Ramya Krishnan: "ಸೆಕೆಂಡ್ ಲವ್"ನಿಂದ ಸಂಕಷ್ಟಕ್ಕೆ ಸಿಲುಕಿದ ಬಹುಭಾಷಾ ನಟಿ ರಮ್ಯಾ ಕೃಷ್ಣ, ಬಾಹುಬಲಿ ನಟಿಗೆ ಟೆನ್ಷನ್
Ramya Krishnan: ನಟಿ ರಮ್ಯಾ ಕೃಷ್ಣನ್ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದು, ಈಗಲೂ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಇದೀಗ ಅವರು ಸೆಕೆಂಡ್ ಲವ್ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದ್ದಾರೆ. ಆದರೆ, ಇದು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರವಲ್ಲ ಬದಲಿಗೆ ಪ್ರಮುಖ ರಿಯಾಲಿಟಿ ಶೋ, ಈ ಶೋನ ಪ್ರೋಮೋದಲ್ಲಿ ಅವರು ಕಾಣಿಸಿಕೊಂಡಿರುವ ರೀತಿ, ವಿಷಯ ಹಾಗೂ ಶೈಲಿಗೆ ವೀಕ್ಷಕರು ಗರಂ ಆಗಿದ್ದಾರೆ. ನಟಿ ರಮ್ಯಾ ಕೃಷ್ಣ ಅವರು ಸಿನಿಮಾಗಳ ಜೊತೆ ಜೊತೆಗೆ ರಿಯಾಲಿ ಶೋನಲ್ಲೂ ಮಿಂಚುತ್ತಿದ್ದಾರೆ. ಇದೀಗ ಅವರ ಸೆಕೆಂಡ್ ಲವ್ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ.
ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಹೊಸ ರಿಯಾಲಿಟಿ ಶೋ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ವೈಯಕ್ತಿಕ ಜೀವನವಲ್ಲ, ಅವರು ನಿರೂಪಣೆ ಮಾಡಲಿರುವ 'ಸೆಕೆಂಡ್ ಲವ್' ಶೋವೇ ವಿವಾದಕ್ಕೆ ಕಾರಣವಾಗಿದೆ. ಶೋನ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಅದರ ಕಾನ್ಸೆಪ್ಟ್, ಪ್ರಶ್ನೆಗಳ ಸ್ವರೂಪ ಮತ್ತು ಕುಟುಂಬ ಸಮೇತ ವೀಕ್ಷಣೆಗೆ ಯೋಗ್ಯವೇ ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಆರಂಭವಾಗಿದೆ.

ಕಿರುತೆರೆಗಳು ವೀಕ್ಷಕರನ್ನು ಸೆಳೆಯುವುದಕ್ಕೆ ಕನ್ನಡವೂ ಸೇರಿದಂತೆ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬೇರೆ ಬೇರೆ ಮಾದರಿಯ ರಿಯಾಲಿಟಿ ಶೋಗಳು ಬರುತ್ತಿವೆ. ಇನ್ನು ಕನ್ನಡದಲ್ಲಿ ತಮಿಳು - ತೆಲುಗು ಭಾಷೆಯ ರಿಯಾಲಿಟಿ ಶೋ ಮಾದರಿಯ ರಿಯಾಲಿಟಿ ಶೋಗಳೇ ಪ್ರಸಾರವಾಗುತ್ತಿವೆ. ಇದರ ನಡುವೆ ಕ್ರಿಯೇಟಿವ್ ಆಗಿ ಹೊಸ ರಿಯಾಲಿಟಿ ಶೋಗಳನ್ನು ಪರಿಚಯಿಸುವ, ಜನರ ಮುಂದೆ ಇರಿಸುವ ಹಾಗೂ ಸೆಳೆಯುವ ಪ್ರಯತ್ನ ನಡೆದಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಬಂದ ನಂತರ ಹಾಗೂ ಇದಕ್ಕೆ ಉತ್ತಮ ಟಿಆರ್‌ಪಿ ಸಿಕ್ಕ ನಂತರ ಇದಕ್ಕೆ ಟಕ್ಕರ್ ಕೊಡುವಂತ ರಿಯಾಲಿಟಿ ಶೋ ಅನ್ನು ಕೊಡುವುದಕ್ಕೆ ಎಲ್ಲಾ ಭಾಷೆಯ ವಾಹಿನಿಗಳು ಸರ್ಕಸ್ ನಡೆಸಿವೆ.
ಇದೀಗ ಬಾಹುಬಲಿ ಖ್ಯಾತಿಯ ರಮ್ಯಾ ಕೃಷ್ಣ ಅವರು ನಿರೂಪಣೆ ಮಾಡುವುದಕ್ಕೆ ಹೊರಟಿರುವ ಹೊಸ ರಿಯಾಲಿಟಿ ಶೋ ಕಾನ್ಸೆಪ್ಟ್‌ನಿಂದ ವಿವಾದಕ್ಕೆ ಸಿಲುಕಿದೆ. ಈ ರಿಯಾಲಿಟಿ ಶೋನ ಪ್ರೋಮೋ ನೋಡಿಯೇ ವೀಕ್ಷಕರು ಗರಂ ಆಗಿದ್ದಾರೆ. ಬಹುಭಾಷಾ ನಟಿ ರಮ್ಯಾ ಕೃಷ್ಣ 'ಸೆಕೆಂಡ್ ಲವ್' ಎನ್ನುವ ಹೊಸ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ. ಆದರೆ, ಈ ಶೋನ ಪ್ರೋಮೋ ರಿಲೀಸ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಪ್ರೋಮೋ ಸಹ ವೈರಲ್ ಆಗಿದ್ದು, ಈ ರೀತಿಯ ರಿಯಾಲಿಟಿ ಶೋವೊಂದನ್ನು ಪ್ರಸಾರ ಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ತಮಿಳಿನ ವಿಜಯ ಟಿವಿಯಲ್ಲಿ ಸೆಕೆಂಡ್ ಲವ್ ಎನ್ನುವ ಹೊಸ ರಿಯಾಲಿಟಿ ಶೋ ಆರಂಭವಾಗುತ್ತಿದೆ. 'ಸೆಕೆಂಡ್ ಲವ್' ರಿಯಾಲಿಟಿ ಶೋ ಪ್ರೋಮೋ ಈಚೆಗೆ ರಿಲೀಸ್ ಆಗಿದೆ. ಇದಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇದರ ಕಾನ್ಸೆಪ್ಟ್.
Ramya Krishnan: ಸೆಕೆಂಡ್ ಲವ್ ರಿಯಾಲಿಟಿ ಶೋ ವಿವಾದವೇಕೆ
'ಸೆಕೆಂಡ್ ಲವ್' ಕಿರುತೆರೆಯಲ್ಲಿ ಬಿಗ್ ಬಾಸ್ ಮಾದರಿಯಲ್ಲೇ ಪ್ರಸಾರವಾಗಲಿರುವ ಹೊಸ ಮಾದರಿಯ ರಿಯಾಲಿಟಿ ಶೋ ಆಗಿದೆ. ಈ ಶೋನಲ್ಲಿ ಪ್ರೀತಿ ಮತ್ತು ವೈವಾಹಿಕ ಸಂಬಂಧಗಳಲ್ಲಿ ಸೋತಿರುವ ಆರು ಜೋಡಿಗಳನ್ನು ಆಯ್ಕೆ ಮಾಡಿಕೊಳ್ಳಲಾದೆ. ಇವರನ್ನು ಒಂದೇ ಮನೆಯಲ್ಲಿ ಒಟ್ಟಿಗೆ ಇರಿಸಿ, ಅದರಲ್ಲಿ ವಿಭಿನ್ನ ಟಾಸ್ಕ್‌ಗಳನ್ನು ಕೊಡಲಾಗುತ್ತದೆ.
ಈ ರಿಯಾಲಿಟಿ ಶೋನ ಕಾನ್ಸೆಪ್ಟ್ ಎಂದರೆ, ದೂರವಾದ ಜೋಡಿಗಳು ಮತ್ತೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ತಮ್ಮ ಸಂಬಂಧಕ್ಕೆ ಹೊಸ ಜೀವ ತುಂಬಿಕೊಳ್ಳಬಹುದೇ ಎಂಬುದಾಗಿದೆ. ಇದರಲ್ಲಿ 18+ ಪ್ರಶ್ನೆಗಳಿದ್ದರೆ ಚೆನ್ನಾಗಿತ್ತು ಅಂತ ಸ್ಪರ್ಧಿಯೊಬ್ಬರು ಕೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಮನೆಯಲ್ಲಿ ಮಕ್ಕಳು - ಹಿರಿಯರ ಜೊತೆ ಸೇರಿ ಈ ರೀತಿಯ ಶೋಗಳನ್ನು ನೋಡುವುದಕ್ಕೆ ಸಾಧ್ಯವಾ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications