India Vs England: ಧರ್ಮಶಾಲಾ ಟೆಸ್ಟ್‌ನಲ್ಲಿ ಕನ್ನಡಿಗನಿಗೆ ಅವಕಾಶ ಸಿಗೋದು ಪಕ್ಕಾ!
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯಕ್ಕಾಗಿ ಧರ್ಮಶಾಲಾಗೆ ಆಗಮಿಸಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ನಾಲ್ಕನೇ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದ ಬಳಿಕ ಐದನೇ ಟೆಸ್ಟ್‌ನಲ್ಲಿ ಮರಳಲು ಸಿದ್ಧರಾಗಿದ್ದಾರೆ.
ಧರ್ಮಶಾಲಾದಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ಮುನ್ನಡೆಸಲು ಬುಮ್ರಾ ಸಜ್ಜಾಗಿದ್ದಾರೆ. ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ 100ನೇ ಟೆಸ್ಟ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಈ ಬೆನ್ನಲ್ಲೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ಪ್ರಮುಖ ಬದಲಾವಣೆಗಳ ಬಗ್ಗೆ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮಾತನಾಡಿದ್ದಾರೆ.

ಧರ್ಮಶಾಲಾದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಬಗ್ಗೆ ಸಂಜಯ್ ಬಂಗಾರ್ ಮಾತನಾಡಿದ್ದಾರೆ. ಪ್ರಮುಖವಾಗಿ ಕೊನೆಯ ಟೆಸ್ಟ್‌ನಲ್ಲಿ ಮತ್ತೊಬ್ಬ ಯುವ ಆಟಗಾರ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ದೇವದತ್ ಪಡಿಕ್ಕಲ್‌ಗೆ ಅವಕಾಶ
ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ ಮತ್ತು ಆಕಾಶ್ ದೀಪ್ ಅವರು ನಡೆಯುತ್ತಿರುವ ಇಂಗ್ಲೆಂಡ್ ಸರಣಿಯಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಈಗ ಕನ್ನಡಿಗೆ ದೇವದತ್ ಪಡಿಕ್ಕಲ್ ಕೂಡ ಕೊನೆ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯದ ಮುನ್ನಾದಿನದಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಬಂಗಾರ್, ಪಾಟಿದಾರ್ ಬದಲಿಗೆ ಅನ್ ಕ್ಯಾಪ್ಡ್ ದೇವದತ್ ಪಡಿಕ್ಕಲ್ ಅವರಿಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಧರ್ಮಶಾಲಾದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಬುಮ್ರಾ ಅವರು ಆಡಬಹುದು ಎಂದು ಹೇಳಿದ್ದಾರೆ. "ಧರ್ಮಶಾಲಾದಲ್ಲಿ ವಾತಾವರಣ ಸ್ವಲ್ಪ ತಂಪಾಗಿರುತ್ತದೆ ಮತ್ತು ಮೈದಾನವು ಇರುವ ಎತ್ತರದ ಕಾರಣದಿಂದಾಗಿ ಸ್ವಲ್ಪ ಸೀಮ್ ಚಲನೆ ಇರುತ್ತದೆ. ಅದರ ಕಾರಣದಿಂದಾಗಿ, ಒಂದು ಬದಲಾವಣೆ ಇರುತ್ತದೆ. ಕುಲದೀಪ್ ಕುಲದೀಪ್ ಯಾದವ್ ಬದಲಿಗೆ ಜಸ್ಪ್ರೀತ್ ಬುಮ್ರಾ ಮರಳಬಹುದು. ಆದ್ದರಿಂದ ಭಾರತವು ಮೂವರು ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಅವರೊಂದಿಗೆ ಆಡಲಿದೆ ಎಂದು ಬಂಗಾರ್ ಹೇಳಿದರು.
ಪಾಟಿದಾರ್ ಬದಲಾಗಿ ಪಡಿಕ್ಕಲ್!
ಪಾಟಿದಾರ್ ಅವರು ಈ ಟೆಸ್ಟ್ ಸರಣಿಯಲ್ಲಿ 32, 9, 5, 0, 17, 0 ರನ್ ಗಳಿಸಿದ್ದಾರೆ. ಅಂತಿಮ ಪಂದ್ಯದಿಂದ ಕೆಎಲ್ ರಾಹುಲ್ ಕೂಡ ಹೊರಗುಳಿದಿದ್ದಾರೆ. ಹೀಗಾಗಿ, ರಾಹುಲ್ ಅವರ ಕರ್ನಾಟಕದ ಸಹ ಆಟಗಾರ ಪಡಿಕ್ಕಲ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಲಾಗಿದೆ. "ರಜತ್ ಪಾಟಿದಾರ್ ಮೂರು ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಸದ ಕಾರಣ, ನೀವು ಅಲ್ಲಿ ಹೊಸ ಚೊಚ್ಚಲ ಆಟಗಾರನನ್ನು ನೋಡಬಹುದು. ಭಾರತ ತಂಡ ದೇವದತ್ ಪಡಿಕ್ಕಲ್‌ಗೆ ಅವಕಾಶ ನೀಡಬಹುದು. ಆದ್ದರಿಂದ ನನ್ನ ಪ್ರಕಾರ ಎರಡು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು," ಎಂದು ಬಂಗಾರ್ ಹೇಳಿದರು.












Click it and Unblock the Notifications