‘ಪರಂಗಿ’ಗಳ ಬುಡಕ್ಕೆ ‘ಫಿರಂಗಿ’ ಇಟ್ಟ ಭಾರತ!

ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಅಕ್ಷರಶಃ ಸವಾರಿ ಮಾಡುತ್ತಿದೆ. ಆಂಗ್ಲರ ಕ್ರಿಕೆಟ್ ಟೀಂ ಒಟ್ಟಾರೆ 5 ಟೆಸ್ಟ್ ಪಂದ್ಯ ಆಡಲು ಕೆಲವು ತಿಂಗಳ ಹಿಂದೆ ಭಾರತಕ್ಕೆ ಬಂದಿದೆ. ಹೀಗೆ ಭಾರತಕ್ಕೆ ಬಂದಾಗಿನಿಂದ ಸಾಲು ಸಾಲು ಸೋಲು ಕಂಡು ಆಂಗ್ಲರು ಬೆಚ್ಚಿಬಿದ್ದಿದ್ದಾರೆ. ಹೀಗೆ ಭಾರತ ಈಗಾಗಲೇ 3-1 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದಾಗಿದೆ. ಹೀಗಿದ್ದರೂ ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಕೂಡ ಭಾರಿ ಹಿನ್ನಡೆ ಅನುಭವಿಸುತ್ತಿದೆ ಇಂಗ್ಲೆಂಡ್ ಪಡೆ.

ಧರ್ಮಶಾಲಾ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಅಖಾಡಕ್ಕೆ ಬಂದ ಇಂಗ್ಲೆಂಡ್ ದಾಂಡಿಗರು, ಮತ್ತೊಮ್ಮೆ ಭಾರತದ ಸ್ಪಿನ್ ದಾಳಿಯ ಎದುರು ನಲುಗಿದರು. ಮೊದಲಿಗೆ ಝಾಕ್ ಕ್ರಾಲಿ & ಬೆನ್ ಡಕೆಟ್ ಅವರ ಆಟದಿಂದ ಒಂದಷ್ಟು ನಿಟ್ಟುಸಿರು ಬಿಟ್ಟು ಮಾನ ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಇತ್ತು ಇಂಗ್ಲೆಂಡ್. ಆದ್ರೆ ಯಾವಾಗ ಈ ಜೋಡಿ 64 ರನ್‌ಗೆ ಬೇರೆ ಬೇರೆ ಆಗೋಯ್ತೋ ಅಲ್ಲಿಂದಲೇ ನೋಡಿ ಶುರುವಾಗಿದ್ದು ಅಸಲಿ ಆಟ. ಮೊದಲಿಗೆ 27 ರನ್‌ನ ಗಳಿಸಿದ್ದ ಬೆನ್ ಡಕೆಟ್, ಪೆವಿಲಿಯನ್ ಗೂಡು ಸೇರಿದರು. ಆ ನಂತರ ಬಂದವರು ಕೂಡ ಭಾರತದ ಸ್ಪಿನ್ ದಾಳಿಗೆ ಬೆಚ್ಚಿಬಿದ್ದರು.

Indian Cricket Team Is Near To Another Victory Against England In 5th Test

100 ರನ್ ಗಳಿಸಿದ್ದಾಗ ಶುರು...

ಹೀಗೆ ಝಾಕ್ ಕ್ರಾಲಿ & ಬೆನ್ ಡಕೆಟ್ ಜೋಡಿ ಬೇರೆಯಾದ ನಂತರ, ಒಲ್ಲಿ ಪೋಪ್ ಹಾಗೂ ಝಾಕ್ ಕ್ರಾಲಿ ಸ್ವಲ್ಪ ಹೊತ್ತು ಹೋರಾಟದ ಪ್ರದರ್ಶನ ನೀಡಿದರು. ಆದರೆ 100 ರನ್‌ಗಳಿಗೆ ಈ ಜೋಡಿ ಕೂಡ ಬೇರೆ ಬೇರೆ ಆಗೋಯ್ತು. ಹಾಗೇ ನೋಡ ನೋಡುತ್ತಿದ್ದಂತೆ, ಜೋ ರೂಟ್, ಜಾನಿ ಬೈರ್‌ಸ್ಟೋ, ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬಂದು ಹೋದರು. ಹೀಗೆ ಇವರ ಹೀನಾಯ ಪ್ರದರ್ಶನದ ನಡುವೆ, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ ಹಾಗೂ ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್ ಎಲ್ಲರೂ ಪೆವಿಲಿಯನ್ ಗೂಡು ಸೇರಿದರು. ಆದರೆ ಶೋಯೆಬ್ ಬಶೀರ್ ಔಟಾಗದೆ ಉಳಿದುಬಿಟ್ಟರು. ಈ ಮೂಲಕ ಇಂಗ್ಲೆಂಡ್ ಕೇವಲ 218 ರನ್‌ಗೆ ಪೂರ್ತಿ ವಿಕೆಟ್ ಕಳೆದುಕೊಂಡು ಆಲೌಟ್ ಆಗಿತ್ತು. ಭಾರತ ತಂಡ ಮಾತ್ರ ಇಂಗ್ಲೆಂಡ್ ಬೌಲರ್‌ಗಳ ಚಳಿ ಬಿಡಿಸುತ್ತಿದೆ!

ಭಾರತದ ಆಟಗಾರರ ಭರ್ಜರಿ ಆಟ!

ಮೊದಲೇ ಹೇಳಿದಂತೆ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 218 ರನ್‌ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು, ಆಲೌಟ್ ಆಗಲು ಕಾರಣ ಭಾರತದ ಸ್ಪಿನ್ ಬೌಲರ್ಸ್. ಈ ಮಾತಿನಂತೆ ಭಾರತದ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದರೆ ಕುಲ್ದೀಪ್ ಯಾದವ್ 5 ವಿಕೆಟ್ ಪಡೆದರು. ಹಾಗೇ ರವೀಂದ್ರ ಜಡೇಜಾ 1 ವಿಕೆಟ್ ಪಡೆದರು. ಈ ಮೂಲಕವಾಗಿ ಭಾರತ ಮತ್ತೊಮ್ಮೆ ತನ್ನ ಸ್ಪಿನ್ ಪಡೆಯ ತಾಕತ್ ತೋರಿಸಿದೆ. ಇದರ ಜೊತೆಗೆ ಈಗ ಟೀಂ ಇಂಡಿಯಾದ ಬ್ಯಾಟಿಂಗ್ ಪಡೆ ಕೂಡ ಅಬ್ಬರ ಶುರು ಮಾಡಿದೆ.

Indian Cricket Team Is Near To Another Victory Against England In 5th Test

ಇನ್ನು ಇಂಗ್ಲೆಂಡ್ ನೀಡಿರುವ ಕೇವಲ 218 ರನ್ ಗುರಿ ಬೆನ್ನುಹತ್ತಿದ ಭಾರತ ತಂಡ ಭರ್ಜರಿ ಆರಂಭ ಪಡೆದಿದೆ. ಈಗಾಗಲೇ ಯಶಸ್ವಿ ಜೈಸ್ವಾಲ್ 57 ರನ್ ಗಳಿಸಿ ಔಟಾಗಿದ್ದರೆ. ಭಾರತದ ನಾಯಕ ರೋಹಿತ್ ಶರ್ಮಾ 52 ರನ್ ಗಳಿಸಿ ಔಟಾಗದೆ ಉಳಿದಿದ್ದು, ರೋಹಿತ್ ಶರ್ಮಾಗೆ ಶುಭಮನ್ ಗಿಲ್ ಸಾಥ್ ನೀಡಿದ್ದು 2 ಸಿಕ್ಸ್ & 2 ಬೌಂಡರಿ ಬಾರಿಸಿ 26 ರನ್ ಗಳಿಸಿ ಇನ್ನೂ ಸ್ಕ್ರೀಸ್‌ನಲ್ಲಿ ಆಡುತ್ತಿದ್ದಾರೆ. ಈ ಮೂಲಕ ಭಾರತ ತಂಡ 135 ರನ್‌ಗೆ 1 ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದೆ. ಹೀಗಾಗಿ ನಾಳಿನ ಆಟ ಭರ್ಜರಿ ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+