ಇನ್ಫಿ ಮೂರ್ತಿ ಮಗಳನ್ನು ಬಾಲ್ಯದಲ್ಲಿ ಪದೇ ಪದೇ ಭೇಟಿಯಾಗ್ತಿದ್ದ ಆ ವ್ಯಕ್ತಿ ಯಾರು! ಅಕ್ಷತಾ ಮೂರ್ತಿ ಓಪನ್‌ ಮಾತು

ಇನ್ಫಿ ಮೂರ್ತಿ ಮಗಳು ಅಕ್ಷತಾ ಮೂರ್ತಿ ಇತ್ತೀಚೆಗೆ ಬ್ರಿಟಿಷ್‌ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ಒಂದು ಇಂಟರೆಸ್ಟಿಂಗ್‌ ವಿಷಯ ಹಂಚಿಕೊಂಡಿದ್ದಾರೆ. ಅವರು ಬಾಲ್ಯದಲ್ಲಿ ಒಬ್ಬ ವ್ಯಕ್ತಿಯನ್ನು ಪದೇ ಪದೇ ಭೇಟಿಯಾಗ್ತಿದ್ದರಂತೆ. ಅವರು ಅಪ್ಪನಿಗಿಂತ ಹೆಚ್ಚಂತೆ.

ಅಕ್ಷತಾ ಮೂರ್ತಿ ಅಂದಾಕ್ಷಣ ಜನರ ಬಾಯಲ್ಲಿ ಬರುವ ಮೂರು ಹೆಸರುಗಳು. ಮೊದಲನೆಯ ಹೆಸರು ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ, ಗ್ಲೋಬಲ್‌ ಐಕಾನ್ ಎನ್.ಆರ್. ನಾರಾಯಣ ಮೂರ್ತಿ ಮತ್ತು ಖ್ಯಾತ ಲೇಖಕಿ, ಸಮಾಜ ಸೇವಕಿ ಸುಧಾ ಮೂರ್ತಿ. ಸುಧಾ ಅವರು ಇವರು ಹುಟ್ಟಿದ್ದು ಕರ್ನಾಟಕದ ಹುಬ್ಬಳ್ಳಿಯಲ್ಲಿ. ಇನ್ನೊಬ್ಬರು ಇವರನ್ನು ಕೈ ಹಿಡಿದ ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್. ಸದ್ಯ ಕನ್ಸರ್ವೇಟಿವ್‌ ಪಾರ್ಟಿಯ ಲೀಡರ್.‌ ಆದರೆ ಈ ಪ್ರಭಾವಗಳನ್ನೂ ಮೀರಿ ಸ್ವಂತಿಕೆಯಿಂದಲೂ ಅಕ್ಷತಾ ಹೆಸರು ಮಾಡಿದ್ದಾರೆ.

Akshata Murty

ಅಕ್ಷತಾ ಇತ್ತೀಚೆಗೆ ಬ್ರಿಟನ್‌ನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವುದು ಇಂಟರೆಸ್ಟಿಂಗ್‌ ಆಗಿದೆ. ಅದರಲ್ಲಿ ತನ್ನ ಬಾಲ್ಯದ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಹಂಚಿಕೊಂಡಿದ್ದಾರೆ. ಅಕ್ಷತಾ ಬೆಳೆದಿದ್ದೆಲ್ಲ ತನ್ನ ಅಜ್ಜಿಮನೆಯಲ್ಲಿ. ಬಹಳ ಸರಳವಾದ ಪರಿಸರದಲ್ಲಿ, ಯಾವ ಐಷಾರಾಮವೂ ಇಲ್ಲದೆ ಸಿಂಪಲ್‌ ಆಂಡ್‌ ಡಿಗ್ನಿಫೈಡ್‌ ಲೈಫ್‌ ಅಲ್ಲಿ ಸಿಕ್ಕಿತು ಅಂತ ಅಕ್ಷತಾ ಹೇಳುತ್ತಾರೆ. ತಂದೆ ತಾಯಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದರೂ, ಇವರ ಜೀವನ ಶೈಲಿ ಮಾತ್ರ ಯಾವಾಗಲೂ ಸರಳತೆಯಿಂದಲೇ ಕೂಡಿತ್ತು.

NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ

ಬೆಂಗಳೂರಿನ ಬಾಲಕಿ

ಸ್ಕೂಲ್‌ ಟೈಮ್‌ಗೆ ಆಗುವಾಗ ಬೆಂಗಳೂರಿಗೆ ಬರುತ್ತಾರೆ. ಇಲ್ಲಿನ ಬಾಲ್ಡ್ವಿನ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಮುಗಿಸಿದರು. ನಂತರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಎಕನಾಮಿಕ್ಸ್ ಮತ್ತು ಫ್ರೆಂಚ್ ಭಾಷೆಯಲ್ಲಿ ಪದವಿ ಪಡೆದರು. ಫ್ಯಾಷನ್ ಮೇಲಿರುವ ಆಸಕ್ತಿಯಿಂದಾಗಿ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಅಂಡ್ ಮರ್ಚಂಡೈಸಿಂಗ್‌ನಿಂದ ಡಿಪ್ಲೊಮಾ ಮಾಡಿದರು. ಮುಂದೆ ಜಗತ್ತಿನ ಹೆಸರಾಂತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಮಾಸ್ಟರ್ಸ್ ಪದವಿ ಪಡೆದರು.

ಈಗ ಈಕೆ ಕೇವಲ ಇನ್ಫೋಸಿಸ್‌ನ ಷೇರುದಾರರಷ್ಟೇ ಅಲ್ಲ, ಸ್ವತಂತ್ರ ಉದ್ಯಮಿಯಾಗಿದ್ದಾರೆ. ಕ್ಯಾಟಮರನ್ ವೆಂಚರ್ಸ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು ಇನ್ವೆಸ್ಟ್‌ಮೆಂಟ್ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಹಾಗೂ ಹೂಡಿಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ.

ಪತ್ರಕರ್ತೆಯರಿಗಾಗಿ ಇನ್ಫೋಸಿಸ್ ವತಿಯಿಂದ ಸ್ಪ್ರಿಂಗ್ ಬೋರ್ಡ್ ತರಬೇತಿಗೆ ಅರ್ಜಿ ಆಹ್ವಾನ
ಪತ್ರಕರ್ತೆಯರಿಗಾಗಿ ಇನ್ಫೋಸಿಸ್ ವತಿಯಿಂದ ಸ್ಪ್ರಿಂಗ್ ಬೋರ್ಡ್ ತರಬೇತಿಗೆ ಅರ್ಜಿ ಆಹ್ವಾನ

ರಿಷಿ ಸುನಾಕ್‌ ಪರಿಚಯ

ಅಕ್ಷತಾ ಮೂರ್ತಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ರಿಷಿ ಸುನಕ್ ಪರಿಚಯವಾಯಿತು. ಅದು ಸ್ನೇಹ, ಪ್ರೇಮಕ್ಕೆ ತಿರುಗಿತು. ಇವರು ೨೦೦೯ರಲ್ಲಿ ಬೆಂಗಳೂರಿನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದರು. ಈ ದಂಪತಿಗೆ ಕೃಷ್ಣಾ ಮತ್ತು ಅನೌಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಿಷಿ ಸುನಕ್ ಅವರು ಯುಕೆಯ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ಷತಾ ಮೂರ್ತಿ ಅವರು ಬ್ರಿಟನ್‌ನ ಪ್ರಥಮ ಮಹಿಳೆಯಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದರು.

ಅಷ್ಟೊಂದು ದೊಡ್ಡ ಶ್ರೀಮಂತ ಕುಟುಂಬದ ಹಿನ್ನೆಲೆ ಇದ್ದರೂ, ಬ್ರಿಟನ್‌ನ ಮಾಜಿ ಪ್ರಧಾನಿ ಪತ್ನಿಯಾಗಿದ್ದರೂ, ಅಕ್ಷತಾ ಇಂದಿಗೂ ತಮ್ಮ ಭಾರತೀಯ ಪೌರತ್ವವನ್ನು ಉಳಿಸಿಕೊಂಡಿದ್ದಾರೆ. ತಮಗೆ ಭಾರತದ ಮೇಲಿರುವ ಗೌರವ ಮತ್ತು ಬಾಂಧವ್ಯವನ್ನು ಅವರು ಹಲವು ಬಾರಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ರಾಜಕುಮಾರಿ ಎಂಬ ಫೀಲ್‌

ಇದೀಗ ಇವರು ತನ್ನ ಬಾಲ್ಯದ ಕಥೆ ಹಂಚಿಕೊಂಡಿದ್ದಾರೆ. ಇವರಿಗೆ ನೆನಪಿರುವಾಗಿನಿಂದ ಆಗಾಗ ಇವರನ್ನು ಒಬ್ಬ ವ್ಯಕ್ತಿ ಭೇಟಿ ಮಾಡಲು ಅಜ್ಜಿಮನೆಗೆ ಬರುತ್ತಿದ್ದರಂತೆ. ಬಹಳ ಪ್ರೀತಿಯಿಂದ ಇರುತ್ತಿದ್ದ, ಇವರ ಜೊತೆಗೆ ಖುಷಿಯಿಂದ ಸಮಯ ಕಳೆಯುತ್ತಿದ್ದ ಅವರಿಂದಾಗಿ ತಾನು ರಾಜಕುಮಾರಿ ಅನ್ನೋ ಫೀಲ್‌ ಬರುತ್ತಿತ್ತು ಅಂತಾರೆ ಅಕ್ಷತಾ.

ಆ ವ್ಯಕ್ತಿ ಮತ್ಯಾರೂ ಅಲ್ಲ ಇವರ ತಂದೆ ನಾರಾಯಣ ಮೂರ್ತಿ ಅವರೇ. ಆಗ ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದರೆ ನಾರಾಯಣ ಮೂರ್ತಿ ಮಗಳಲ್ಲಿ ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದರಂತೆ. ಅಪ್ಪ ಅನ್ನೋದು ನನ್ನಪ್ಪನಿಗೆ ಸಣ್ಣ ಪದ. ಅವರು ನನ್ನ ಪಾಲಿಗೆ ಅಪ್ಪನಿಗಿಂತಲೂ ಹೆಚ್ಚಾಗಿದ್ದರು ಅಂತಾರೆ ಅಕ್ಷತಾ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+