Get Updates
Get notified of breaking news, exclusive insights, and must-see stories!

Independence Day 2023: ಕೆಂಪುಕೋಟೆ ಮೇಲೆ ನಿಂತು ಮಣಿಪುರದ ಜನರಿಗೆ ಭರವಸೆ ನೀಡಿದ ಪ್ರಧಾನಿ ಮೋದಿ: ಏನದು?

ನವದೆಹಲಿ, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಆ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಣಿಪುರದ ಜನರೊಂದಿಗೆ ಭಾರತ ನಿಂತಿದೆ ಎಂದು ಹೇಳಿದರು.

'ಕಳೆದ ಕೆಲ ವಾರಗಳಿಂದ ಮಣಿಪುರದಲ್ಲಿ ಹಿಂಸಾಚಾರದ ಭುಗಿಲೆದ್ದಿದೆ. ಹಲವಾರು ಜನರು ಪ್ರಾಣ ಕಳೆದುಕೊಂದಿದ್ದಾರೆ. ನಮ್ಮ ತಾಯಿ ಹಾಗೂ ಸಹೋದರಿಯರಿಗೆ ಅವಮಾನವಾಗಿದೆ. ಆದರೆ, ನಿಧಾನವಾಗಿ ಈ ಪ್ರದೇಶದಲ್ಲಿ ಶಾಂತಿ ಮರಳುತ್ತಿದೆ. ಭಾರತವು ಮಣಿಪುರದೊಂದಿಗೆ ನಿಂತಿದೆ' ಎಂದು ಅವರು ತಿಳಿಸಿದರು.

Independence Day 2023: Standing on the Red Fort, PM Modi assured the people of Manipur

ಶಾಂತಿ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದೂ ಅವರು ಒತ್ತಿ ಹೇಳಿದರು.

ಮಣಿಪುರದ ಜನರು ಕೆಲವು ದಿನಗಳಿಂದ ಕಾಪಾಡಿಕೊಂಡು ಬಂದಿರುವ ಶಾಂತಿಯನ್ನು ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.

ಶಾಂತಿಯಿಂದ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಮಣಿಪುರದ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ನಾವು ಅದನ್ನು ಮುಂದುವರಿಸುತ್ತವೆ ಎಂದು ಅವರು ತಿಳಿಸಿದರು.

Independence Day 2023: Standing on the Red Fort, PM Modi assured the people of Manipur

ಸರ್ಕಾರದ ಮೇಲೆ, ದೇಶದ ಉಜ್ವಲ ಭವಿಷ್ಯ ಮೇಲೆ ಜನರ ನಂಬಿಕೆ ಮತ್ತು ಭಾರತದ ಮೇಲೆ ವಿಶ್ವದ ನಂಬಿಕೆ. ಭಾರತದ ಅತ್ಯಂತ ದೊಡ್ಡ ಸಾಮರ್ಥ್ಯವೆಂದರೆ ನಂಬಿಕೆ ಎಂದು ಮೋದಿ ಪ್ರತಿಪಾದಿಸಿದರು.

ಭಾರತ ಈಗ ನಿಲ್ಲುವುದಿಲ್ಲ ಎಂದು ಜಾಗತಿಕ ತಜ್ಞರು ಹೇಳಿದ್ದಾರೆ. ಎಲ್ಲಾ ರೇಟಿಂಗ್ ಏಜೆನ್ಸಿಗಳು ದೇಶವನ್ನು ಹೊಗಳುತ್ತಿವೆ. ಬದಲಾಗುತ್ತಿರುವ ಜಗತ್ತನ್ನು ರೂಪಿಸುವಲ್ಲಿ ಭಾರತೀಯ ಜನರ ಸಾಮರ್ಥ್ಯಗಳು ಸ್ಪಷ್ಟವಾಗಿವೆ ಎಂದು ಪ್ರಧಾನಿ ಹೇಳಿದರು.

ಈ ಅವಧಿಯಲ್ಲಿ ನಮ್ಮ ನಿರ್ಧಾರಗಳು, ತ್ಯಾಗಗಳು ಮುಂದಿನ 1000 ವರ್ಷಗಳ ಮೇಲೆ ಪರಿಣಾಮ ಬೀರುತ್ತವೆ. ಭಾರತವು ಹೊಸ ಆತ್ಮವಿಶ್ವಾಸ ಮತ್ತು ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯು ದೇಶದ ಎಲ್ಲಾ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.

Independence Day 2023: Standing on the Red Fort, PM Modi assured the people of Manipur

'ಈ ವರ್ಷ, ದೇಶದ ಹಲವಾರು ರಾಜ್ಯಗಳು ಊಹಿಸಲಾಗದ ಬಿಕ್ಕಟ್ಟನ್ನು ಕಂಡಿವೆ. ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ನಾನು ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಈ ಸವಾಲನ್ನು ಜಯಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತವೆ' ಎಂದು ಭರವಸೆ ನೀಡಿದರು.

ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, '2014 ರಲ್ಲಿ ಜನರು ದೇಶವನ್ನು ಮುನ್ನಡೆಸಲು ಸ್ಥಿರ ಮತ್ತು ಬಲವಾದ ಸರ್ಕಾರ ಬೇಕು ಎಂದು ನಿರ್ಧರಿಸಿದರು. ಭಾರತವು ಅಸ್ಥಿರತೆಯ ಯುಗದಿಂದ ಮುಕ್ತವಾಯಿತು' ಎಂದು ಮೋದಿ ಹೇಳಿದರು.

ಮಹಾತ್ಮಾ ಗಾಂಧಿಯವರ ನೇತೃತ್ವದ ಸತ್ಯಾಗ್ರಹ ಚಳವಳಿಗೆ ಪಿಎಂ ಮೋದಿ ಕೃತಜ್ಞತೆ ಸಲ್ಲಿಸಿದರು. ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಭಗತ್ ಸಿಂಗ್, ರಾಜಗುರು, ಸುಖದೇವ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಕೊಡುಗೆ ನೀಡಿದ, ತ್ಯಾಗ ಮಾಡಿದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+