Heavy Rain: ಭಾರಿ ಮಳೆಗೆ ತುಂಬುತ್ತಿವೆ ಕಾವೇರಿ ನದಿಯ ಡ್ಯಾಂಗಳು!
ಮುಂಗಾರು ಮಳೆಯನ್ನೇ ಕಾಣದೆ ಕರ್ನಾಟಕದ ರೈತರು ಬೆಚ್ಚಿಬಿದ್ದಿದ್ದಾರೆ. ಈ ಮಧ್ಯೆ ನೆರೆಯ ರಾಜ್ಯ ತಮಿಳುನಾಡು ಕಾವೇರಿ ನೀರಿಗೆ ಕಿರಿಕ್ ಮಾಡುತ್ತಿದೆ. ಹನಿ ಹನಿ ನೀರಿಗೋಸ್ಕರ ಇಲ್ಲಿ ಪರದಾಡುವಾಗ ನೆರೆ ರಾಜ್ಯಕ್ಕೆ ನೀರು ಬಿಡುವುದು ಕಷ್ಟವಾಗುತ್ತಿದೆ. ಹೀಗಿದ್ದಾಗ ಹಿಂಗಾರು ಮಾರುತಗಳು ಕರ್ನಾಟಕವೂ ಸೇರಿ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸುರಿಸಿ ಡ್ಯಾಂಗಳನ್ನು ತುಂಬಿಸುತ್ತಿವೆ.
ಹೌದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಿ ಹಳ್ಳ & ಕೊಳ್ಳ ಸೇರಿದಂತೆ ದೊಡ್ಡ ದೊಡ್ಡ ಡ್ಯಾಂಗಳಿಗೆ ಭಾರಿ ನೀರು ಹರಿದು ಬರುತ್ತಿದೆ. ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಈ ಸಮಯದಲ್ಲಿ ಬೆಂಗಳೂರು ಫುಲ್ ಕೂಲ್ ಕೂಲ್ ಆಗುತ್ತಿದೆ. ಹೀಗಿದ್ದಾಗ ತಮಿಳುನಾಡಲ್ಲು ಕೂಡ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಕರ್ನಾಟಕದ ಜೊತೆ ನೀರಿಗಾಗಿ ಕಿರಿಕ್ ತೆಗೆದು, ಕೋರ್ಟ್ ಮೆಟ್ಟಿಲು ಏರಿದ್ದ ತಮಿಳುನಾಡು ಸೈಲೆಂಟ್ ಆಗುವ ಸಮಯ ಬಂದಿದೆ. ಯಾಕೆ ಅಂದ್ರೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಡ್ಯಾಂ ತುಂಬುತ್ತಿದೆ.

ತುಂಬುತ್ತಿದೆ ಕಾವೇರಿಯ ದೊಡ್ಡ ಡ್ಯಾಂ!
ಕರ್ನಾಟಕವೂ ಸೇರಿದಂತೆ ನೆರೆ ರಾಜ್ಯ ತಮಿಳುನಾಡು ಮತ್ತು ಭಾಗಶಃ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಮೂಲಕ ಹಿಂಗಾರು ಮಳೆ ದಕ್ಷಿಣ ಭಾರತದ ಕೈಹಿಡಿದಿದೆ. ಅದ್ರಲ್ಲೂ ಕಾವೇರಿ ಕೊಳ್ಳದಲ್ಲಿ ಮಂದಹಾಸ ಮೂಡಿದ್ದು, ಕಾವೇರಿ ನದಿ ನೀರಿಗಾಗಿ ಕಿರಿಕ್ ತೆಗೆಯುತ್ತಿರುವ ತಮಿಳುನಾಡು ಸೈಲೆಂಟ್ ಆಗುವ ಸ್ಥಿತಿ ಎದುರಾಗಿದೆ. ಕರ್ನಾಟಕ & ತಮಿಳುನಾಡು ಭಾಗದಲ್ಲಿ ಹಿಂಗಾರು ಮಳೆ ಅಬ್ಬರ ಶುರು ಆದ ಹಿನ್ನೆಲೆ, ಮೆಟ್ಟೂರು ಡ್ಯಾಂಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈಗಿನ ಮಾಹಿತಿಯಂತೆ 120 ಅಡಿ ಎತ್ತರ ಇರುವ ಮೆಟ್ಟೂರು ಜಲಾಶಯದಲ್ಲಿ 63.04 ಅಡಿ ನೀರು ಸಂಗ್ರಹವಾಗಿದೆ. 4,038 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಈಗ 3,864 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇನ್ನು ಇದೇ ರೀತಿ ಸ್ವಲ್ಪ ದಿನಗಳ ಕಾಲ ಮಳೆ ಸುರಿದ್ರೆ ಮೆಟ್ಟೂರು ಡ್ಯಾಂ ತುಂಬುವ ನಿರೀಕ್ಷೆ ಇದೆ. ಈ ಮೂಲಕ ಎರಡೂ ರಾಜ್ಯಗಳ ನೀರಿನ ಕಿರಿಕ್ ಸಂಪೂರ್ಣವಾಗಿ ಮುಗಿದು ಹೋಗುವ ಸಾಧ್ಯತೆ ಇದೆ.
ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ
ಬೆಂಗಳೂರಲ್ಲಿ ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಮಳೆ ಇಂದು ಮತ್ತೆ ಪ್ರತ್ಯಕ್ಷವಾಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ. ನಗರದ ವಿವಿಧ ಕಡೆಗಳಲ್ಲಿ ತೆಂಪರೆದಿದ್ದಾನೆ. ಕೆಂಗೇರಿ ಒಂದರಲ್ಲಿಯೇ 17 ಮಿಮೀ ಮಳೆ ದಾಖಲಾಗಿದೆ. ನಗರದಲ್ಲಿ ಕೆಲ ದಿನದಿಂದ ಹಿಂಗಾರು ಮಳೆ ಮಾರುತಗಳು ದುರ್ಬಲ ಆಗಿದ್ದರಿಂದ ಆಗಾಗ ಬಿಸಿಲು ದಾಖಲಾಗುತ್ತಿತ್ತು. ಇಂದು ಮಧ್ಯಾಹ್ನ ದಿಢೀರ್ ಮಳೆ ವಾತಾವರಣ ಸೃಷ್ಟಿಯಾಗಿ 4 ಗಂಟೆಗೆ ಮಳೆ ಆರಂಭವಾಯಿತು. ಜಯನಗರ, ಕೆಆರ್.ಪುರ, ವೈಟ್ ಫೀಲ್ಡ್, ಬೈಯಪ್ಪನಹಳ್ಳಿ, ಶಿವಾಜಿನಗರ, ಅಂಜನಾಪುರ, ವಸಂತ ನಗರ, ಪೀಣ್ಯ, ಸಿವಿ ರಾಮನ್ ನಗರ, ಬಸವನಗುಡಿ ಸೇರಿದಂತೆ ರಾಜಧಾನಿ ಬೆಂಗಳೂರು ನಗರದ ಹೊರ ವಲಯದಲ್ಲೂ ಮಳೆ ಸುರಿದಿದೆ.

ಒಟ್ನಲ್ಲಿ ಒಂದಷ್ಟು ದಿನ ಸೈಲೆಂಟ್ ಆಗಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸುತ್ತಿರುವುದು ಸಹಜವಾಗಿ ಖುಷಿ ಕೊಟ್ಟಿದೆ. ಆದರೆ ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ಮಳೆಯು ಸುರಿದು ಕನಿಷ್ಠ ಕುಡಿವ ನೀರಿನ ಸಮಸ್ಯೆ ಸರಿಮಾಡಲಿ ಎಂಬುದೇ ಅನ್ನದಾತರ ಪ್ರಾರ್ಥನೆ. ಆದರೆ ಈ ಬೇಡಿಕೆಗೆ ಮಳೆರಾಯ ಅಸ್ತು ಅಂತಾನಾ? ಅನ್ನೋದನ್ನು ಕಾದು ನೋಡಬೇಕು. ಆದರೆ ಈಗಿನ ಮುನ್ಸೂಚನೆ ಪ್ರಕಾರ ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಮಳೆಯು ಸುರಿಯುವ ಮುನ್ಸೂಚನೆ ಇದೆ.












Click it and Unblock the Notifications