Get Updates
Get notified of breaking news, exclusive insights, and must-see stories!

Independence Day 2023: ಸ್ವಾತಂತ್ರ್ಯ ದಿನದಂದು ವಿಶೇಷ ರೈಲುಗಳ ಸಂಚಾರ- ವೇಳಾಪಟ್ಟಿ, ಮಾರ್ಗಗಳ ಕುರಿತು ಮಾಹಿತಿ, ವಿವರ

ನವದೆಹಲಿ, ಆಗಸ್ಟ್‌ 12: ಸ್ವಾತಂತ್ರ್ಯ ದಿನದಂದು ದೇಶದಾದ್ಯಂತ ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಜನದಟ್ಟಣೆಯನ್ನು ತೆರವುಗೊಳಿಸಲು ಭಾರತೀಯ ರೈಲ್ವೆ ಈ ಕ್ರಮವನ್ನು ಕೈಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಸ್ವಾತಂತ್ರ್ಯ ದಿನದಂದು ವಿಶೇಷ ರೈಲುಗಳನ್ನು ಸಂತ್ರಗಚಿ ಮತ್ತು ದಿಘಾ ನಡುವೆ ಓಡಿಸಲಾಗುತ್ತದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು ಈಗ ತಮ್ಮ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

indian-railways-special-trains-schedule

ದಿನಾಂಕ ಮತ್ತು ಮಾರ್ಗ

08009 ಸಂತ್ರಗಚಿ-ದಿಘಾ ಸ್ವಾತಂತ್ರ್ಯ ದಿನದ ವಿಶೇಷ ರೈಲು

08009 ಸಂತ್ರಗಚಿ-ದಿಘಾ ಸ್ವಾತಂತ್ರ್ಯ ದಿನದ ವಿಶೇಷ ರೈಲು ಆಗಸ್ಟ್ 12, 2023 ಮತ್ತು ಆಗಸ್ಟ್ 13, 2023 ರಂದು ರಾತ್ರಿ 11:45 ಕ್ಕೆ ಸಂತ್ರಗಚಿಯಿಂದ ಹೊರಡಲಿದೆ. ರೈಲು ಮರುದಿನ ಮುಂಜಾನೆ 3.30 ಕ್ಕೆ ದಿಘಾ ತಲುಪಲಿದೆ.

08010 ದಿಘಾ-ಸಂತ್ರಗಚಿ ಸ್ವಾತಂತ್ರ್ಯ ದಿನದ ವಿಶೇಷ ರೈಲು

08010 ದಿಘಾ-ಸಂತ್ರಗಾಚಿ ಸ್ವಾತಂತ್ರ್ಯ ದಿನದ ವಿಶೇಷ ರೈಲು ಆಗಸ್ಟ್ 13, 2023 ಮತ್ತು ಆಗಸ್ಟ್ 14, 2023 ರಂದು ಬೆಳಿಗ್ಗೆ 8 ಗಂಟೆಗೆ ದಿಘಾದಿಂದ ಹೊರಡಲಿದೆ.

ವಿಶೇಷ ರೈಲು ನಾಲ್ಕು ಎಸಿ-3 ಶ್ರೇಣಿ ಮತ್ತು ಹನ್ನೆರಡು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಒಳಗೊಂಡಿರುತ್ತದೆ. ರೈಲು ಅದೇ ದಿನ ಮಧ್ಯಾಹ್ನ 12.10 ಕ್ಕೆ ಸಂತ್ರಗಚಿ ತಲುಪಲಿದೆ. ಉಲುಬೇರಿಯಾ, ಬಗ್ನಾನ್, ಮೆಚೆಡಾ, ತಮ್ಲುಕ್, ದೇಶಪ್ರಾನ್ ಮತ್ತು ಕಂಠಿ ಈ ಮಾರ್ಗದಲ್ಲಿ ಬರುವ ಪ್ರಮುಖ ನಿಲ್ದಾಣಗಳು.

ಇತರ ವಿಶೇಷ ರೈಲುಗಳು

ದಕ್ಷಿಣ ರೈಲ್ವೆ ವಾರದ ವಿಶೇಷ ರೈಲು ಸೇವೆಗಳ ವಿಸ್ತರಣೆಯನ್ನು ಪ್ರಕಟಿಸಿದೆ. ವಿಶೇಷ ರೈಲುಗಳು ನಾಗರಕೋಯಿಲ್ ಮತ್ತು ತಾಂಬರಂ ನಡುವೆ ಆಗಸ್ಟ್ 13, 2023, ಆಗಸ್ಟ್, 27, 2023, ಸೆಪ್ಟೆಂಬರ್ 3, 2023 ಮತ್ತು ಸೆಪ್ಟೆಂಬರ್ 10, 2023 ರಂದು ಸಂಚರಿಸಲಿವೆ. 2023 ಆಗಸ್ಟ್ 21, 2023 , ಆಗಸ್ಟ್ 28, 2023, ಸೆಪ್ಟೆಂಬರ್ 4, 2023 ಮತ್ತು ಸೆಪ್ಟೆಂಬರ್ 11, 2023ರಂದು ತಂಬರಂನಿಂದ ಹಿಂತಿರುಗಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+