Rain News: 24 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ, ಕಾವೇರಿ ನದಿಯ ಈ ಡ್ಯಾಂ ತುಂಬುತ್ತಿದೆ!
ಕರ್ನಾಟಕದಲ್ಲಿ ಉತ್ತಮವಾಗಿ ಮಳೆ ಬೀಳದ ಹಿನ್ನೆಲೆ ರೈತರಲ್ಲಿ ಆತಂಕ ಮನೆಮಾಡಿತ್ತು. ಆದ್ರೆ ಈ ಸಮಯದಲ್ಲೇ ಹಿಂಗಾರು ಮಳೆ ಅಬ್ಬರಿಸಿದ ಕಾರಣ, ಪರಿಸ್ಥಿತಿ ಸುಧಾರಿಸುತ್ತಿದೆ. ಇನ್ನು ಇದೇ ವೇಳೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು ಅದರಲ್ಲೂ ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಬೃಹತ್ ಡ್ಯಾಂ ವೇಗವಾಗಿ ತುಂಬುತ್ತಿದೆ. ಹಾಗಾದ್ರೆ ಯಾವುದು ಆ ಜಲಾಶಯ? ಈ ಡ್ಯಾಂ ತುಂಬಿದರೆ ಕರ್ನಾಟಕದ ನೀರಿನ ಕೊರತೆ ನೀಗುತ್ತಾ?
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಭಾರಿ ಆತಂಕ ಎದುರಾಗಿತ್ತು. ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತನಕವೂ ಹೇಳಿಕೊಳ್ಳುವಷ್ಟು ಮಳೆ ಸುರಿಯಲೆ ಇಲ್ಲ. ಆಗಸ್ಟ್ ತಿಂಗಳಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿತ್ತು. ಈ ಕಾರಣ, ರೈತರು ಕೂಡ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ ಅಂತ ನಿರ್ಧರಿಸಿದ್ದರು. ನೋಡ ನೋಡುತ್ತಲೇ ಮುಂಗಾರು ಮಳೆಯ ಸಮಯ ಕೂಡ ಮುಗಿದಿತ್ತು. ಕೊನೆಗೂ ಈಗ ಹಿಂಗಾರು ಮಳೆ ದಕ್ಷಿಣ ಭಾರತದ ರಾಜ್ಯಗಳ ಕೈ ಹಿಡಿಯುತ್ತಿದೆ.

ಆರ್ಭಟಿಸುತ್ತಿದೆ ಹಿಂಗಾರು ಮಳೆ!
ದಕ್ಷಿಣ ಭಾರತದಲ್ಲಿ ಹಿಂಗಾರು ಮಳೆ ಫುಲ್ ಅಲರ್ಟ್ ಆಗಿ ಹಲವು ರಾಜ್ಯಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಅದರಲ್ಲೂ ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಮುಂಗಾರು ಮಳೆಯನ್ನೇ ಮೀರಿಸಿ ಹಿಂಗಾರು ಮಳೆ ಬೀಳ್ತಿದೆ. ಮುಂಗಾರು ಕೈಕೊಟ್ಟಿದ್ದ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು ಸೇರಿ ಆಂಧ್ರ ಪ್ರದೇಶ & ತೆಲಂಗಾಣ ರಾಜ್ಯಗಳ ಬಹುತೇಕ ಭಾಗಗಳು ನಲುಗಿವೆ. ಆದ್ರೀಗ ಕೇರಳ & ತಮಿಳುನಾಡು ರಾಜ್ಯದಲ್ಲಿ ಹಿಂಗಾರು ಅಬ್ಬರಿಸುತ್ತಿದ್ದು ತುಸು ನೆಮ್ಮದಿ ನೀಡಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಕಳೆದ ಕೆಲವು ದಿನಗಳ ಹಿಂದೆ, ಭಾರಿ ಮಳೆ ಸುರಿದಿತ್ತು. ಈಗ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ ತುಂಬುತ್ತಿದೆ.
ಭಾರಿ ಮಳೆ ಬಗ್ಗೆ ಎಚ್ಚರಿಕೆ ಸಂದೇಶ!
ಬಾಂಗ್ಲಾದಲ್ಲಿ ಇತ್ತೀಚೆಗೆ ಚಂಡಮಾರುತ ಒಂದು ಭಾರಿ ವಿನಾಶ ಸೃಷ್ಟಿ ಮಾಡಿತ್ತು. ಕೇವಲ ಒಂದು ವಾರದ ಬಳಿಕ ಇದೀಗ 'ಮೈಚಾಂಗ್' ಚಂಡಮಾರುತವು ಪ್ರಭಾವ ಬೀರುತ್ತಿದೆ. ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲೂ ಚಂಡಮಾರುತವಾಗಿ ಈ ಸುಳಿಗಾಳಿ ಬದಲಾಗುತ್ತಿದೆ. ಹಾಗೇ ಈ ಚಂಡಮಾರುತದ ತೀವ್ರತೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮತ್ತೊಂದು ಕಡೆ ಇದೇ ಸಮಯದಲ್ಲಿ ಕಾವೇರಿ ನದಿಗೆ ಕಟ್ಟಿರುವ ಜಲಾಶಯದ ನೀರಿನ ಮಟ್ಟದ ಬಗ್ಗೆ ಸಿಹಿಸುದ್ದಿ ಸಿಗುತ್ತಿದೆ!

ದಕ್ಷಿಣ ಭಾರತದಲ್ಲಿ ಮಳೆ ಅಬ್ಬರ
ಮುಂದಿನ 5 ದಿನಗಳಲ್ಲಿ ತಮಿಳುನಾಡು, ಪುದುಚೇರಿ, ಕಾರೈಕಾಲ್ ಮತ್ತು ಕೇರಳ ಸೇರಿ ಇನ್ನ ಕೆಲ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ನಿರೀಕ್ಷೆಯಿದೆ. ಈ ಕಾರಣಕ್ಕೆ ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ನವೆಂಬರ್ 30 & ಡಿಸೆಂಬರ್ 1ಕ್ಕೆ ಕೇರಳದಲ್ಲೂ ವಿವಿಧೆಡೆ ಭಾರಿ ಮಳೆಯ ಮುನ್ಸೂಚನೆಯ ನೀಡಲಾಗಿದೆ. ಈ ಮೂಲಕ ಮುಂದಿನ ಕೆಲದಿನ ಭಾರಿ ಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ಸಿಕ್ಕಿದ್ದು, ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ತೀವ್ರ ಮಳೆಯಾಗುವ ಸಾಧ್ಯತೆ ಇದೆ.
ತುಂಬುತ್ತಿದೆ ಕಾವೇರಿ ನದಿಯ ಡ್ಯಾಂ!
ಹೀಗೆ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾದ ಹಿನ್ನೆಲೆ & ಇದರ ಜೊತೆಗೆ ಹಿಂಗಾರು ಮಾರುತ ಬಲಿಷ್ಠವಾದ ಕಾರಣ ತಮಿಳುನಾಡು ಮತ್ತು ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಹೀಗಾಗಿ 120 ಅಡಿ ಮೆಟ್ಟೂರು ಜಲಾಶಯದಲ್ಲಿ ಇದೀಗ 66 ಅಡಿ ನೀರು ಸಂಗ್ರಹವಾಗಿದೆ. 4300 ಕ್ಯುಸೆಕ್ ಒಳಹರಿವು ದಾಖಲಾಗಿದ್ದರು ಕೇವಲ 250 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಹೀಗೆ ತಮಿಳುನಾಡಿನಲ್ಲಿ ನೀರಿನ ಕೊರತೆಯು ನಿಧಾನವಾಗಿ ನೀಗುತ್ತಿದೆ. ಹಾಗೆ ಕರ್ನಾಟಕದಲ್ಲಿ ಕೂಡ ಉತ್ತಮವಾಗಿ ಮಳೆ ಬೀಳುವ ಬಗ್ಗೆ ಈಗ ನಿರೀಕ್ಷೆ ಮೂಡಿದೆ.












Click it and Unblock the Notifications