ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಭೀರ್ ಗೆ ಕಣ್ಣು ಮಂದ, ಏಕದಿನ ಪಂದ್ಯಕ್ಕೆ ಡೌಟ್?

By Mahesh
|
Google Oneindia Kannada News

Gautam vision still blurred
ಸಸ್ಸೆಕ್ಸ್, ಆ.26: ಭಾರತದ ಆರಂಭದ ಆಟಗಾರ ಗೌತಮ್ ಗಂಭೀರ್ ಅವರ ದೈಹಿಕ ಸಾಮರ್ಥ್ಯ ಕುರಿತ ಮಾಹಿತಿ ಇನ್ನೂ ಗೌಪ್ಯವಾಗಿದೆ. ಡ್ರೆಸಿಂಗ್ ರೂಮ್ ನಿಂದ ಲೀಕ್ ಆದ ಸುದ್ದಿ ಪ್ರಕಾರ ಮಂದ ದೃಷ್ಟಿದೋಷ ಹೊಂದಿರುವ ಗೌತಮ್ ಗಂಭೀರ್ ಏಕದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.

ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ ತಲೆ ಹಾಗೂ ಕಣ್ಣಿಗೆ ಗಾಯ ಮಾಡಿಕೊಂಡ ಗೌತಮ್ ಅವರು ಕೆಂಟ್ ನಲ್ಲಿ ನಡೆಯಲಿರುವ ಹಗಲು ರಾತ್ರಿ ಪಂದ್ಯದಲ್ಲಿ ಆಡುವುದು ಅನುಮಾನ ಏನಿಸಿದೆ.

ಸಸ್ಸೆಕ್ ಪರ ನಡೆದ ಅಭ್ಯಾಸ ಪಂದ್ಯದಿಂದ ಹೊರಗುಳಿದ ಗಂಭೀರ್, ಲಿಸ್ಟೇಷೈರ್‍ ವಿರುದ್ಧ ಆ.29ರಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಆ ಪಂದ್ಯದಲ್ಲಿ ಯಾವುದೇ ತೊಂದರೆ ಕಂಡು ಬರದಿದ್ದಲ್ಲಿ ಆ.31 ರಂದು ಇಂಗ್ಲೆಂಡ್ ವಿರುದ್ಧ ಟ್ವೆಂಟಿ 20 ಪಂದ್ಯ ಹಾಗೂ ಮುಂದೆ ಐದು ಏಕದಿನ ಪಂದ್ಯಗಳಲ್ಲಿ ಗಂಭೀರ್ ಆಡಲಿದ್ದಾರೆ.

ಗಂಭೀರವಾದ ಸಮಸ್ಯೆ?: ಕಣ್ಣಿಗೆ ಪೆಟ್ಟು ಬಿದ್ದ ನಂತರ ಅಭ್ಯಾಸ ಮಾಡುವುದಿರಲಿ ಟಿವಿ ನೋಡುವುದು, ಮೊಬೈಲ್ ನೋಡುವುದಕ್ಕೂ ಗಂಭೀರ್ ಗೆ ಸಾಧ್ಯವಾಗಿಲ್ಲ. ಒಳಾಂಗಣ ಕ್ರೀಡಾಂಗಣದಲ್ಲಿ 45 ನಿಮಿಷಗಳ ಅಭ್ಯಾಸ ನಿರತರಾಗಿದ್ದ ಗೌತಮ್ ಫಿಟ್ ನೆಸ್ ಮೇಲೆ ಬೌಲಿಂಗ್ ಕೋಚ್ ಜೊತೆ ಎರಿಕ್ ಒಂದು ಕಣ್ಣಿಟ್ಟಿದ್ದರು.

ಸಸ್ಸೆಕ್ ಪಂದ್ಯದ ಡ್ರಿಂಕ್ಸ್ ಬ್ರೇಕ್ ನಲ್ಲಿ ಮೈದಾನದಲ್ಲಿ ಓಡುತ್ತಾ ದೈಹಿಕ ಸಾಮರ್ಥ್ಯ ಪಡೆಯಲು ಯತ್ನಿಸಿದರು. ಆದರೆ, ಇಂಗ್ಲೆಂಡ್ ವೇಗಿಗಳ ಬೆಂಕಿಯುಂಡೆಯಂಥ ಎಸೆತಗಳನ್ನು ಎದುರಿಸಲು ಗೌತಮ್ ಕಣ್ಣು ಇನ್ನೂ ಸಿದ್ಧವಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಆದರೆ, ಒಪ್ಪಿಕೊಳ್ಳುವುದು ಕಷ್ಟವಾಗಿದೆ.

English summary
Gautam Gambhir's state of fitness remains a mystery as latest indications emerging from the dressing room are that all is not well with the opener, who is having trouble with his vision after suffering a concussion during the fourth and final Test against England.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X