ಸ್ವಾತಂತ್ರ್ಯ ಸಂಭ್ರಮ: ಚಾಮರಾಜನಗರ ಜಿಲ್ಲೆಯ 121 ಕೆರೆಗಳಲ್ಲಿ ಹಾರಾಡಲಿದೆ ರಾಷ್ಟ್ರಧ್ವಜ
ಚಾಮರಾಜನಗರ, ಆಗಸ್ಟ್ 14: ಚಾಮರಾಜನಗರ ಜಿಲ್ಲಾ ಪಂಚಾಯತಿ ವತಿಯಿಂದ ಅಮೃತ ಸರೋವರ ಮಿಷನ್ ಅಭಿಯಾನದಡಿ ಪುನಶ್ಚೇತನ ಹಾಗೂ ಹೊಸದಾಗಿ ನಿರ್ಮಿಸಿರುವ ಚಾಮರಾಜನಗರ ಜಿಲ್ಲೆಯ 121 ಕೆರೆಗಳಲ್ಲಿ ತಿರಂಗ ಹಾರಾಡಿಸಲು ಗ್ರಾಮ ಪಂಚಾಯತಿಗಳು ಸಜ್ಜುಗೊಂಡಿವೆ.
ದೇಶವು ಸ್ವಾತಂತ್ರ್ಯ ಗಳಿಸಿ 75 ವರ್ಷಗಳನ್ನು ಪೂರೈಸಿದ ಅಮೃತ ಮಹೋತ್ಸವದ ಸವಿನೆಪಿಗಾಗಿ ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯದ ಸುತ್ತೋಲೆ ಅನುಸಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಿಷನ್ ಅಮೃತ ಸರೋವರ ಅಭಿಯಾನದಡಿ ಜಿಲ್ಲೆಯಲ್ಲಿ ಪುನಶ್ಚೇತನಗೊಂಡ 121 ಕೆರೆಯಂಗಳದಲ್ಲಿ ತಿರಂಗ ಹಾರಾಡಿಸಲು ಗ್ರಾಪಂಗಳು ಸಜ್ಜುಗೊಂಡಿವೆ.

ಚಾಮರಾಜನಗರ ತಾಲೂಕಿನಲ್ಲಿ 40, ಗುಂಡ್ಲುಪೇಟೆ ತಾಲೂಕಿನಲ್ಲಿ 34, ಕೊಳ್ಳೇಗಾಲ ತಾಲೂಕಿನಲ್ಲಿ 13, ಹನೂರು ತಾಲೂಕಿನಲ್ಲಿ 23, ಯಳಂದೂರು ತಾಲೂಕಿನ 11 ಕೆರೆಗಳ ಅಂಗಳ ಇಲ್ಲವೇ ದಡದಲ್ಲಿ ಧ್ವಜಾರೋಹಣ ನಡೆಸಲು ಗ್ರಾಮ ಪಂಚಾಯಿತಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿವೆ.
ಮೇರಾ ಮಾಟಿ, ಮೇರಾ ದೇಶ್ ಅಭಿಯಾನದ ಅಂಗವಾಗಿ ಭೂ ತಾಯಿಗೆ ನಮನ ಹಾಗೂ ವೀರ ಯೋಧರಿಗೆ ವಂದನೆ ಸಲ್ಲಿಸುವ ಉದ್ದೇಶದಿಂದ ಸರೋವರಗಳ ದಂಡೆಯ ಮೇಲೆ ತಿರಂಗಾ ಧ್ವಜ ಹಾರಾಡಲಿದೆ. ಅಮೃತ ಸರೋವರದ ಸ್ಥಳಗಳಲ್ಲಿ ಧ್ವಜಾರೋಹಣವನ್ನು ಸ್ವಾತಂತ್ರ್ಯ ಹೋರಾಟಗಾರರು/ಅವರ ಕುಟುಂಬಂಸ್ಥರು, ಹುತಾತ್ಮ ಯೋಧರ ಕುಟುಂಬಸ್ಥರು ಅಥವಾ ಪದ್ಮ ಪುರಸ್ಕಾರ ಪಡೆದವರು/ಹಿರಿಯ ನಾಗರಿಕರು ನೆರವೇರಿಸುವಂತೆ ಕೇಂದ್ರದಿಂದ ನಿರ್ದೇಶಿಸಲಾಗಿದೆ. ಜೊತೆಗೆ, ಕನಿಷ್ಟ 75 ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿ ಹೊರಲಿದೆ.
ಸರೋವರಗಳ ಬಳಿ ಮಕ್ಕಳಿಗೆ ಚಿತ್ರ ಕಲೆ, ರಂಗೋಲಿ, ಭಾಷಣ ಇತ್ಯಾದಿ ಸ್ಪರ್ದಾತ್ಮ ಚಟುವಟಿಕೆ ಮತ್ತು ಜನಪದ ಸಂಪ್ರದಾಯಿಕ ಗ್ರಾಮೀಣ ಆಟಗಳಾದ ಖೋ-ಖೋ, ಲಗೋರಿ ಹಗ್ಗ ಜಗ್ಗಾಟ, ಹಗ್ಗ ಜಿಗಿತ, ಕುಂಟ ಓಟ ಕುರ್ಚಿ ಹಾಗೂ ಸ್ಥಳೀಯ ಆಟೋಟಗಳನ್ನೂ ಆಯೋಜಿಸಲಾಗುತ್ತಿದೆ.
ಪಂಚಾಯಿತಿ ಕಚೇರಿಯಲ್ಲಿ ಹೋಮ-ಹವನ ಮಾಡಿಸಿದ ಅಧ್ಯಕ್ಷೆ: ಉಪಾಧ್ಯಕ್ಷ ಉಳಿದ ಸದಸ್ಯರ ಆಕ್ರೋಶ
ಚಾಮರಾಜನಗರ: ನೂತನವಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ಮೌಢ್ಯಕ್ಕೆ ಕಟ್ಟುಬಿದ್ದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹೋಮ-ಹವನ, ಭರ್ಜರಿ ಪೂಜೆ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಪಂನಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ನೂತನವಾಗಿ ಗ್ರಾಮ ಪಂಚಾಯ್ತಿಗೆ ಅಧ್ಯಕ್ಷರಾಗಿ ಶಿವಿಭಾಯಿ ಹಾಗೂ ಉಪಾಧ್ಯಕ್ಷರಾಗಿ ರಾಚಯ್ಯ ಆಯ್ಕೆಯಾದ ಹಿನ್ನಲೆಯಲ್ಲಿ ಗ್ರಾಪಂ ಕಚೇರಿಯಲ್ಲೇ ಹೋಮ ಹವನ, ಪೂಜಾ-ಕೈಂಕಾರ್ಯ ನೆರವೇರಿಸಿದ್ದು ಪಿಡಿಒ ಕೂಡ ಭಾಗಿಯಾಗಿದ್ದಾರೆ.
ಇನ್ನು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಉಳಿದ ಸದಸ್ಯರು ಸಿಇಒಗೆ ದೂರು ಕೊಟ್ಟಿದ್ದು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಬೇಕು, ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.












Click it and Unblock the Notifications