ವಾವ್.. ಸುಂದರ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡಕ್ಕೆ ಪಾಠ?
ಭಾರತದ ಅತಿ ಸುಂದರ ಕ್ರೀಡಾಂಗಣಗಳ ಪೈಕಿ ಧರ್ಮಶಾಲಾ ಮೊದಲ ಸ್ಥಾನದಲ್ಲಿ ನಿಲ್ಲುತ್ತೆ ಎನ್ನಬಹುದು. ಯಾಕಂದ್ರೆ ಹಿಮವನ್ನೇ ಹೊದ್ದಿರುವ ಪ್ರದೇಶದ ಮಧ್ಯೆ ಹರಡಿಕೊಂಡಿರುವ ಈ ಕ್ರಿಕೆಟ್ ಮೈದಾನ ಕಂಡರೆ ಭಾರತೀಯರು ಮಾತ್ರವಲ್ಲ ವಿದೇಶಿಯರಿಗು ಪ್ರೀತಿ. ಒಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ ಥೇಟ್ ಸ್ವರ್ಗದಂತೆ ಕಾಣುತ್ತದೆ ಧರ್ಮಶಾಲಾದ ಕ್ರಿಕೆಟ್ ಮೈದಾನ. ಇದೇ ಕ್ರೀಡಾಂಗಣವನ್ನ ಹೊಗಳಿದ್ದ ಇಂಗ್ಲೆಂಡ್ ತಂಡ ಈಗ ಸೋಲಿನ ಸುಳಿಗೆ ಸಿಲುಕುತ್ತಿದೆ!
ಇಂಗ್ಲೆಂಡ್ ತಂಡ ಈ ಮೊದಲಿನ ಖದರ್ ಕಳೆದುಕೊಂಡು ಸಾಲು ಸಾಲು ಸೋಲು ಕಂಡು ನರಳಿ ಹೋಗುತ್ತಿದೆ. ಅದರಲ್ಲೂ ಭಾರತದ ಪ್ರವಾಸದಲ್ಲಿ ಬರೋಬ್ಬರಿ 5 ಟೆಸ್ಟ್ ಪಂದ್ಯಗಳ ಸರಣಿ ಆಡಿರುವ ಇಂಗ್ಲೆಂಡ್ ಈಗಾಗಲೇ ಸತತವಾಗಿ 3 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಈ ನಡುವೆ 5ನೇ ಟೆಸ್ಟ್ ಪಂದ್ಯದಲ್ಲೂ ಸೋತು ಸುಣ್ಣವಾಗುವ ಲಕ್ಷಣ ಕಾಣುತ್ತಿದೆ. ಹೀಗಿದ್ದಾಗ ಧರ್ಮಶಾಲಾ ಮೈದಾನದ ಬಗ್ಗೆ ಹೊಗಳಿಕೆ ಮಾತು ಆಡಿದ್ದ ಇಂಗ್ಲೆಂಡ್ ತಂಡದ ಆಟಗಾರ ಪಡೆ ಈಗ ತಮಗೆ ಇಷ್ಟವಾದ ಮೈದಾನದಲ್ಲೇ ಹೀನಾಯ ಸೋಲು ಕಾಣುವ ಸನಿಹದಲ್ಲಿದೆ.

ಹೊಗಳಿದ್ದ ಜಾಗದಲ್ಲೇ ಹೀನಾಯ ಸೋಲು?
5ನೇ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಇಂಗ್ಲೆಂಡ್ ತಂಡ ಕೇವಲ 218 ರನ್‌ಗೆ ತನ್ನ ಮೊದಲನೇ ಇನ್ನಿಂಗ್ಸ್ ಮುಗಿಸಿದೆ. ಇದೀಗ ಬ್ಯಾಟಿಂಗ್ ಶುರು ಮಾಡಿರುವ ಭಾರತ ತಂಡ ಭರ್ಜರಿ ಶುರು ಪಡೆದಿದೆ. ಆರಂಭದಲ್ಲೇ ಭಾರತ ತಂಡದ ಬ್ಯಾಟಿಂಗ್ ಅಬ್ಬರ ನೋಡಿದ ಇಂಗ್ಲೆಂಡ್ ತಂಡ ನಲುಗಿ ಹೋಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೇನು ಒಂದೆರಡು ದಿನದಲ್ಲಿ ಮತ್ತೆ ಭಾರತ ಇತಿಹಾಸ ನಿರ್ಮಾಣ ಮಾಡುವುದು ಗ್ಯಾರಂಟಿ. ಹಾಗೇ ಇಂಗ್ಲೆಂಡ್ ತಂಡಕ್ಕೆ ಮತ್ತೆ ಹೀನಾಯ ಸೋಲು ಎದುರಾಗುವುದು ಬಹುತೇಕ ಪಕ್ಕಾ. ಈ ಮೂಲಕ ಇಂಗ್ಲೆಂಡ್ ತಂಡ, ತಾವು ಹೊಗಳಿದ್ದ ಜಾಗದಲ್ಲೇ ಹೀನಾಯವಾದ ಸೋಲು ಕಾಣುವ ಪರಿಸ್ಥಿತಿಗೆ ಸಿಲುಕಿದೆ.
2ನೇ ಇನ್ನಿಂಗ್ಸ್ ಇಂಗ್ಲೆಂಡ್‌ಗೆ ಕಷ್ಟ
ಈಗಿನ ಲೆಕ್ಕಾಚಾರ ನೋಡುವುದಾದರೆ ಭಾರತ ತಂಡ ಕಡಿಮೆ ಕಡಿಮೆ ಎಂದರೂ 300ಕ್ಕೂ ಹೆಚ್ಚು ರನ್ ಗಳಿಸಲಿದೆ. ಇನ್ನೂ ಮುಂದೆ ಹೋಗಿ ಹೇಳುವುದಾದರೆ 400 ರನ್ ಗಡಿಯನ್ನು ದಾಟಿದರೂ ಅಚ್ಚರಿ ಇಲ್ಲ. ಹೀಗೆ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್ ಗಳಿಸಿದ್ದೇ ಆದರೆ ಮುಂದೆ ಇಂಗ್ಲೆಂಡ್ ತಂಡಕ್ಕೆ 2ನೇ ಇನ್ನಿಂಗ್ಸ್ ಸಿಕ್ಕಾಪಟ್ಟೆ ಕಷ್ಟವಾಗಲಿದೆ. ಹಾಗೇ ಭಾರತದ ವಿರುದ್ಧ ಇನ್ನಿಂಗ್ಸ್ ಸೋಲು ಅನುಭವಿಸುವ ಭಯವೂ ಇಂಗ್ಲೆಂಡ್ ಟೀಂಗೆ ಕಾಡಲಿದೆ. ಸ್ಪಿನ್ ದಾಳಿ ಎದುರಿಸಲು ಆಗದ ಇಂಗ್ಲೆಂಡ್‌ಗೆ ಸಂಕಷ್ಟಗಳ ಮೇಲೆ ಸಂಕಷ್ಟವು ಎದುರಾಗುತ್ತಿದೆ.

ಭಾರತ ತಂಡ ಇದೀಗ ತನ್ನ ಗಮನವನ್ನು ಸಂಪೂರ್ಣವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮೇಲೆ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಇರುವ ಗೆಲುವನ್ನು ಕೂಡ ಸಾಧಿಸುತ್ತಿದೆ. ಅತ್ತ ಇಂಗ್ಲೆಂಡ್ ಪಡೆ ತನ್ನ ಮರ್ಯಾದಿ ಉಳಿಸಿಕೊಳ್ಳಲು ಭಾರತದ ವಿರುದ್ಧ 5ನೇ ಟೆಸ್ಟ್ ಪಂದ್ಯ ಗೆಲ್ಲಲು ಪರದಾಡುತ್ತಿದೆ. ಆದರೆ ಭಾರತ ತಂಡದ ಆಟಗಾರರು ಇಂಗ್ಲೆಂಡ್ ಸೋಲಿಗಾಗಿ ಈ ಮೂಲಕ ಗೆಲುವಿನ ಬಲೆ ಎಣೆದಿದ್ದಾರೆ.












Click it and Unblock the Notifications