ಕಾವೇರಿ ನದಿಗೆ ಮತ್ತೊಂದು ಡ್ಯಾಂ ಕಟ್ಟುತ್ತಾರಾ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಕಾವೇರಿ ನದಿ ನೀರಿನ ವಿಚಾರದಲ್ಲಿ ಪದೇ ಪದೆ ಕಿರಿಕ್ ಆಗ್ತಾನೆ ಇರುತ್ತದೆ. ಅದರಲ್ಲೂ ನೆರೆಯ ರಾಜ್ಯ ತಮಿಳುನಾಡು, ಕಾವೇರಿ ನದಿ ನೀರು ಹಂಚಿಕೆ ವಿಚಾರವನ್ನೇ ಮುಂದೆ ಇಟ್ಟುಕೊಂಡು, ಕರ್ನಾಟಕದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗುತ್ತಿದೆ. ಹೀಗಿದ್ದಾಗ ಸಿಎಂ ಸಿದ್ದರಾಮಯ್ಯ ಸರ್ಕಾರ ಕಾವೇರಿ ನೀರಿನ ಸಮಸ್ಯೆಗೆ ಒಂದು ಅಂತ್ಯ ಹಾಡುವ ಎಲ್ಲಾ ಪ್ರಯತ್ನಕ್ಕೂ ಕೈಹಾಕಿದ ರೀತಿ ಕಾಣುತ್ತಿದೆ. ಈಗ ಸಿಎಂ ಸಿದ್ದರಾಮಯ್ಯ ಕಾವೇರಿ ನದಿ ಹೊಸ ಡ್ಯಾಂ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ.
ಹೌದು, ಕರ್ನಾಟಕದಲ್ಲಿ ಕಾವೇರಿ ನದಿಗೆ ಕಟ್ಟಿರುವ ದೊಡ್ಡ ಡ್ಯಾಂ ಅಂದ್ರೆ ಕೆಆರ್‌ಎಸ್. ಆದ್ರೆ ಸಂಕಷ್ಟ ಅಥವಾ ಬರ ಎದುರಾದ ಸಮಯದಲ್ಲಿ, ಇದರಲ್ಲಿ ಇರುವ ನೀರು ತಮಿಳುನಾಡಿಗೆ ಕೂಡ ಸಾಕಾಗುವುದಿಲ್ಲ. ಹೀಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಹೊಸ ಡ್ಯಾಂ ಕಟ್ಟಬೇಕು ಎಂಬ ಬೇಡಿಕೆ ಮೊದಲಿಂದ ಇದೆ. ಆದರೆ ಇದು ವರ್ಕೌಟ್ ಆಗುತ್ತಿಲ್ಲ, ಇದೀಗ ಅದಕ್ಕೆಲ್ಲ ಒಂದು ಕಾಯಕಲ್ಪ ಕಲ್ಪಿಸುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಪ್ರಾಜೆಕ್ಟ್ ರೂಪಿಸಿದೆ. ಈ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ.

ಸಿಎಂ ಕಾವೇರಿ ಡ್ಯಾಂ ಬಗ್ಗೆ ಹೇಳಿದ್ದೇನು?
ಅಂದಹಾಗೆ ಇಂದು ಪ್ರಧಾನಿ ಮೋದಿ ಅವರ ಜೊತೆ ಸುದೀರ್ಘ ಮಾತುಕತೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಈ ಪೈಕಿ ಮೇಕೆದಾಟು ಕುಡಿವ ನೀರಿನ ಯೋಜನೆ ಬಗ್ಗೆಯೂ ಮಾತನಾಡಿದ್ದಾರಂತೆ. ಈ ಕುರಿತು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ, ಮಾಹಿತಿಯನ್ನ ಕೂಡ ನೀಡಿದ್ದಾರೆ. ಹಾಗಾದರೆ ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದು ಏನು? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಮೇಕೆದಾಟು ಕುಡಿಯುವ ನೀರಿನ ಯೋಜನೆಯಾಗಿದ್ದು, ರಾಜ್ಯದ ಗಡಿಯ ಒಳಗೆ ನಿರ್ಮಾಣ ಆಗುವಂತಹುದ್ದು. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ತಕರಾರು ಮಾಡುತ್ತಿದೆ. ಕುಡಿಯುವ ನೀರಿನ ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರು ಕೂಡ ತಮಿಳುನಾಡಿಗೇ ಹೋಗುತ್ತದೆ. ಇದರಿಂದ ಅವರಿಗೇ ಹೆಚ್ಚಿನ… pic.twitter.com/kHQfYyUkY0
— Siddaramaiah (@siddaramaiah) December 19, 2023
ಮೇಕೆದಾಟು ನಿರ್ಮಾಣ ಗ್ಯಾರಂಟಿ?
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, 'ಮೇಕೆದಾಟು ಕುಡಿಯುವ ನೀರಿನ ಯೋಜನೆಯಾಗಿದ್ದು, ರಾಜ್ಯದ ಗಡಿಯ ಒಳಗೆ ನಿರ್ಮಾಣ ಆಗುವಂತಹುದ್ದು. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ತಕರಾರು ಮಾಡುತ್ತಿದೆ. ಕುಡಿಯುವ ನೀರಿನ ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರು ಕೂಡ ತಮಿಳುನಾಡಿಗೇ ಹೋಗುತ್ತದೆ. ಇದರಿಂದ ಅವರಿಗೇ ಹೆಚ್ಚಿನ ಅನುಕೂಲ.' ಎಂದಿದ್ದಾರೆ.
ಇದೇ ಟ್ವೀಟ್‌ನಲ್ಲಿ ಮೇಕೆದಾಟು ಯೋಜನೆ ಬಗ್ಗೆ ಮಾಹಿತಿ ಮುಂದುವರಿಸಿರುವ ಸಿದ್ದರಾಮಯ್ಯ ಅವರು, 'ಮೇಕೆದಾಟು ಯೋಜನೆ ಪೂರ್ಣಗೊಂಡರೆ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗೆ ಕುಡಿಯುವ ನೀರಿಗೆ ಅನುಕೂಲ ಆಗತ್ತೆ. ಆದ್ದರಿಂದ ಮೇಕೆದಾಟುಗೆ ಬೇಗ ಅನುಮತಿ ಕೊಡಿಸುವಂತೆ ಪ್ರಧಾನಿ @narendramodi ಅವರನ್ನು ಒತ್ತಾಯಿಸಿದ್ದೇನೆ.' ಎಂದು ಬರೆದುಕೊಂಡಿದ್ದಾರೆ. ಹೀಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು, ಕನ್ನಡಿಗರ ಕುಡಿಯುವ ನೀರಿನ ಯೋಜನೆ ಕುರಿತು ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾರೆ.












Click it and Unblock the Notifications