Ben Stokes: ಟಿ20 ವಿಶ್ವಕಪ್‌ಗೆ ಮುನ್ನ ಇಂಗ್ಲೆಂಡ್‌ ತಂಡಕ್ಕೆ ಶಾಕ್ ಕೊಟ್ಟ ಬೆನ್‌ಸ್ಟೋಕ್ಸ್

ಟಿ20 ವಿಶ್ವಕಪ್‌ಗೆ ಮುನ್ನ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ ಸಿಕ್ಕಿದೆ. ಪ್ರಮುಖ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಕಳೆದ ಇಂಗ್ಲೆಂಡ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟೋಕ್ಸ್ ಅನುಪಸ್ಥಿತಿ ಈ ಬಾರಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ಜೂನ್ 2 ರಿಂದ ಟಿ20 ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿದೆ, ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎ ಪಂದ್ಯಾವಳಿಯನ್ನು ಆಯೋಜಿಸಲಿವೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿದ್ದರು. ಈ ಬಾರಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಯೋಜನೆಯಲ್ಲಿದ್ದ ತಂಡಕ್ಕೆ ಸ್ಟೋಕ್ಸ್ ಆಘಾತ ನೀಡಿದ್ದಾರೆ.

England s Ben Stokes Withdraws from T20 World Cup Prioritizing Full Fitness Recovery

ಫಿಟ್‌ನೆಸ್ ಮೇಲೆ ಕೆಲಸ ಮಾಡಲು ಟಿ20 ವಿಶ್ವಕಪ್‌ ಪಂದ್ಯಾವಳಿಯಿಂದ ಹೊರಗುಳಿಯುತ್ತಿರುವುದಾಗಿ ಬೆನ್‌ಸ್ಟೋಕ್ಸ್ ಹೇಳಿದ್ದಾರೆ. "ನಾನು ಕಠಿಣ ಕೆಲಸ ಮಾಡುತ್ತಿದ್ದೇನೆ. ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಆಲ್‌ರೌಂಡರ್ ಆಗಿ ಪೂರ್ಣ ಪಾತ್ರವನ್ನು ಪೂರೈಸಲು ನನ್ನ ಬೌಲಿಂಗ್ ಫಿಟ್‌ನೆಸ್ ಅನ್ನು ಮರಳಿ ಪಡೆಯಲು ಗಮನಹರಿಸುತ್ತಿದ್ದೇನೆ" ಎಂದು ಸ್ಟೋಕ್ಸ್ ಮಂಗಳವಾರ ತಿಳಿಸಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ನಿರ್ಧಾರ

ಭವಿಷ್ಯದಲ್ಲಿ ಆಲ್‌ರೌಂಡರ್ ಆಗಲು ನಾನು ಐಪಿಎಲ್ ಮತ್ತು ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿಯಬೇಕಾಗಿದೆ. ಮೊಣಕಾಲು ಶಸ್ತ್ರಚಿಕಿತ್ಸೆ ಬಳಿಕ ಒಂಬತ್ತು ತಿಂಗಳು ಬೌಲಿಂಗ್ ಮಾಡದೆಯೇ ನಾನು ಬೌಲಿಂಗ್ ದೃಷ್ಟಿಕೋನದಿಂದ ಎಷ್ಟು ಹಿಂದುಳಿದಿದ್ದೇನೆ ಎಂದು ಇತ್ತೀಚಿನ ಭಾರತದ ಟೆಸ್ಟ್ ಪ್ರವಾಸದಲ್ಲಿ ಅರಿವಾಗಿದೆ. ನಮ್ಮ ಟೆಸ್ಟ್ ಬೇಸಿಗೆಯ ಆರಂಭದ ಮೊದಲು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಡರ್ಹಾಮ್‌ಗಾಗಿ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಟಿ20 ತಂಡದ ನಾಯಕ ಜೋಸ್ ಬಟ್ಲರ್ ಮತ್ತು ವೈಟ್ ಬಾಲ್ ಕೋಚ್ ಮ್ಯಾಥ್ಯೂ ಮೋಟ್ ಅವರಿಗೆ ಶುಭ ಹಾರೈಸಿದ್ದು, ಇಂಗ್ಲೆಂಡ್ ಈ ಬಾರಿ ಕಪ್ ಉಳಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ಐಪಿಎಲ್‌ನಿಂದ ಕೂಡ ಹೊರಗುಳಿದ ಸ್ಟೋಕ್ಸ್

ಸ್ಟೋಕ್ಸ್ ತಮ್ಮ ದೀರ್ಘಕಾಲದ ಫಿಟ್‌ನೆಸ್ ಸಮಸ್ಯೆಯಿಂದ ಈ ಐಪಿಎಲ್‌ನಿಂದ ಕೂಡ ಹೊರಗುಳಿದಿದ್ದರು. ಕಳೆದ ಆವೃತ್ತಿಯಲ್ಲಿ 16.25 ಕೋಟಿಗೆ ಸಿಎಸ್‌ಕೆ ತಂಡಕ್ಕಾಗಿ ಹರಾಜಾಗಿದ್ದ ಬೆನ್‌ ಸ್ಟೋಕ್ಸ್ ಎರಡು ಪಂದ್ಯಗಳನ್ನು ಆಡಿದರೂ ಬೌಲಿಂಗ್‌ ಮಾಡಲಿಲ್ಲ, ಬಳಿಕ ಮತ್ತೆ ಫಿಟ್‌ನೆಸ್ ಸಮಸ್ಯೆಯಿಂದ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲೇ ಇಲ್ಲ.

ಈ ವರ್ಷದ ಆರಂಭದಲ್ಲಿ ನಡೆದ ಸಂಪೂರ್ಣ ಭಾರತದ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಸ್ಟೋಕ್ಸ್ ಹೆಚ್ಚು ಬೌಲಿಂಗ್ ಮಾಡಲಿಲ್ಲ. ಧರ್ಮಶಾಲಾದಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಮಾತ್ರ ಅವರು ಮೊದಲ ಬಾರಿಗೆ ಬೌಲಿಂಗ್ ಮಾಡಿದರು ಮತ್ತು ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+