ಧರ್ಮಶಾಲಾ ಟೆಸ್ಟ್‌ನಲ್ಲಿ ಕೆಣಕಿದ ಜೇಮ್ಸ್ ಆಂಡರ್ಸನ್‌ಗೆ ಶುಬ್‌ಮನ್ ಗಿಲ್ ಕೊಟ್ಟ ಉತ್ತರವೇನು?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗಿ ಆಟಗಾರರು ಐಪಿಎಲ್‌ ಪಂದ್ಯಾವಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಧರ್ಮಶಾಲಾ ಟೆಸ್ಟ್ ಮುಕ್ತಾಯದ ಹಲವು ದಿನಗಳ ಬಳಿಕ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ತಮ್ಮ ಮತ್ತು ಶುಬ್‌ಮನ್ ಗಿಲ್ ನಡುವೆ ನಡೆದ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ.

ಧರ್ಮಶಾಲಾ ಟೆಸ್ಟ್‌ ಪಂದ್ಯದ ಮೂರನೇ ದಿನದಂದು, ಇಂಗ್ಲೆಂಡ್‌ನ ಆಂಡರ್ಸನ್ 700 ಟೆಸ್ಟ್ ವಿಕೆಟ್‌ಗಳನ್ನು ತಲುಪಿದ ಮೊದಲ ವೇಗಿ ಎನಿಸಿಕೊಂಡರು. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಗಿಲ್ ಅವರನ್ನು ಔಟ್ ಮಾಡಿದ್ದರು. ಗಿಲ್ ಕಡಿಮೆ ಸ್ಕೋರ್‌ಗಳ ಸರಣಿಯ ನಂತರ ಒಂದು ಅದ್ಭುತ ಟೆಸ್ಟ್ ಸರಣಿಯನ್ನು ಮುಕ್ತಾಯಗೊಳಿಸಿದರು. ಗಿಲ್ ತಮ್ಮ ಶತಕವನ್ನು ತಲುಪುವ ಮುನ್ನ, ಅವರು ಆಂಡರ್ಸನ್‌ ಜೊತೆ ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಂಡರು.

Know how Shubman Gill Reacts to James Anderson Sledge during India vs England Test

ನಂತರದ ಪತ್ರಿಕಾಗೋಷ್ಠಿಯಲ್ಲಿ ಕೇಳಿದಾಗ, ಶುಭಮನ್ ಗಿಲ್ ಆಂಡರ್ಸನ್ ಜೊತೆಗಿನ ಸಂಭಾಷಣೆ ಕುರಿತು "ನಾವಿಬ್ಬರೂ ಆ ಚಾಟ್ ಅನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಉತ್ತಮ ಎಂದು ನಾನು ಭಾವಿಸುತ್ತೇನೆ." ಎಂದಿದ್ದರು.

ಗಿಲ್-ಆಂಡರ್ಸನ್ ನಡುವಿನ ಸಂಭಾಷಣೆ ಏನು?

ಆದರೆ ಈಗ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಗಿಲ್ ಜೊತೆಗಿನ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ. ಬಿಬಿಸಿ ಟೈಲೆಂಡರ್ಸ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ, ಆಂಡರ್ಸನ್ ಅವರು ತಮ್ಮ ಸಾಗರೋತ್ತರ ಟೆಸ್ಟ್ ದಾಖಲೆಯ ಬಗ್ಗೆ ಗಿಲ್ ಅವರನ್ನು ನಿಂದಿಸಿರುವುದನ್ನು ಬಹಿರಂಗಪಡಿಸಿದರು.

"ನೀವು ಭಾರತದ ಹೊರಗೆ ಯಾವುದೇ ರನ್ ಗಳಿಸುತ್ತೀರಾ?' ಎಂದು ಗಿಲ್‌ ಅವರನ್ನು ಕೇಳಿದೆ. ಅದಕ್ಕೆ ಗಿಲ್ 'ಇದು ನಿವೃತ್ತಿಯ ಸಮಯ.' ಎಂದರು ಅದಾದ ಎರಡು ಎಸೆತಗಳ ನಂತರ, ನಾನು ಅವನನ್ನು ಔಟ್ ಮಾಡಿದೆ," ಎಂದು ಆಂಡರ್ಸನ್ ಹೇಳಿದರು.

ಶುಬ್‌ಮನ್‌ ಗಿಲ್ ವಿದೇಶದಲ್ಲಿ ಆಡಿರುವ 10 ಟೆಸ್ಟ್‌ಗಳಲ್ಲಿ, ಗಿಲ್ 32.70 ಸರಾಸರಿಯಲ್ಲಿ 556 ರನ್ ಗಳಿಸಿದ್ದಾರೆ, ಒಂದು ಶತಕ ಮತ್ತು ಎರಡು ಅರ್ಧಶತಕ ಬಾರಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 110. ಭಾರತದಲ್ಲಿ ಗಿಲ್ ಅವರ ದಾಖಲೆಯು ಹೆಚ್ಚು ಶ್ರೇಷ್ಠವಾಗಿದೆ, 13 ಟೆಸ್ಟ್‌ಗಳಲ್ಲಿ 41.38 ಸರಾಸರಿಯಲ್ಲಿ 869 ರನ್‌ಗಳನ್ನು ಗಳಿಸಿದ್ದಾರೆ, 23 ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳು. ಅವರ ಅತ್ಯುತ್ತಮ ಸ್ಕೋರ್ 128 ಆಗಿದೆ.

ಗಿಲ್ ಈ ವಿಚಾರದ ಬಗ್ಗೆ ಮಾತನಾಡದೇ ಇದ್ದರೂ ಜೇಮ್ಸ್ ಆಂಡರ್ಸನ್ ಸಂಭಾಷಣೆಯನ್ನು ಬಹಿರಂಗಪಡಿಸಿದರು. ಇಂಗ್ಲೆಂಡ್ ಆಟಗಾರರು ಆಗಾಗ ಮೈದಾನದಲ್ಲಿ ಎದುರಾಳಿಗಳನ್ನು ಕೆಣಕುವ ಮೂಲಕ ಅವರ ಆಟದ ಮೇಲಿನ ಗಮನವನ್ನು ಹಾಳು ಮಾಡುವುದನ್ನು ಆಗಾಗ್ಗೆ ನೋಡುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+