Ben Stokes: ಮೊದಲ ಎಸೆತದಲ್ಲೇ ರೋಹಿತ್ ಕ್ಲೀನ್ ಬೌಲ್ಡ್; ಸ್ಟೋಕ್ಸ್ ಬೌಲಿಂಗ್ ನೋಡಿ ದಂಗಾದ ಇಂಗ್ಲೆಂಡ್ ಆಟಗಾರರು
ಧರ್ಮಶಾಲಾದಲ್ಲಿ ಇಡೀ ಇಂಗ್ಲೆಂಡ್ ತಂಡ ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ಕಂಗಾಲಾಗಿದ್ದಾಗ ಬೌಲಿಂಗ್ ದಾಳಿಗೆ ಬಂದ ಬೆನ್ ಸ್ಟೋಕ್ಸ್ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಇಡೀ ತಂಡವನ್ನೇ ದಂಗಾಗುವಂತೆ ಮಾಡಿದರು.
ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 218 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ಭಾರತ ಬೃಹತ್ ಮುನ್ನಡೆ ಪಡೆಯುವತ್ತ ಹೋಗುತ್ತಿದೆ.

ಮೊದಲ ದಿನದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದ್ದ ಭಾರತ, ಎರಡನೇ ದಿನ ಅತ್ಯುತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಇಂಗ್ಲೆಂಡ್ ಬೌಲರ್ ಗಳನ್ನು ತರಾಟೆಗೆ ತೆಗೆದುಕೊಂಡರು. ಇಬ್ಬರೂ ಕೂಡ ಶತಕ ಗಳಿಸುವ ಮೂಲಕ ಭಾರತಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟರು.
Ben Stokes gets a wicket on the first ball.
— Mufaddal Vohra (@mufaddal_vohra) March 8, 2024
- What a start by Stokes.pic.twitter.com/4BldFtY2iz
ಬೆನ್ ಸ್ಟೋಕ್ಸ್ ಆಪತ್ಭಾಂದವ!
ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ದಂಡಿಸುತ್ತಿದ್ದರು. ನಾಯಕ ಸ್ಟೋಕ್ಸ್ ಬೌಲಿಂಗ್ ಬದಲಾವಣೆ ಮಾಡಿದರು, ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿದರು ಪ್ರಯೋಜನವಾಗಲಿಲ್ಲ.
ಒಂದು ಹಂತದಲ್ಲಿ ರೋಹಿತ್ ಮತ್ತು ಗಿಲ್ ಸುಲಭವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಮೊದಲ ಸೆಷನ್‌ನಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿರು. ಆದರೆ ಊಟದ ಬಳಿಕ, ಎರಡನೇ ಸೆಷನ್‌ನಲ್ಲಿ ಕೊನೆಗೆ ತಾವೇ ಬೌಲಿಂಗ್ ಮಾಡಲು ನಿರ್ಧರಿಸಿದ ಸ್ಟೋಕ್ಸ್ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾರನ್ನು ಕ್ಲೀನ್ ಬೌಲ್ಡ್ ಮಾಡಿದರು. ರೋಹಿತ್ ಬೌಲ್ಡ್ ಆಗುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು, ಕೋಚ್ ಬ್ರೆಂಡನ್ ಮೆಕಲಂ ಕೂಡ ದಿಗ್ಭ್ರಾಂತರಾದರು. ರೋಹಿತ್ ಶರ್ಮಾ ಕೂಡ ತಾವು ಬೌಲ್ಡ್ ಆಗಿದ್ದನ್ನು ನೋಡಿ ಅಚ್ಚರಿಗೊಂಡರು.
ಜೂನ್ 2023 ರಿಂದ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡಿಲ್ಲ ಎಂಬುದು ಸಹ ಮುಖ್ಯ. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಅವರು ಬ್ಯಾಟಿಂಗ್ ಕಡೆ ಮಾತ್ರ ಗಮನ ಹರಿಸಿದ್ದಾರೆ. ಆದರೆ ತಂಡ ಸಂಕಷ್ಟದಲ್ಲಿದ್ದಾಗ ಬೌಲಿಂಗ್ ಮಾಡಿದ ಅವರು ಪ್ರಮುಖ ವಿಕೆಟ್ ಪಡೆದರು.
ಸ್ಟೋಕ್ಸ್ ವಿಕೆಟ್ ಪಡೆಯುತ್ತಿದ್ದಂತೆ ಮಾರ್ಕ್ ವುಡ್ ಮತ್ತು ಜೇಮ್ಸ್ ಆಂಡರ್ಸನ್ ಅವರ ತಲೆಯ ಮೇಲೆ ತಮ್ಮ ಕೈಗಳನ್ನು ಹೊತ್ತುಕೊಂಡರು. ನಾವು ಅಷ್ಟು ಓವರ್ ಬೌಲಿಂಗ್ ಮಾಡಿದರೂ ವಿಕೆಟ್ ಪಡೆಯಲು ಆಗಲಿಲ್ಲ, ಇವರು ಮೊದಲನೇ ಎಸೆತದಲ್ಲೇ ವಿಕೆಟ್ ಪಡೆದ್ರಲ್ಲಪ್ಪಾ ಅನ್ನೋ ಭಾವನೆ ಅವರ ಮುಖದಲ್ಲಿತ್ತು.
ರೋಹಿತ್ ಶರ್ಮಾ ಔಟಾದ ಸ್ವಲ್ಪ ಸಮಯದ ನಂತರ, ಶುಭಮನ್ ಗಿಲ್ ಕೂಡ ಇದೇ ರೀತಿಯಲ್ಲಿ ಔಟಾದರು. ಆದರೆ, ಈ ಬಾರಿ ಜೇಮ್ಸ್ ಆ್ಯಂಡರ್ಸನ್ ಗಿಲ್ ಅವರನ್ನು ಬೌಲ್ಡ್ ಮಾಡಿದ್ದರು.












Click it and Unblock the Notifications