Get Updates
Get notified of breaking news, exclusive insights, and must-see stories!

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್–2 ಬಗ್ಗೆ ಕೆವಿನ್ ಪೀಟರ್ಸನ್ ಏನ್‌ ಹೇಳಿದ್ರು ಗೊತ್ತಾ?

ಬೆಂಗಳೂರು, ಮಾರ್ಚ್‌, 27: ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದರ್ಜೆಯ ಸ್ಥಾನವನ್ನು ಪಡೆದಿದೆ. ಇನ್ನು ಹೊಸದಾಗಿ ನಿರ್ಮಾಣವಾಗಿರುವ ಈ ವಿಮಾಣ ನಿಲ್ದಾಣದ ಟರ್ಮಿನಲ್‌ 2 ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಪ್ರಶಂಸೆಗಳ ಸರಮಾಲೆಯೇ ಹರಿದುಬರುತ್ತಿದೆ. ಹಾಗೆಯೇ ಇಂಗ್ಲೆಂಡ್ ಕ್ರಿಕೆಟ್‌ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕೂಡ ತಮ್ಮ ಟ್ವಿಟರ್‌ ಖಾತೆಯಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾದರೆ ಅವರು ಏನು ತಿಳಿಸಿದ್ದಾರೆ ಎಂದು ಇಲ್ಲಿ ತಿಳಿಯಿರಿ.

ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಇದನ್ನು ವಿಶ್ವದ ಯಾವುದೇ ವಿಮಾನ ನಿಲ್ದಾಣಕ್ಕೆ ಹೋಲಿಸಲು ಸಾಧ್ಯವಿಲ್ಲ, ಅಷ್ಟರ ಮಟ್ಟಿಗೆ ಅದ್ಭುತವಾಗಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

Do you know what Kevin Pietersen said about Bengaluru Kempegowda Airport Terminal-2

ಕೆವಿನ್ ಪೀಟರ್ಸನ್ ಹೇಳಿದ್ದೇನು?: "ಬೆಂಗಳೂರಿನಲ್ಲಿರುವ ಹೊಚ್ಚಹೊಸ ವಿಮಾನ ನಿಲ್ದಾಣದ ಮೂಲಕ ನಾನು ಪ್ರಯಾಣಿಸಿದ್ದೇನೆ. ಇದು ಸಂಪೂರ್ಣವಾಗಿ ವಿಶ್ವ ದರ್ಜೆಯದು. ಉತ್ತಮ ದರ್ಜೆಯಲ್ಲಿ ಇದು ಪ್ರಪಂಚದಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಿಗಿಂತಲೂ ಈ ವಿಮಾನ ನಿಲ್ದಾಣ ಅತ್ಯಾದ್ಭುತವಾಗಿದೆ," ಎಂದು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ವಿಮಾನ ನಿಲ್ದಾಣದ ಟರ್ಮಿನಲ್ 2ನ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

ಪೀಟರ್ಸನ್ ಯಾವ್ಯಾವ ತಂಡಗಳಲ್ಲಿ ಆಡಿದ್ದರು?: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ವಿಮಾನ ನಿಲ್ದಾಣದ ಅದ್ಭುತ ದೃಶ್ಯಕ್ಕೆ ಸಾರ್ವಜನಿಕರು ಫಿದಾ ಆಗಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಇದೀಗ ಪ್ರಶಂಸೆ ವ್ಯಕ್ತಪಡಿಸಿದ ಸಾವಿರಾರು ಜನರಲ್ಲಿ ಕೆವಿನ್ ಪೀಟರ್ಸನ್ ಕೂಡ ಒಬ್ಬರಾಗಿದ್ದಾರೆ. ಅವರು ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ನಿರೂಪಕರಾಗಿದ್ದಾರೆ. ಈ ಹಿಂದೆ, ಪೀಟರ್ಸನ್ ಅವರು ಐಪಿಎಲ್ ತಂಡಗಳಾದ ಡೆಲ್ಲಿ ಡೇರ್ ‌ಡೆವಿಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಆಡಿ ಮಿಂಚಿದ್ದರು.

ಪೀಟರ್ಸನ್‌ಗೆ ಧನ್ಯವಾದ ತಿಳಿಸಿದ ಅಧಿಕಾರಿಗಳು: ಇನ್ನು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಏರ್‌ಪೋರ್ಟ್‌ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಪೀಟರ್‌ಸನ್‌ಗೆ ಧನ್ಯವಾದ ತಿಳಿಸಿದ್ದಾರೆ. "ಹಲೋ@ಕೆಪಿ 24, ನಿಮ್ಮ ಅತ್ಯುತ್ತಮ ಪ್ರಶಂಸೆಗೆ ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಆದ್ಯತೆಯು ಯಾವಾಗಲೂ ನಮ್ಮ ಎಲ್ಲಾ ಪ್ರಯಾಣಿಕರು ಅತ್ಯುತ್ತಮ ಪ್ರಯಾಣದ ಅನುಭವವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳುವುದು," ಅಂತಾ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರಿಂದ 2022ರಲ್ಲಿ ಉದ್ಘಾಟನೆ: ಇನ್ನು ಈ ಟರ್ಮಿನಲ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 2022ರಲ್ಲಿ ಉದ್ಘಾಟಿಸಿದರು. ಟರ್ಮಿನಲ್ 2ನಲ್ಲಿ ದೇಶೀಯ ಕಾರ್ಯಾಚರಣೆಗಳು ಕಳೆದ ಜನವರಿಯಲ್ಲಿ ಪ್ರಾರಂಭವಾಯಿತು. ಇನ್ನು ಕಳೆದ ವರ್ಷ ಸೆಪ್ಟೆಂಬರ್‌ನಿಂದ ಎಲ್ಲಾ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಶುರುವಾದವು.

ವಿಶೇಷ ಬಹುಮಾನ: ಕಳೆದ ವರ್ಷದ ಕೊನೆಯಲ್ಲಿ ಪ್ಯಾರಿಸ್ ಮೂಲದ ಆರ್ಕಿಟೆಕ್ಚರಲ್ ಪ್ರಶಸ್ತಿಗಳ ತೀರ್ಪುಗಾರರಾದ ಪ್ರಿಕ್ಸ್ ವರ್ಸೈಲ್ಸ್, ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ವಿಶ್ವದ ಅತ್ಯಂತ ಸುಂದರವಾದ, ಪ್ರತಿಷ್ಠಿತ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಗುರುತಿಸಿದ್ದು, ಇದರ ಅದ್ಭುತ ಒಳಾಂಗಣದ ವಿನ್ಯಾಸಕ್ಕೆ ವಿಶೇಷ ಬಹುಮಾನ ನೀಡಿತು. ಹಚ್ಚ ಹಸಿರಿನೊಂದಿಗೆ ವಿಶಾಲವಾದ ಟರ್ಮಿನಲ್ 2 ಅನ್ನು "ಉದ್ಯಾನ ನಗರ" ಎಂದು ಕರೆಯುವ ಬೆಂಗಳೂರನ್ನು ಗೌರವಿಸಲು ವಿನ್ಯಾಸಗೊಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+