Subhas Chandra Bose: ಭಾರತೀಯರಲ್ಲಿ ಸ್ವಾತಂತ್ಯ್ರದ ಕಿಚ್ಚು ಹಚ್ಚಿದ್ದ ಮಹಾನ್ ನಾಯಕ 'ನೇತಾಜಿ'
ಸುಭಾಷ್ ಚಂದ್ರ ಬೋಸ್, ಭಾರತೀಯರಲ್ಲಿ ಸ್ವಾತಂತ್ಯ್ರದ ಕಿಚ್ಚು ಹಚ್ಚಿದ ಮಹಾನ್ ನಾಯಕ. 'ನೇತಾಜಿ' ಎಂದೇ ಗೌರವದಿಂದ ಇಂದು ಭಾರತೀಯರು ಇವರನ್ನು ನೆನಪಿಸಿಕೊಳ್ಳುತ್ತಾರೆ. ಹಲವು ಕಾರಣಗಳಿಂದ ನೇತಾಜಿ ಇಂದಿಗೂ ಭಾರತೀಯರ ಮನಸ್ಸಿನಲ್ಲಿ ಬೇರೂರಿದ್ದಾರೆ.
ಸುಭಾಷ್ ಚಂದ್ರ ಬೋಸ್ 1897 ಜನವರಿ 23 ರಂದು ಒಡಿಶಾದ ಕಟಕ್‌ನಲ್ಲಿ ಜನಿಸಿದರು. ಇವರ ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಈ ದಂಪತಿಯ 14 ಮಕ್ಕಳಲ್ಲಿ ಸುಭಾಷ್ ಚಂದ್ರ ಬೋಸ್ 9 ನೆಯವರಾಗಿದ್ದರು. ಕಟಕ್‌ನ ರಯಾವೆನ್ ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಸ್ವಾಮಿ ವಿವೇಕಾನಂದರ ಭಾಷಣ, ಸಾಹಿತ್ಯ ಬೋಸ್ ಅವರ ಮೇಲೆ ಗಾಢ ಪರಿಣಾಮ ಬೀರಿತ್ತು.

1919ರಲ್ಲಿ ತತ್ವಶಾಸ್ತ್ರದಲ್ಲಿ ಬಿಎ ಪಡೆದ ಅವರು ನಂತರ ಐಸಿಎಸ್ ಪರೀಕ್ಷೆಗಾಗಿ ಇಂಗ್ಲೆಂಡ್‌ಗೆ ತೆರಳಿದರು, 1920ರಲ್ಲಿ ಐಸಿಎಸ್ ಪದವಿ ಪಡೆದರು. ನಂತರ ಇಂಗ್ಲೆಂಡ್‌ನ ನೌಕರಿ ತಿರಸ್ಕರಿಸಿ ಭಾರತಕ್ಕೆ ಮರಳಿದರು. 1921 ರಲ್ಲಿ ಚಿತ್ತರಂಜನ್ ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟಿಸಲು ತೊಡಗಿಸಿಕೊಂಡರು. ಇದರಿಂದ ಬ್ರಿಟಿಷ್ ಸರ್ಕಾರ ಅವರಿಗೆ ಆರು ತಿಂಗಳ ಜೈಲು ಶಿಕ್ಷ ವಿಧಿಸಿತ್ತು, ಆದರೆ ಇದಕ್ಕೆ ಬೋಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ನೀವು ರಕ್ತ ಕೊಟ್ಟರೆ ನಾನು ಸ್ವಾತಂತ್ರ್ಯವನ್ನು ನೀಡುತ್ತೇನೆ
"ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ" ಇದು ಸುಭಾಷ್ ಚಂದ್ರ ಬೋಸ್ ಅವರ ಪ್ರಮುಖ ಸಂದೇಶವಾಗಿದೆ. ಇದು ಅನೇಕ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಲು ನೆರವಾಯಿತು.
ದೇಶಕ್ಕೆ ತ್ವರಿತವಾಗಿ ಸ್ವಾತಂತ್ರ್ಯ ತರಲು ಬೋಸ್ ಕ್ರಾಂತಿಯ ಹಾದಿ ಹಿಡಿದಿದ್ದರು. ಆದರೆ ಅವರ ವಾದಗಳು ಕಾಂಗ್ರೆಸ್‌ನ ಮಂದಗಾಮಿ ಹೋರಾಟಗಾರರಿಗೆ ಇಷ್ಟವಾಗುತ್ತಿರಲಿಲ್ಲ. ಸುಭಾಷ್ ಚಂದ್ರ ಬೋಸ್ ಅವರ ಚಿಂತನೆಗಳನ್ನು ಗಾಂಧೀಜಿ ಕೂಡ ವಿರೋಧಿಸಿದ್ದರು. ಆದರೂ ಬೋಸ್ ತಮ್ಮ ದಾರಿಯನ್ನು ಬದಲಿಸಲಿಲ್ಲ.
ಸ್ವಾತಂತ್ರ್ಯ ಹೋರಾಟ ಪಾಲ್ಗೊಂಡ ಅವರನ್ನು 1925 ರಲ್ಲಿ ಮ್ಯಾಂಡಲೆಯಲ್ಲಿ ಬಂಧಿಸಲಾಯಿತು. 1927 ರಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಕಾಂಗ್ರೆಸ್‌ನ ನೀತಿಗಳಿಂದ ಬೇಸತ್ತು ಚಿತ್ತರಂಜನ್ ದಾಸ್ ಅವರು ಸ್ವರಾಜ್ಯ ಪಕ್ಷ ಸ್ಥಾಪನೆ ಮಾಡಿದರು. ಬೋಸ್ ಈ ಸ್ವರಾಜ್ಯ ಪಕ್ಷವನ್ನು ಸೇರಿಕೋಂಡರು, ಅಲ್ಲಿ ಚಿತ್ತರಂಜನ್ ದಾಸ್ ಅವರ ಜೊತೆ ಕೆಲಸ ಮಾಡುತ್ತಿದ್ದರು, ಚಿತ್ತರಂಜನ್ ದಾಸ್ ಅವರ 'ಫಾವರ್ಡ್' ಪತ್ರಿಕೆಯ ನಿರ್ವಹಣೆಯನ್ನು ವಹಿಸಿಕೊಂಡರು.
1938ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರಯ, ಆದರೆ ಬೋಸ್ ಅವರ ಹೋರಾಟದ ಹಾದಿ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು, ನಂತರ ಅವರು ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡಿದರು. 1939ರಲ್ಲಿ ಕಾಂಗ್ರೆಸ್ ವಿಭಜನೆಯಾಗಿ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಲು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಅನ್ನು ಸ್ಥಾಪಿಸಿದರು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ಸೇನೆಗೆ ಸೇರ್ಪಡೆಗೊಳಿಸುವ ಮುನ್ನ ಸಮಾಲೋಚನೆ ನಡೆಸದ ಬ್ರಿಟೀಷ್ ಸರ್ಕಾರದ ನೀತಿಯನ್ನು ಖಂಡಿಸಿದರು.
ಬ್ರಿಟಿಷರ ವಿರುದ್ಧ ದಾಳಿ
ಬ್ರಿಟಿಷರ ವಿರುದ್ಧ ಹೋರಾಡಲು ಇಂಡಿಯನ್ ನ್ಯಾಷನಲ್ ಆರ್ಮಿ (ಎನ್‌ಐಎ) ಎಂದು ಮಿಲಿಟರಿ ಪಡೆಯನ್ನು ಕಟ್ಟಲಾರಂಭಿಸಿದರು. 1941ರಲ್ಲಿ ಜರ್ಮನಿಗೆ ಹೋಗಿ ಹಿಟ್ಲರ್ ಮತ್ತು ಉನ್ನತ ಅಧಿಕಾರಿಗಳ ಭೇಟಿಯಾದರು, ಭಾರತದ ಸ್ವಾತಂತ್ರ್ಯಕ್ಕಾಗಿ ಜರ್ಮನಿಯ ಸಹಕಾರ ಕೇಳಿದರು, ಅಲ್ಲಿ ಹಣಕಾಸು, ಮಿಲಿಟರಿ ಸಹಾಯ ದೊರೆತ ನಂತರ ಬರ್ಲಿನ್‌ನಲ್ಲಿ ಫ್ರೀ ಇಂಡಿಯಾ ಸೆಂಟರ್ ಮತ್ತು ಇಂಡಿಯನ್ ಲೀಜನ್ ಸ್ಥಾಪನೆ ಮಾಡಿದರು.
1942ರಲ್ಲಿ ಜಪಾನ್‌ಗೆ ತೆರಳಿದ ಅವರು, ಅಲ್ಲಿ ಐಎನ್‌ಎಯ ಮರುಸ್ಥಾಪನೆಗಾಗಿ ಪ್ರಯತ್ನ ಮಾಡಿ ಸೈನಿಕರಿಗೆ ತರಬೇತಿ ನೀಡಿದರು.1944ರಲ್ಲಿ ಸುಭಾಷ್ ಚಂದ್ರ ಬೋಸ್ ಮತ್ತು ಐಎನ್‌ಎ ಬ್ರಿಟಿಷರ ವಿರುದ್ಧ ದಾಳಿ ಮಾಡಿದರು, ಆದರೆ ಅದು ವಿಫಲವಾಯಿತು. ನಂತರ 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಸುನೀಗಿದರು ಎಂದು ವರದಿಯಾಯಿತು.
ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಈಗಲೂ ಸಾಕಷ್ಟು ಅನುಮಾನಗಳಿದೆ. ಅವರು ಅದರಲ್ಲಿ ಸಾಯಲಿಲ್ಲ, ನಂತರ ಹಲವು ವರ್ಷಗಳ ಕಾಲ ಬದುಕಿದ್ದರೂ ಎಂದು ಹೇಳಲಾಗಿದೆ. ಹೋಮಿ ಬಾಬಾ ಹೆಸರಿನಲ್ಲಿ ಅವರು ಬದುಕಿದ್ದರು ಎಂದು ಹೇಳಲಾಗುತ್ತದೆ. ಆದರೆ ಇದು ಅಧಿಕೃತ ಎಂದು ಎಲ್ಲೂ ದಾಖಲಾಗಿಲ್ಲ.
ಬೋಸ್ ಅವರು ಕ್ರಾಂತಿಕಾರಿ, ಕ್ರಾಂತಿಯಿಂದ ಬೇಗ ಸ್ವಾತಂತ್ರ್ಯ ಪಡೆಯಬಹುದು ಎಂದು ನಂಬಿದ್ದರು. ಇಂದಿಗೂ ಕೋಟ್ಯಂತರ ಮಂದಿಗೆ ಬೋಸ್ ಅವರ ಜೀವನ, ಹೋರಾಟ ಆದರ್ಶವಾಗಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications