ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಯಾಕೆ ಆಗಸ್ಟ್ 15ಕ್ಕೆ ಸ್ವಾತಂತ್ರ್ಯೋತ್ಸವ ಆಚರಿಸಲ್ಲ? ಇತಿಹಾಸ ಪಾಠ

|
Google Oneindia Kannada News

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿವೆ. 1947 ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬುದು ಪ್ರತಿಯೊಂದು ಶಾಲಾ ಮಗುವಿಗೂ ಗೊತ್ತಿರುವ ಸಂಗತಿ. ಅಂದು ಬ್ರಿಟಿಷರು ಅಧಿಕೃತವಾಗಿ ಭಾರತೀಯರಿಗೆ ಅಧಿಕಾರ ಮರಳಿಸಿದ ದಿನ.

ಹಾಗೆಯೇ, ಅಖಂಡ ಭಾರತವನ್ನು ಎರಡು ದೇಶಗಳಾಗಿ ವಿಭಜನೆಯೂ ಆಯಿತು. ಭಾರತದ ಸ್ವಾತಂತ್ರ್ಯಕ್ಕೆ ಮುಂಚೆ ಪಾಕಿಸ್ತಾನದ ಉದಯವಾಯಿತು. ಗೋವಾ ಹೊರತುಪಡಿಸಿ ಈಗಿನ ಭಾರತದಲ್ಲಿರುವ ಎಲ್ಲಾ ಪ್ರಾಂತ್ಯಗಳೂ ಸ್ವಾತಂತ್ರ್ಯ ಪಡೆದು ಭಾರತದೊಂದಿಗೆ ಒಗ್ಗೂಡಿದವು.

ಬ್ರಿಟಿಷರು ಕೊಳ್ಳೆಹೊಡೆದ ಹಣವೆಷ್ಟು? ಯಾವ್ಯಾವ ರೀತಿಯಲ್ಲಿ ಮಾಡಿದ್ದರು ಲೂಟಿ?ಬ್ರಿಟಿಷರು ಕೊಳ್ಳೆಹೊಡೆದ ಹಣವೆಷ್ಟು? ಯಾವ್ಯಾವ ರೀತಿಯಲ್ಲಿ ಮಾಡಿದ್ದರು ಲೂಟಿ?

ಗೋವಾ ಯಾಕೆ ಅಂದು ಸ್ವಾತಂತ್ರ್ಯ ಪಡೆಯಲಿಲ್ಲ? ನಿಮಗೆ ಗೊತ್ತಿರುವಂತೆ ಗೋವಾ ಬ್ರಿಟಿಷರ ಅಧೀನದಲ್ಲಿ ಇಲ್ಲದ ಪ್ರಾಂತ್ಯವಾಗಿತ್ತು. ಬ್ರಿಟಿಷರು ಕಾಲೂರುವ ಮುನ್ನವೇ 1510ರಿಂದಲೂ ಗೋವಾ ಪೋರ್ಚುಗೀಸರ ವಶವಾಗಿತ್ತು. ಬ್ರಿಟಿಷರು ಭಾರತದಿಂದ ಕಾಲ್ತೆಗೆದು 14 ವರ್ಷಗಳ ಬಳಿಕ ಪೋರ್ಚುಗೀಸರು ಗೋವಾ ತೊರೆದರು.

ಗೋವಾ 1961 ಡಿಸೆಂಬರ್ 19ರಂದು ಪೋರ್ಚುಗೀಸರಿಂದ ಸ್ವಾತಂತ್ರ್ಯ ಪಡೆಯಿತು. ಆ ದಿನ ಗೋವನ್ನರಿಗೆ ಸ್ವಾತಂತ್ರ್ಯದ ಹಬ್ಬ.

Know Why Goa Celebrates Independence on December 19th Instead of August 15th

ಗೋವಾದಲ್ಲಿ ಹೇಗಿತ್ತು ಸ್ವಾತಂತ್ರ್ಯ ಹೋರಾಟ?
ಬ್ರಿಟಿಷರು ಭಾರತ ಬಿಟ್ಟು ಹೋದ ಸಂದರ್ಭದಲ್ಲೇ ಪೋರ್ಚುಗಸರೂ ಗೋವಾ ಬಿಟ್ಟುಕೊಡುವ ನಿರೀಕ್ಷೆ ಇತ್ತು. ಆದರೆ, ಪೋರ್ಚುಗೀಸರು ಅಧಿಕಾರ ಮುಂದುವರಿಸಿಕೊಂಡು ಹೋದರು. 1940ರಿಂದಲೂ ಗೋವಾದಲ್ಲಿ ಪೋರ್ಚುಗೀಸರನ್ನು ಓಡಿಸಲು ಬಹಳ ಹೋರಾಟಗಳು ನಡೆದವು. ಗೋವಾ ಮಾತ್ರವಲ್ಲದೆ ದಮನ್, ಡಿಯು, ಅಂಜದೀಪ್ ಪ್ರದೇಶಗಳೂ ಗೋವಾ ವಶದಲ್ಲಿದ್ದವು.

ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಪ್ರಧಾನಿ ಜವಾಹರಲಾಲ್ ನೆಹರೂ ಪೋರ್ಚುಗಲ್ ಜೊತೆ ಹಲವು ಸಂಧಾನ ಸಭೆಗಳನ್ನು ನಡೆಸಿದರು. ಅದೆಲ್ಲವೂ ವಿಫಲವಾದ ಬಳಿಕ ಕೊನೆಯ ಅಸ್ತ್ರವಾಗಿ ಭಾರತ ಮಿಲಿಟರಿ ಕಾರ್ಯಾಚರಣೆ ಮೂಲಕ ಗೋವಾವನ್ನು ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿತು.

ತ್ರಿವರ್ಣ ಧ್ವಜ ಹಾರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಜೈಲು ಶಿಕ್ಷೆ ಇದೆತ್ರಿವರ್ಣ ಧ್ವಜ ಹಾರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಜೈಲು ಶಿಕ್ಷೆ ಇದೆ

1961 ಡಿಸೆಂಬರ್ 8ರಂದು ಭಾರತದ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ ಸಂಘಟಿತವಾಗಿ "ಆಪರೇಷನ್ ವಿಜಯ್" ನಡೆಸಿದವು. ಆ ಸಂದರ್ಭದಲ್ಲಿ ಗೋವದಲ್ಲಿದ್ದ ಪೋರ್ಚುಗೀಸ್ ಸೈನಿಕರ ಸಂಖ್ಯೆ ಕೇವಲ 3,300 ಮಾತ್ರ. ಭಾರತದ ಸೇನಾ ದಾಳಿಗೆ ಪ್ರತಿರೋಧ ತೋರುವ ಶಕ್ತಿ ಪೋರ್ಚುಗೀಸ್‌ಗೆ ಇರಲಿಲ್ಲ.

Know Why Goa Celebrates Independence on December 19th Instead of August 15th

ಅಂತಿಮವಾಗಿ ಪೋರ್ಚುಗೀಸ್ ಗವರ್ನರ್ ಜನರಲ್ ಮ್ಯಾನುಯಲ್ ಆಂಟೋನಿಯೋ ವಾಸಲೋ-ಇ-ಸಿಲ್ವಾ ಶರಣಾಗತರಾಗಲು ಒಪ್ಪಿಕೊಂಡರು. ಗೋವಾದ ಕಾರ್ಯದರ್ಶಿ ಭವನದ ಮುಂದೆ ಇದ್ದ ಪೋರ್ಚುಗೀಸ್ ಧ್ವಜವನ್ನು ಸ್ವಲ್ಪ ಇಳಿಸಿ ಶಾಂತಿಯ ಕುರುಹಾಗಿ ಬಿಳಿ ಬಾವುಟ ಹಾರಿಸಲಾಯಿತು. ಮಾರನೆ ದಿನ, ಅಂದರೆ ಡಿಸೆಂಬರ್ 19ರಂದು ಭಾರತದ ಸೇನಾಧಿಕಾರಿ ಮೇಜರ್ ಜನರಲ್ ಕ್ಯಾಂಡೆತ್ ಅವರು ಸೆಕ್ರೆಟರಿಯಟ್ ಮುಂದೆ ಭಾರತದ ರಾಷ್ಟ್ರೀಯ ಧ್ವಜ ಹಾರಿಸುವ ಮೂಲಕ ಗೋವಾವನ್ನು ಅಧಿಕೃತವಾಗಿ ಭಾರತದ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು.

ಆಪರೇಷನ್ ವಿಜಯ್ ಕಾರ್ಯಾಚರಣೆ ನಡೆದ ದಿನವನ್ನು ಗೋವಾ ಲಿಬರೇಶನ್ ಡೇ ಎಂದು ಸಂಭ್ರಮಿಸಲಾಗುತ್ತದೆ. ಆ ಕಾರ್ಯಾಚರಣೆಯಲ್ಲಿ ಭಾರತದ ಏಳು ಸೈನಕರು ಮತ್ತಿತರ ಸಿಬ್ಬಂದಿ ಬಲಿದಾನ ಮಾಡಿದ್ದರು. ಅವರ ಸ್ಮರಣೆಗಾಗಿ ಯುದ್ಧ ಸ್ವಾರಕ ನಿರ್ಮಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
India got freedom from British on August 15, 1947. All over India this day is celebrated as Freedom day, except in Goa. Know why...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X