ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಗೋಲಗುಂಬಜ್ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ

ಮೈಸೂರು ಮತ್ತು ಪಂಡರಾಪುರ ನಡುವೆ ಸಂಚರಿಸುವ ಅತ್ಯಂತ ಜನಪ್ರಿಯ 'ಗೋಲಗುಂಬಜ್ ಎಕ್ಸ್‌ಪ್ರೆಸ್' ರೈಲಿನ ಮಾರ್ಗದಲ್ಲಿ ಮಹತ್ವದ ಬದಲಾವಣೆ ತರಲು ಭಾರತೀಯ ರೈಲ್ವೆ ಮಂಡಳಿಯು ಶುಕ್ರವಾರ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದೆ. ನೂತನ ಆದೇಶದ ಪ್ರಕಾರ, ಇನ್ನು ಮುಂದೆ ಈ ರೈಲು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕವೇ ನೇರವಾಗಿ ಸಂಚರಿಸಲಿದೆ. ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗದ ಜನರ ಬಹು ದಿನಗಳ ಬೇಡಿಕೆ ಇದೀಗ ಈಡೇರಿದಂತಾಗಿದೆ.

ಮೈಸೂರು-ಪಂಡರಾಪುರ ನಡುವಿನ ಈ ರೈಲು ಕೇವಲ ಸಾಮಾನ್ಯ ಪ್ರಯಾಣಿಕರಿಗಷ್ಟೇ ಅಲ್ಲದೆ, ಪ್ರಸಿದ್ಧ ಯಾತ್ರಾಸ್ಥಳವಾದ ಪಂಡರಾಪುರಕ್ಕೆ ಭೇಟಿ ನೀಡುವ ಸಹಸ್ರಾರು ಭಕ್ತರಿಗೂ ಪ್ರಮುಖ ಜೀವನಾಡಿಯಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ರೈಲ್ವೆ ಮಂಡಳಿಯ ಈ ಜನಪರ ನಿರ್ಧಾರಕ್ಕೆ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.

Railway

ಪ್ರಯಾಣಿಕರಿಗೆ 55 ನಿಮಿಷಗಳ ಸಮಯ ಉಳಿತಾಯ

ದೀರ್ಘಾವಧಿಯ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲು ಹಾಗೂ ಸಮಯವನ್ನು ಉಳಿಸಲು ಈ ಬೈಪಾಸ್ ಮಾರ್ಗದ ಬಳಕೆಯು ಅತ್ಯಂತ ಸಹಕಾರಿಯಾಗಲಿದೆ. ಹಿಂದೆ, ಹುಬ್ಬಳ್ಳಿ ಮತ್ತು ಗದಗ ನಗರದ ಒಳಗೆ ರೈಲುಗಳು ಪ್ರವೇಶಿಸುವುದರಿಂದ ವಿಜಯಪುರ ಹಾಗೂ ಬಾಗಲಕೋಟೆ ಮುಂತಾದ ಜಿಲ್ಲೆಗಳ ಜನರಿಗೆ ಪ್ರಯಾಣಕ್ಕೆ ಹೆಚ್ಚಿನ ಕಾಲಾವಕಾಶ ಹಿಡಿಯುತ್ತಿತ್ತು. ಇಂಜಿನ್ ದಿಕ್ಕು ಬದಲಾಯಿಸುವ ಹಾಗೂ ಸಿಗ್ನಲ್ ಕಾಯುವ ಪ್ರಕ್ರಿಯೆಯಿಂದಾಗಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಇದೀಗ ನೇರವಾಗಿ ಬೈಪಾಸ್ ಮೂಲಕ ಸಂಚರಿಸುವುದರಿಂದ ಈ ಎಲ್ಲಾ ವಿಳಂಬಗಳು ತಪ್ಪಲಿದ್ದು, ಒಟ್ಟು ಪ್ರಯಾಣದ ಅವಧಿಯಲ್ಲಿ ಬರೋಬ್ಬರಿ 55 ನಿಮಿಷಗಳಷ್ಟು ಸಮಯ ಕಡಿತಗೊಳ್ಳಲಿದೆ.

ಟಿಕೆಟ್ ರಹಿತ ಪ್ರಯಾಣಿಕರಿಗೆ ಶಾಕ್: ಇಂದಿನಿಂದ ₹250 ಬದಲು ₹500 ದಂಡ
ಟಿಕೆಟ್ ರಹಿತ ಪ್ರಯಾಣಿಕರಿಗೆ ಶಾಕ್: ಇಂದಿನಿಂದ ₹250 ಬದಲು ₹500 ದಂಡ

ಹೊಸ ವೇಳಾಪಟ್ಟಿ ಹೀಗಿದೆ: ಗೋಲಗುಂಬಜ್ ಎಕ್ಸ್‌ಪ್ರೆಸ್ ಮೈಸೂರಿನಿಂದ ಮಧ್ಯಾಹ್ನ 3.50ಕ್ಕೆ ಹೊರಟು, ಮರುದಿನ ಬೆಳಿಗ್ಗೆ 10.05ಕ್ಕೆ ಪಂಡರಾಪುರವನ್ನು ತಲುಪಲಿದೆ. ಹಾಗೆಯೇ, ಹಿಂದಿರುಗುವಾಗ ಪಂಡರಾಪುರದಿಂದ ಮಧ್ಯಾಹ್ನ 1.15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11.30ಕ್ಕೆ ಮೈಸೂರನ್ನು ತಲುಪಲಿದೆ.

ರೈಲ್ವೆ ಸಚಿವರಿಗೆ ಸಚಿವ ಎಂ.ಬಿ. ಪಾಟೀಲ ಕೃತಜ್ಞತೆ

ರೈಲ್ವೆ ಮಂಡಳಿಯ ಈ ಸಕಾರಾತ್ಮಕ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿರುವ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ವಿಜಯಪುರ ಕಡೆಗೆ ಚಲಿಸುವ ರೈಲುಗಳನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕವೇ ಓಡಿಸಬೇಕೆಂದು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಮಂಡಳಿಯ ಗಮನವನ್ನು ಸತತವಾಗಿ ಸೆಳೆಯಲಾಗಿತ್ತು.

ಈ ಕುರಿತಂತೆ ಹಲವು ಬಾರಿ ಪತ್ರ ವ್ಯವಹಾರಗಳನ್ನು ನಡೆಸಲಾಗಿತ್ತು ಹಾಗೂ ನಿರಂತರವಾಗಿ ಅನುಸರಣಾ ಸಭೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರದ ಹಾಗೂ ಸಾರ್ವಜನಿಕರ ಈ ಸತತ ಪ್ರಯತ್ನಕ್ಕೆ ಮನ್ನಣೆ ನೀಡಿ, ಕೇಂದ್ರವು ಸ್ಪಂದಿಸಿದೆ ಎಂದು ಅವರು ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ನೂತನ ನಿಲ್ದಾಣಗಳು

ಬೈಪಾಸ್ ಮಾರ್ಗದಲ್ಲಿ ರೈಲು ಸಂಚರಿಸುವ ನಿರ್ಧಾರದಿಂದ ಹುಬ್ಬಳ್ಳಿ ಮತ್ತು ಗದಗ ನಗರದ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರೈಲ್ವೆ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿದೆ. ರೈಲು ಊರೊಳಗೆ ಬಾರದಿದ್ದರೂ, ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ದಕ್ಷಿಣ ಮತ್ತು ಗದಗ ಬೈಪಾಸ್ ನಿಲ್ದಾಣಗಳಲ್ಲಿ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲಿಗೆ ಅಧಿಕೃತ ನಿಲುಗಡೆ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಶೀಘ್ರದಲ್ಲೇ ಆರಂಭ: ಪ್ರತಿದಿನ ಸೇವೆ, ಫಸ್ಟ್ ಎಸಿ ಕೋಚ್‌ಗೆ ಲಕ್ಸುರಿ ಟಚ್!
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಶೀಘ್ರದಲ್ಲೇ ಆರಂಭ: ಪ್ರತಿದಿನ ಸೇವೆ, ಫಸ್ಟ್ ಎಸಿ ಕೋಚ್‌ಗೆ ಲಕ್ಸುರಿ ಟಚ್!

ಇದರೊಂದಿಗೆ ಸಚಿವ ಎಂ.ಬಿ. ಪಾಟೀಲ ಅವರು ಕೇಂದ್ರದ ಮುಂದಿಟ್ಟಿರುವ ಇತರ ಪ್ರಮುಖ ಬೇಡಿಕೆಗಳನ್ನೂ ಒತ್ತಾಯಿಸಿದ್ದಾರೆ. ಪ್ರಸ್ತುತ ವಿಜಯಪುರ ಹಾಗೂ ಬೆಂಗಳೂರು ನಡುವೆ ವಾರದಲ್ಲಿ ಕೇವಲ ಎರಡು ದಿನ ಸಂಚರಿಸುತ್ತಿರುವ ವಿಶೇಷ ರೈಲನ್ನು ಶೀಘ್ರವೇ ಕಾಯಂಗೊಳಿಸಬೇಕು. ಜೊತೆಗೆ, ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಮೈಸೂರು-ಪಂಡರಾಪುರ ನಡುವೆ ಮತ್ತೊಂದು ಹೊಸ ರೈಲು ಸೇವೆಯನ್ನು ಆದಷ್ಟು ಬೇಗ ಆರಂಭಿಸಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ಎಲ್ಲಾ ಬೇಡಿಕೆಗಳೂ ಈಡೇರಿದರೆ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ನಡುವಿನ ರೈಲ್ವೆ ಸಂಪರ್ಕ ಜಾಲ ಮತ್ತಷ್ಟು ಸುಗಮವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+