ಆಂಗ್ಲರ ತಲೆಯಲ್ಲಿ ಬುದ್ಧಿ ಇಲ್ವಾ? ಇಂಗ್ಲೆಂಡ್ ಕ್ರಿಕೆಟ್ ತಂಡ ಡಿಆರ್‌ಎಸ್‌ ನಿರ್ಧಾರದಲ್ಲಿ ಸೋಲುತ್ತಿರುವುದು ಏಕೆ?

ಇಂಗ್ಲೆಂಡ್ ಕ್ರಿಕೆಟ್ ತಂಡದ ಹಣೆಬರಹವೇ ಸರಿ ಇಲ್ಲ ಅಂತಾ ಕಾಣುತ್ತಿದೆ. ಯಾಕಂದ್ರೆ ಈ ಆಂಗ್ಲರು ಇದೀಗ ಭಾರತ ಕ್ರಿಕೆಟ್ ತಂಡದ ಎದುರು ಹೀನಾ, ಮಾನವಾಗಿ ಸೋಲುತ್ತಿದ್ದಾರೆ. ಅದ್ರಲ್ಲೂ ಕಳೆದ 3-4 ಟೆಸ್ಟ್ ಪಂದ್ಯಗಳಿಂದ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಉಳಿದ ಚೂರು, ಪಾರು ಮಾನ & ಮರ್ಯಾದಿ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಹರಾಜು ಆಗೋಗಿದೆ. ಇಂಗ್ಲೆಂಡ್ ಟಿಂ ಡಿಆರ್‌ಎಸ್ ಅಂದ್ರೆ ಡಿಸಿಷನ್ ರಿವ್ಯೂ ಸಿಸ್ಟಮ್ ಅರ್ಥಾತ್ ಅಂಪೈರ್ ಕೊಟ್ಟ ನಿರ್ಧಾರವನ್ನ ಪ್ರಶ್ನೆ ಮಾಡುವ ಆಯ್ಕೆ ಇದೀಗ ನಗೆಪಾಟಲಿಗೆ ಗುರಿಯಾಗಿದೆ!

ಡಿಸಿಷನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್) ಅಂದ್ರೆ ಕ್ರಿಕೆಟ್ ಲೋಕದಲ್ಲಿ ಒಂದು ಮರ್ಯಾದಿ ಇದೆ. ಆದರೆ ಇಂಗ್ಲೆಂಡ್ ಕ್ರಿಕೆಟ್ ತಂಡವು ಡಿಆರ್‌ಎಸ್‌ಗೆ ಇರುವ ಮರ್ಯಾದಿ ತೆಗೆಯುತ್ತಿದೆ. ಯಾಕಂದ್ರೆ ಪದೇ ಪದೇ ಸುಖಾಸುಮ್ಮನೆ ಅಂಪೈರ್ ನಿರ್ಧಾರ ಪ್ರಶ್ನೆ ಮಾಡುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ, ಸಾಲು ಸಾಲು ಸೋಲುಗಳನ್ನ ಕಾಣುತ್ತಿದೆ. ಮ್ಯಾಚ್ ಸೋಲುವ ಜೊತೆಗೆ, ಡಿಆರ್‌ಎಸ್ ಆಯ್ಕೆಯಲ್ಲೂ ಸೋಲು ಕಾಣುತ್ತಿದೆ. ಅದರಲ್ಲೂ ಇಂದಿನ ಪಂದ್ಯದಲ್ಲಿ ಇದೇ ಆಂಗ್ಲರು ಅಂದ್ರೆ ಇಂಗ್ಲೆಂಡ್ ಕ್ರಿಕೆಟ್ ತಂಡ ಬರೋಬ್ಬರಿ 4 ಬಾರಿ ತಪ್ಪು ನಿರ್ಧಾರ ಕೈಗೊಂಡು ಸೋಲುವ ಮೂಲಕ, ಮಾನ & ಮರ್ಯಾದಿ ಕಳೆದುಕೊಂಡಿದ್ದಾರೆ.

England Cricket Team Is Losing DRS Several Time Against The Indian Cricket Team

40 ಬಾರಿ ಡಿಆರ್‌ಎಸ್, 17 ಸೋಲು!

ಭಾರತ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ 4 ಪಂದ್ಯಗಳು ಮುಗಿದಿದ್ದು, ಈ ಪೈಕಿ ಭಾರತ 3 ಮ್ಯಾಚ್ ಗೆದ್ದಿದೆ. ಆದ್ರೆ ಇಂಗ್ಲೆಂಡ್ ತಂಡ ಕೇವಲ 1 ಪಂದ್ಯ ಗೆದ್ದಿದೆ. ಹೀಗಿದ್ದಾಗ 5ನೇ ಮತ್ತು ಈ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಕೂಡ ಆಂಗ್ಲರ ಟೀಂ ಹೀನಾಯ ಸೋಲಿನ ಹಂತಕ್ಕೆ ತಲುಪಿದೆ. ಹಾಗಾದ್ರೆ ಈ ಸರಣಿಯಲ್ಲಿ ಈವರೆಗೆ ಇಂಗ್ಲೆಂಡ್ ತಂಡ ತೆಗೆದುಕೊಂಡ ಡಿಆರ್‌ಎಸ್ ಆಯ್ಕೆಗಳು ಎಷ್ಟು? ಇದರಲ್ಲಿ ಆಂಗ್ಲರು ಗೆದ್ದಿದ್ದು ಎಷ್ಟು ಬಾರಿ ಗೊತ್ತೆ? ಮುಂದೆ ಓದಿ.

ಈವರೆಗೂ ಒಟ್ಟಾರೆ 40 ಬಾರಿ ಡಿಆರ್‌ಎಸ್ ಅಂದ್ರೆ ಡಿಸಿಷನ್ ರಿವ್ಯೂ ಸಿಸ್ಟಮ್ ಆಯ್ಕೆಯನ್ನು ತೆಗೆದುಕೊಂಡಿರುವ ಇಂಗ್ಲೆಂಡ್ ತಂಡ, ಬರೋಬ್ಬರಿ 17 ಬಾರಿ ಸೋಲು ಕಂಡಿತ್ತು. ಹೀಗೆ, ಆಂಗ್ಲರು ಪ್ರತಿ ಬಾರಿ ಡಿಆರ್‌ಎಸ್ ತೆಗೆದುಕೊಂಡ ಸಮಯದಲ್ಲಿ ಕೂಡ ಅಭಿಮಾನಿಗಳು ನಕ್ಕು ಸುಮ್ಮನಾಗುತ್ತಾರೆ. ಯಾಕಂದ್ರೆ ಇಂದು ಕೂಡ ಬರೋಬ್ಬರಿ 4 ಬಾರಿ ಇಂಗ್ಲೆಂಡ್ ತಂಡ ಈ ರೀತಿ ತಪ್ಪು ಡಿಆರ್‌ಎಸ್ ಆಯ್ಕೆಯನ್ನು ತೆಗೆದುಕೊಂಡಿದೆ. ಈ ಮೂಲಕ ಮೊದಲೇ ಭಾರತ ಕ್ರಿಕೆಟ್ ತಂಡದ ವಿರುದ್ಧ ಸಾಲು ಸಾಲು ಸೋಲು ಕಾಣುತ್ತಿರುವ ಇಂಗ್ಲೆಂಡ್‌ಗೆ, ಡಿಆರ್‌ಎಸ್ ನಿಯಮದಲ್ಲೂ ಹೀನಾಯ ಹಿನ್ನಡೆ ಆಗುತ್ತಿದೆ.

ಭಾರತದ ಆಟಗಾರರ ಭರ್ಜರಿ ಆಟ!

ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 218 ರನ್‌ಗೆ ತನ್ನ ಎಲ್ಲಾ ವಿಕೆಟ್‌ಗಳನ್ನ ಕಳೆದುಕೊಂಡು, ಆಲೌಟ್ ಆಗಲು ಕಾರಣ ಆಗಿದ್ದು ಭಾರತದ ಸ್ಪಿನ್ ಬೌಲರ್‌ಗಳು. ಹೀಗೆ, ಭಾರತದ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 5 ವಿಕೆಟ್ ಪಡೆದಿದ್ದಾರೆ. ಹಾಗೇ ರವೀಂದ್ರ ಜಡೇಜಾ 1 ವಿಕೆಟ್ ಪಡೆದರು. ಈ ಮೂಲಕವಾಗಿ ಭಾರತ ಮತ್ತೊಮ್ಮೆ ತನ್ನ ಸ್ಪಿನ್ ಪಡೆ ತಾಕತ್ ತೋರಿಸಿದೆ. ಇದರ ಜೊತೆ ಈಗ ಟೀಂ ಇಂಡಿಯಾದ ಬ್ಯಾಟಿಂಗ್ ಪಡೆ ಕೂಡ ಅಬ್ಬರ ಶುರು ಮಾಡಿದೆ.

England Cricket Team Is Losing DRS Several Time Against The Indian Cricket Team

ಇನ್ನು ಇಂಗ್ಲೆಂಡ್ ನೀಡಿರುವ ಕೇವಲ 218 ರನ್ ಗುರಿ ಬೆನ್ನುಹತ್ತಿದ ಭಾರತ ತಂಡ ಭರ್ಜರಿ ಆರಂಭ ಪಡೆದಿದೆ. ಈಗಾಗಲೇ ಯಶಸ್ವಿ ಜೈಸ್ವಾಲ್ 57 ರನ್ ಗಳಿಸಿ ಔಟಾಗಿದ್ದರೆ. ಭಾರತದ ನಾಯಕ ರೋಹಿತ್ ಶರ್ಮಾ 52 ರನ್ ಗಳಿಸಿ ಔಟಾಗದೆ ಉಳಿದಿದ್ದು, ರೋಹಿತ್ ಶರ್ಮಾಗೆ ಶುಭಮನ್ ಗಿಲ್ ಸಾಥ್ ನೀಡಿದ್ದು 2 ಸಿಕ್ಸ್ & 2 ಬೌಂಡರಿ ಬಾರಿಸಿ 26 ರನ್ ಗಳಿಸಿ ಇನ್ನೂ ಸ್ಕ್ರೀಸ್‌ನಲ್ಲಿ ಆಡುತ್ತಿದ್ದಾರೆ. ಈ ಮೂಲಕ ಭಾರತ ತಂಡ 135 ರನ್‌ಗೆ 1 ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದೆ. ಹೀಗಾಗಿ ನಾಳಿನ ಆಟ ಭರ್ಜರಿ ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+