ಭಾರತದ ಎದುರು ಮಾನ ಕಳೆದುಕೊಂಡ ಇಂಗ್ಲೆಂಡ್ ಕ್ರಿಕೆಟ್ ತಂಡ!
ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಮತ್ತೊಂದು ಹೀನಾಯ ಸೋಲು ಕಂಡಿದೆ. ಭಾರತದ ಸ್ಪಿನ್ ಬೌಲಿಂಗ್ ಅಖಾಡದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ನರಳಾಡಿ ಹೋಗಿದೆ. ಸೋಲು ಸೋಲು ಹೀಗೆ ಸಾಲು ಸಾಲು ಸೋಲುಗಳಿಂದ ಬಳಲಿ ಬೆಂಡಾಗಿರುವ, ಇಂಗ್ಲೆಂಡ್ ತಂಡಕ್ಕೆ ಈಗ ಮತ್ತೊಂದು ಭೀಕರ ಆಘಾತ ಎದುರಾಗಿದೆ.
ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ಭಾರತದ ಎದುರು ಮತ್ತೊಮ್ಮೆ ಮಂಡಿಯೂರಿರುವ, ಇಂಗ್ಲೆಂಡ್ ಕ್ರಿಕೆಟ್ ತಂಡ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಖಾಡದಲ್ಲಿ ಬಹುತೇಕ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಯಾಕಂದ್ರೆ ಇಡೀ ಜಗತ್ತಿಗೆ ಕ್ರಿಕೆಟ್ ಪಾಠ ಮಾಡಿದ್ದ ಇದೇ ಇಂಗ್ಲೆಂಡ್ ತಂಡ ಇದೀಗ ಹೀನಾಯ ಸೋಲನ್ನು ಕಂಡಿದೆ. ಈಗಾಗಲೇ ಇದೇ ರೀತಿ ಸಾಲು ಸಾಲು ಸೋಲು ಕಂಡಿರುವ ಇಂಗ್ಲೆಂಡ್ ತಂಡ ಈಗ ಮತ್ತೊಮ್ಮೆ ಭಾರತ ತಂಡದ ಎದುರು ಮಂಡಿಯೂರಿದೆ. ಭಾರತದ ಎದುರು ಇನ್ನಿಂಗ್ಸ್ ಸೋಲಿನ ಮೂಲಕ ಮನೆ ಕಡೆ ನಡೆಯುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿ ತಳವೂರಿದೆ.

ಸೋಲಿನ ನಂತರ ಭಾರತದ ಅಬ್ಬರ!
ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ಆರಂಭವಾದ ಸಮಯದಲ್ಲಿ ಭಾರತವು, ಭೀಕರ ಸೋಲು ಕಂಡಿತ್ತು. ಮೊದಲ ಪಂದ್ಯದಲ್ಲಿ ದೊಡ್ಡ ಹಿನ್ನಡೆ ಅನುಭವಿಸಿದ ರೋಹಿತ್ ಶರ್ಮಾ ಪಡೆ ಮತ್ತೆ ದೊಡ್ಡ ಕಂಬ್ಯಾಕ್ ಮಾಡಿತ್ತು. ಹೀಗೆ ಒಂದು ಸೋಲಿನ ನಂತರ ಮೂರು ಗೆಲುವನ್ನ ಸಾಧಿಸಿ, ಸರಣಿಯಲ್ಲಿ 3-1 ಅಂತರವನ್ನ ಕಾಪಾಡಿಕೊಂಡಿತ್ತು. ಹೀಗಾಗಿ 5ನೇ ಟೆಸ್ಟ್ ಪಂದ್ಯದಲ್ಲಿ ಗೆದ್ದೇ ಗೆಲ್ಲಬೇಕು ಅಂತಾ ಇಂಗ್ಲೆಂಡ್ ಅಖಾಡ ಪ್ರವೇಶ ಮಾಡಿತ್ತು. ಆದರೆ ಆಗಿದ್ದೆಲ್ಲಾ ಉಲ್ಟಾ, ಗೆಲುವು ಬಿಡಿ ಹೀನಾಯ ಸೋಲಿನಿಂದ ಬಚಾವ್ ಆಗಲು ಇಂಗ್ಲೆಂಡ್ ತಂಡ ಪರದಾಡಿತ್ತು!
ತರಗೆಲೆ ರೀತಿ ಹಾರಿಹೋದ ಇಂಗ್ಲೆಂಡ್
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 218 ರನ್ ಗಳಿಸಿದ್ದ ಇಂಗ್ಲೆಂಡ್ ಪಡೆಗೆ ಮೊದಲೇ ಸೋಲಿನ ಸುಳಿವು ಸಿಕ್ಕಿತ್ತು. ಅದರಲ್ಲೂ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಯಾವಾಗ ಭರ್ಜರಿ, 477 ರನ್ ಗಳಿಸಿತ್ತೋ ಅಲ್ಲಿಂದಲೇ ಇಂಗ್ಲೆಂಡ್ ತಂಡಕ್ಕೆ ಕಂಟಕ ಶುರುವಾಗಿತ್ತು. ಭಾರತದ ಬ್ಯಾಟಿಂಗ್ ಅಬ್ಬರ ತಡೆಯಲು ವಿಫಲವಾದ ಇಂಗ್ಲೆಂಡ್ ಟೀಂ, ಕೊನೆಗೆ ಭಾರತದ ಭರ್ಜರಿ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ಕೂಡ ಎಡವಟ್ಟು ಮಾಡಿಕೊಂಡಿತ್ತು. ಹೀಗಾಗಿ ನೋಡ ನೋಡುತ್ತಲೇ ಇಂಗ್ಲೆಂಡ್ ತಂಡ ತರಗೆಲೆ ರೀತಿ ಹಾರಿ ಹೋಗಿದೆ.

2ನೇ ಇನ್ನಿಂಗ್ಸ್‌ನಲ್ಲಿ ಕೂಡ ಹೀನಾಯ ಪ್ರದರ್ಶನ ನೀಡಿರುವ ಇಂಗ್ಲೆಂಡ್ ತಂಡ 195 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಭಾರತ ಕ್ರಿಕೆಟ್ ತಂಡ ಅತ್ಯದ್ಭುತ ಗೆಲುವು ದಾಖಲಿಸಿದೆ. ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಶಕ್ತಿ ಏನು ಅನ್ನೋದು ಮತ್ತೆ ಗೊತ್ತಾಗಿದೆ. ಇನ್ನು ಈ ಬಾರಿ ಸರಣಿಯಲ್ಲಿ, ಭಾರತ ತಂಡದ ಪರ ಮಿಂಚಿದ್ದು ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್. ಹಾಗೇ ಬ್ಯಾಟಿಂಗ್‌ನಲ್ಲಿ, ಯಶಸ್ವಿ ಜೈಸ್ವಾಲ್ ಕೂಡ ಹೊಸ ಹೊಸ ದಾಖಲೆ ನಿರ್ಮಿಸಿದ್ದಾರೆ.












Click it and Unblock the Notifications