700 ವಿಕೆಟ್ ಸಾಧನೆ ಮಾಡಿದ ಇಂಗ್ಲೆಂಡ್ ಆಟಗಾರ, ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು?
ಭಾರತದ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ತಂಡ ಒಂದು ಕಡೆ ಹೀನಾಯ ಸೋಲು ಕಾಣುತ್ತಿದೆ. ಈಗಾಗಲೇ ಸತತ 3 ಟೆಸ್ಟ್ ಪಂದ್ಯ ಸೋತಿರುವ ಇಂಗ್ಲೆಂಡ್ ಕ್ರಿಕೆಟ್ ಟೀಂ ಈಗ, 4ನೇ ಟೆಸ್ಟ್ ಪಂದ್ಯದಲ್ಲೂ ಸೋಲುವುದಕ್ಕೆ ಸಿದ್ಧವಾಗಿದೆ. ಪರಿಸ್ಥಿತಿ ಹೀಗಿದ್ದಾಗಲೇ, ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಏನಂದ್ರೆ ಇಂಗ್ಲೆಂಡ್ ತಂಡದ ಈ ಆಟಗಾರ ಕ್ರಿಕೆಟ್ ಇತಿಹಾಸದಲ್ಲೇ 700 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ, ಅದೂ ಟೆಸ್ಟ್ ಕ್ರಿಕೆಟ್‌ನಲ್ಲಿ!
ಹೌದು, ಜಗತ್ತಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಇಂಗ್ಲೆಂಡ್ ತಂಡ ಇತ್ತೀಚಿಗೆ ತನ್ನ ಶಕ್ತಿಯನ್ನೇ ಕಳೆದುಕೊಂಡ ರೀತಿ ಆಡುತ್ತಿದೆ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಹೀನಾಯವಾಗಿ ಸೋಲುತ್ತಿದ್ದು, ಪರದಾಡುತ್ತಿದೆ. ಹೀಗಿದ್ದಾಗಲೇ ಇಂಗ್ಲೆಂಡ್ ತಂಡದ ಹಿರಿಯ ಸ್ಪೀಡ್ ಬೌಲರ್ ಜೇಮ್ಸ್ ಆಂಡರ್ಸನ್ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭರ್ಜರಿ 700 ವಿಕೆಟ್ ಪಡೆದು ಚರಿತ್ರೆ ಬರಿದ್ದಾರೆ.

41ನೇ ವಯಸ್ಸಿನಲ್ಲೂ ಖದರ್
ಅದರಲ್ಲೂ ತಮ್ಮ 41ನೇ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿರುವ, ಜೇಮ್ಸ್ ಆಂಡರ್ಸನ್ ಕ್ರಿಕೆಟ್ ಜಗತ್ತಿಗೆ ಮಾದರಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ಅಖಾಡದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಟಾಪ್ 3 ಬೌಲರ್ ಆಗಿದ್ದಾರೆ. ಹಾಗಾದ್ರೆ ನಂಬರ್ 1 ಬೌಲರ್ ಯಾರು? ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೂ ಅತಿಹೆಚ್ಚು ವಿಕೆಟ್ ಪಡೆದಿರುವ ಆ ಬೌಲರ್ ಹೆಸರು ಏನು? ಭಾರತದ ಬೌಲರ್ಸ್ ಎಲ್ಲಿದ್ದಾರೆ? ಮುಂದೆ ಓದಿ.
ಹೀನಾಯವಾಗಿ ಸೋಲುತ್ತಿದೆ ಇಂಗ್ಲೆಂಡ್
ಇಂಗ್ಲೆಂಡ್ ಕ್ರಿಕೆಟ್ ತಂಡದ ಹಣೆಬರಹ ಸರಿ ಇಲ್ಲ ಅಂತಾ ಕಾಣುತ್ತಿದೆ. ಯಾಕಂದ್ರೆ ಈ ಆಂಗ್ಲರು ಭಾರತ ಕ್ರಿಕೆಟ್ ತಂಡದ ಎದುರು ಹೀನಾ, ಮಾನವಾಗಿ ಸೋಲುತ್ತಿದ್ದಾರೆ. ಇನ್ನೂ, ಕಳೆದ 3-4 ಟೆಸ್ಟ್ ಪಂದ್ಯಗಳಿಂದ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಉಳಿದ ಮಾನ & ಮರ್ಯಾದಿ ಕೂಡ ಹರಾಜು ಆಗೋಗಿದೆ. ಹೀಗಿದ್ದಾಗ ಜೇಮ್ಸ್ ಆಂಡರ್ಸನ್ ಅವರು ಇದೀಗ ಒಂದಷ್ಟು ಇಂಗ್ಲೆಂಡ್ ಟೀಂ ಮಾನ ಉಳಿಸಿದ್ದಾರೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಮೈದಾನದಲ್ಲಿ ಈಗ, ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಈ ಸಾಧನೆ ಮಾಡಿದ್ದಾರೆ ಜೇಮ್ಸ್ ಆಂಡರ್ಸನ್. ಭಾರತದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ವಿಕೆಟ್‌ನ ಪಡೆಯುವ ಮೂಲಕ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಉರುಳಿಸಿದ್ದಾರೆ. ಹಾಗಾದರೆ ನಂಬರ್ ಬೌಲರ್ ಯಾರು? ಬನ್ನಿ ತಿಳಿಯೋಣ.
ನಂಬರ್ 1 ಬೌಲರ್ ಇವರೇ ನೋಡಿ!
ಟೆಸ್ಟ್ ಕ್ರಿಕೆಟ್ ಆರಂಭವಾಗಿ ಶತ ಶತಮಾನವೇ ಕಳೆದು ಹೋಗಿದೆ. ಹೀಗೆ ಆರಂಭವಾಗಿರುವ ಟೆಸ್ಟ್ ಕ್ರಿಕೆಟ್ ಅಂಗಳದಲ್ಲಿ ನೂರಾರು ಸಾಧಕರು ಸಾಧನೆ ಮಾಡಿದ್ದಾರೆ. ಅದರಲ್ಲೂ ಸ್ಪಿನ್ ಬೌಲರ್ಸ್ ಅಬ್ಬರ ಬಲು ಜೋರಾಗಿತ್ತು. ಆದ್ರೆ ಈಗ ಜೇಮ್ಸ್ ಆಂಡರ್ಸನ್ ವೇಗದ ಬೌಲರ್ ಆಗಿಯೂ ದೊಡ್ಡ ಸಾಧನೆ ಮಾಡಿದ್ದಾರೆ. ಟೆಸ್ಟ್ ಅಖಾಡದಲ್ಲಿ ಮುತ್ತಯ್ಯ ಮುರಳೀಧರನ್‌ಗೆ ಒಟ್ಟು 800 ವಿಕೆಟ್ ಸಿಕ್ಕಿವೆ. ಹಾಗೇ ವಿವಾದಗಳ ಸರದಾರ ಹಾಗೂ ಆಸ್ಟ್ರೇಲಿಯಾದ ಬೆಸ್ಟ್ ಸ್ಪಿನ್ ಬೌಲರ್ ಶೇನ್ ವಾರ್ನ್ 708 ವಿಕೆಟ್ ಪಡೆದಿದ್ದಾರೆ. ಆ ನಂತರ ಇದೀಗ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ 700 ವಿಕೆಟ್ ಪಡೆದ ಜಗತ್ತಿನ 3ನೇ ಬೌಲರ್ ಎಂಬ ಸಾಧನೆ ಮಾಡಿದ್ದಾರೆ.
ಅಯ್ಯಯ್ಯೋ ಆಂಗ್ಲರ ಕಥೆ ಏನು?
ಭಾರತದ ಅತಿ ಸುಂದರ ಕ್ರೀಡಾಂಗಣಗಳ ಪೈಕಿ, ಧರ್ಮಶಾಲಾ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತೆ ಎನ್ನಬಹುದು. ಯಾಕಂದ್ರೆ ಹಿಮವನ್ನೇ ಹೊದ್ದಿರುವ ಪ್ರದೇಶದ ಮಧ್ಯೆ ಹರಡಿಕೊಂಡಿರುವ ಈ ಕ್ರಿಕೆಟ್ ಮೈದಾನ ಕಂಡರೆ ಭಾರತೀಯರು ಮಾತ್ರವಲ್ಲ, ವಿದೇಶಿಯರಿಗು ಕೂಡ ಇಷ್ಟ. ಒಂದು ಲೆಕ್ಕಾಚಾರದಲ್ಲಿ ಹೇಳುವುದಾದ್ರೆ ಥೇಟ್ ಸ್ವರ್ಗದಂತೆ ಕಾಣುತ್ತೆ ಧರ್ಮಶಾಲಾ ಕ್ರಿಕೆಟ್ ಮೈದಾನ. ಇದೇ ಕ್ರೀಡಾಂಗಣವನ್ನ ಹೊಗಳಿದ್ದ ಇಂಗ್ಲೆಂಡ್ ತಂಡ ಈಗ ಸೋಲಿನ ಸುಳಿಗೆ ಸಿಲುಕುತ್ತಿದೆ. ಈ ಪರಿಸ್ಥಿತಿ ನೋಡುತ್ತಿದ್ದರೆ ಇನ್ನೇನು ಕೆಲವೇ ಗಂಟೆಗಳಲ್ಲಿ ಇಂಗ್ಲೆಂಡ್ ಆಲೌಟ್ ಆಗಿ ಭಾರತ ತಂಡದ ಎದುರು 5ನೇ ಟೆಸ್ಟ್ ಪಂದ್ಯವನ್ನು ಸೋಲುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications