ ಏರಿಕೆ ಕಂಡರೂ ಸಹಿತ ಅದರ ಮೌಲ್ಯದ ಕುಸಿತ ಪ್ರಮಾಣ ಹೆಚ್ಚಿದೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಾಂಡ್‌ಗಳ ಮೇಲಿನ ಬಡ್ಡಿ ಏರಿಕೆ ಮಾಡುತ್ತಿದ್ದಂತೆ ಅಧಿಕ ಲಾಭದ ಆಸೆಗೆ ಚಿನ್ನದ ಮೇಲಿನ ಹೂಡಿಕೆ ಹಿಂತೆಗೆದ ಹೂಡಿಕೆದಾರರು ಹೆಚ್ಚಾಗಿ ಬಾಂಡ್‌ಗಳನ್ನು ಖರೀದಿಸಿದ್ದಾರೆ. ಇದು ಸೇರಿದಂತೆ ಹಲವು ಜಾಗತಿಕ ಕಾರಣಗಳಿಂದಾಗಿ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ.

ಇಂದು ಬೆಳ್ಳಿ ದರ ಎಷ್ಟಿದೆ?

ಕೈಗಾರಿಕೆ, ಆಭರಣ ಹಾಗೂ ಇನ್ನಿತರ ಉದ್ದೇಶಗಳಿಗೆ ಬಳಕೆ ಆಗುವ ಬೆಳ್ಳಿಯ ದರ 100 ಗ್ರಾಂಗೆ 1000 ರೂಪಾಯಿಯಿಂತೆ 1ಕೆಜಿ ಬೆಳ್ಳಿಗೆ ಬರೋಬ್ಬರಿ 10,000 ರೂಪಾಯಿ ಕುಸಿತವಾಗಿದೆ. ಜೂನ್ 23ರಂದು 5000 ರೂಪಾಯಿ ಇಳಿಕೆ ಆಗಿದ್ದ ಬೆಳ್ಳಿ ನೆನ್ನೆ ಸ್ಥಿರವಾಗಿತ್ತು. ಇಂದು ಮತ್ತೆ ದಾಖಲೆಯ ಮಟ್ಟದಲ್ಲಿ ಇಳಿಕೆ ಆಗಿದ್ದು, ಗ್ರಾಹಕರನ್ನು ಚಿನ್ನಾಭರಣ ಮಳಿಗೆಗಳತ್ತ ಬರುವಂತೆ ಮಾಡಿದೆ.

ನಗರವಾರು 22k ಚಿನ್ನದ 1 ಗ್ರಾಂ ದರಪಟ್ಟಿ

ಚೆನ್ನೈ: 3140 ರೂಪಾಯಿ

ಮುಂಬೈ: 12,845 ರೂಪಾಯಿ

ದೆಹಲಿ: 12,860 ರೂಪಾಯಿ

ಕೊಲ್ಕತ್ತಾ: 12,845 ರೂಪಾಯಿ

ಬೆಂಗಳೂರು: 12,845 ರೂಪಾಯಿ

ಹೈದರಾಬಾದ್: 12,845 ರೂಪಾಯಿ

ಕೇರಳ: 12,845 ರೂಪಾಯಿ

ಪುಣೆ: 12,845 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+