ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಘೋರ ಅನ್ಯಾಯ? ನೀರು ಇದ್ದರೂ ನೀರಿಗಾಗಿ ನೆರೆಯ ರಾಜ್ಯ ತಮಿಳುನಾಡು ಬೇಡಿಕೆ?
ಕರ್ನಾಟಕದಲ್ಲಿ ಮಳೆಯೇ ಇಲ್ಲ ಹೀಗಾಗಿ ಕನ್ನಡ ನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳು ನಲುಗಿ ಹೋಗಿದ್ದವು. ಹೀಗಿದ್ದಾಗ 2023ರ ಅಂತ್ಯದಲ್ಲಿ ಬಂದ, ಭಾರಿ ಮಳೆಯ ಪರಿಣಾಮ ಬತ್ತಿ ಹೋಗುತ್ತಿದ್ದ ನದಿ, ಕೆರೆ & ಹಳ್ಳಕೊಳ್ಳ ತುಂಬಿವೆ. ಆದ್ರು ಕರ್ನಾಟಕದಲ್ಲಿ ಮಾತ್ರ ಮಳೆ ಸರಿಯಾಗಿ ಬಿದ್ದಿಲ್ಲ. ತಮಿಳುನಾಡಿನಲ್ಲಿ ಭಾರಿ ಮಳೆ ಪರಿಣಾಮ, ಪ್ರವಾಹ ಅಪ್ಪಳಿಸಿತ್ತು. ಇಷ್ಟಾದರೂ ಮತ್ತೆ ಮತ್ತೆ ನೀರಿಗಾಗಿ ತಮಿಳುನಾಡು ಕಿರಿಕ್ ತೆಗೆಯುತ್ತಿದೆ.
ಅಂದಹಾಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ಕರ್ನಾಟಕಕ್ಕೆ ಭಾರಿ ಹಿನ್ನಡೆಯಾಗಿದೆ. ನೆರೆ ರಾಜ್ಯ ತಮಿಳುನಾಡಲ್ಲಿ ಭಾರಿ ಮಳೆ ಸುರಿದರು ಕಾವೇರಿ ನೀರು ಬಿಡಲು ಈಗ ಕರ್ನಾಟಕದ ಮೇಲೆ ಒತ್ತಡ ಹೆಚ್ಚಾಗಿದೆ. ಬಂಗಾಳ ಕೊಲ್ಲಿ ಪ್ರದೇಶದಲ್ಲಿ, ಕಡಿಮೆ ಒತ್ತಡ ಪ್ರದೇಶ ನಿರ್ಮಾಣ ಹಿನ್ನೆಲೆ & ಇದರ ಜೊತೆಗೆ ಹಿಂಗಾರು ಮಾರುತ ಬಲಿಷ್ಠವಾದ ಕಾರಣಕ್ಕೆ ತಮಿಳುನಾಡು ಹಾಗೂ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಹೀಗಾಗಿ ತಮಿಳುನಾಡಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯ ತುಂಬುತ್ತಿದೆ, ಹಾಗಾದ್ರೆ ಈ ವಿಚಾರದಲ್ಲಿ ಇದೀಗ ಕನ್ನಡಿಗರಿಗೆ ಯಾವ ರೀತಿ ಅನ್ಯಾಯ ಆಗುತ್ತಿದೆ? ಮುಂದೆ ಓದಿ.

ನೀರು ಇದ್ದರೂ ನೀರಿಗಾಗಿ ಕಿರಿಕ್?
ತಮಿಳುನಾಡು ರಾಜ್ಯದ ಬಹುದೊಡ್ಡ ಡ್ಯಾಂ ಅಂದ್ರೆ ಅದು ಮೆಟ್ಟೂರು ಜಲಾಶಯ. ಇದೇ ಡ್ಯಾಂ ಪ್ರತಿಬಾರಿ ಕಾವೇರಿ ವಿಚಾರಕ್ಕೆ ಕಿತ್ತಾಟ ಶುರುವಾದಾಗ ಎಲ್ಲರ ಗಮನ ಸೆಳೆಯುತ್ತದೆ. ಯಾಕಂದ್ರೆ ಕಾವೇರಿ ನದಿಗೆ ತಮಿಳುನಾಡು ರಾಜ್ಯದಲ್ಲಿ ಅಡ್ಡಲಾಗಿ ಕಟ್ಟಿರುವ ಏಕೈಕ ದೊಡ್ಡ ಡ್ಯಾಂ ಇದು. ಸುಮಾರು 120 ಅಡಿಯ ಮೆಟ್ಟೂರು ಜಲಾಶಯದಲ್ಲಿ ಈಗ 70.97 ಅಡಿ ನೀರು ಸಂಗ್ರಹವಾಗಿದೆ. 1,569 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, 250 ಕ್ಯುಸೆಕ್ ನೀರು ಹೊರಗೆ ಹೋಗುತ್ತಿದೆ. ಇಷ್ಟಿದ್ದರೂ ಈಗ ಕರ್ನಾಟಕದಿಂದ ನೀರು ಬಿಡಲು ಒತ್ತಡ ಹಾಕಲಾಗ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕನ್ನಡಿಗರಿಗೆ ಕುಡಿಯುವ ನೀರೂ ಸಿಗಲ್ವಾ?
ಒಟ್ನಲ್ಲಿ ಕರ್ನಾಟಕ ತನ್ನ ಸ್ಥಿತಿ ಹೇಳಿಕೊಂಡು ಎಷ್ಟೆ ಮನವಿ ಮಾಡಿದ್ರೂ ಇದು ತಮಿಳುನಾಡು ಅರ್ಥ ಮಾಡಿಕೊಂಡಂತೆ ಕಾಣ್ತಿಲ್ಲ. ಹೀಗಾಗಿ ಕಿರಿಕ್ ಜೋರಾಗಿದ್ದು, ಕರ್ನಾಟಕದಲ್ಲೂ ಇದೇ ಕಾರಣಕ್ಕೆ ಮತ್ತೊಮ್ಮೆ ಆಕ್ರೋಶ ಭುಗಿಲೆದ್ದು ಪ್ರತಿಭಟನೆ ನಡೆಯುತ್ತಾ? ಅನ್ನೋ ಆತಂಕ ಕೂಡ ಮನೆಮಾಡಿದೆ. ಹಿಂಗಾರು ಮಳೆ ಮಾರತುಗಳು ಕೃಪೆ ತೋರಿದ್ದರೂ ತಮಿಳುನಾಡು ತನ್ನ ಕಿರಿಕ್ ಮುಂದುವರಿಸಿದೆ. ಹೀಗಾಗಿ ಕರ್ನಾಟಕ ಮೇಕೆದಾಟು ಜಲಾಶಯ ನಿರ್ಮಾಣದ ಕುರಿತಾಗಿ, ಯಾವ ನಿರ್ಧಾರ ಕೈಗೊಳ್ಳುತ್ತೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications