ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕೀಚಕ: ಸಾವಿನ ಸುರುಳಿ ಸುತ್ತಿಕೊಂಡ ಟಾಪ್-10 ರಾಷ್ಟ್ರಗಳು

|
Google Oneindia Kannada News

ನವದೆಹಲಿ, ಮಾರ್ಚ್.14: ಚೀನಾದಲ್ಲಿ ಹುಟ್ಟಿ ವಿಶ್ವಕ್ಕೆ ಪಸರಿಸಿ ಭಾರತಕ್ಕೂ ಲಗ್ಗೆಯಿಟ್ಟಿರುವ ಡ್ರ್ಯಾಗನ್ ರಾಷ್ಟ್ರದ ಡೇಂಜರಸ್ ಕೂಸಿನ ಹೆಸರೇ ಕೊರೊನಾ ವೈರಸ್. ಜಗತ್ತಿನಾದ್ಯಂತ ಹರಡಿರುವ ಮಾರಕ ಸೋಂಕಿಗೆ ಬಲಿಯಾವರು ಸಾವಿರ ಸಾವಿರ ಜನ. ಕೊರೊನಾ ವೈರಸ್ ಸೋಂಕಿನ ಸಂಖ್ಯೆಯಂತೂ ಲಕ್ಷದ ಗಡಿ ದಾಟಿದೆ.

ಕೊರೊನಾ ವೈರಸ್ ಗೆ ಬೆದರಿದ ಬೃಹತ್ ರಾಷ್ಟ್ರಗಳೇ ತುರ್ತು ಪರಿಸ್ಥಿತಿಯನ್ನು ಘೋಷಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳೆಲ್ಲ ಸ್ತಬ್ಧಗೊಂಡಿವೆ. ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಮೋಡ ಕವಿದಿದೆ. ಪ್ರಯಾಣಿಕರು ಮನೆಯಲ್ಲೇ ಕೂರುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?

139 ರಾಷ್ಟ್ರಗಳಲ್ಲಿ ಹರಡಿರುವ ಕೊರೊನಾ ವೈರಸ್ ನ್ನು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯೇ ಜಾಗತಿಕ ಪಿಡುಗು ಎಂದು ಘೋಷಿಸಿ ಆಗಿದೆ. ಹಾಗಿದ್ದಲ್ಲಿ ಕೊರೊನಾ ವೈರಸ್ ಎಂಬ ಕೀಚಕನ ಕೈಗೆ ಸಿಲುಕಿ ನಲುಗಿರುವ ಟಾಪ್-10 ರಾಷ್ಟ್ರಗಳ ಪಟ್ಟಿ ಮತ್ತು ಪರಿಸ್ಥಿತಿಯ ಕುರಿತು ಒನ್ ಇಂಡಿಯಾದಲ್ಲಿ ವಿಶೇಷ ವರದಿ ನಮ್ಮ ಓದುಗರಿಗಾಗಿ.

ದಿನಾಂಕ: 14-03-2020, ಸಮಯ: ಮಧ್ಯಾಹ್ನ 12 ಗಂಟೆ

ದಿನಾಂಕ: 14-03-2020, ಸಮಯ: ಮಧ್ಯಾಹ್ನ 12 ಗಂಟೆ

ಕೊರೊನಾ ವೈರಸ್ ಎಂಬ ಮಾರಕ ಸೋಂಕಿಗೆ ಸಿಲುಕಿ ಸಾವಿನ ಮನೆ ಸೇರುತ್ತಿರುವವರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಮಾರ್ಚ್.14, 2020ರ ಮಧ್ಯಾಹ್ನ 12 ಗಂಟೆ ಸಮಯಕ್ಕೆ ನಿರ್ದಿಷ್ಟವಾಗಿ ಕೊರೊನಾ ವೈರಸ್ ನಿಂದ 5,429 ಮಂದಿ ಪ್ರಾಣ ಬಿಟ್ಟಿದ್ದಾರೆ. 1,45,374 ಜನರಲ್ಲಿ ಮಾರಕ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.

ಚೀನಾದಲ್ಲಿ ಕೊರೊನಾಗೆ ಅತಿಹೆಚ್ಚು ಮಂದಿ ಬಲಿ

ಚೀನಾದಲ್ಲಿ ಕೊರೊನಾಗೆ ಅತಿಹೆಚ್ಚು ಮಂದಿ ಬಲಿ

ಕೊರೊನಾ ವೈರಸ್ ಮೊದಲಿಗೆ ಕಾಣಿಸಿಕೊಂಡ ಚೀನಾದಲ್ಲಿ ಮಾರಕ ರೋಗಕ್ಕೆ ಅತಿಹೆಚ್ಚು ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ಚೀನಾದಲ್ಲಿ 13 ಮಂದಿ ಮೃತಪಟ್ಟಿದ್ದು, ಇದುವರೆಗೂ 3,189 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಶನಿವಾರ 95 ಮಂದಿಗೆ ಸೋಂಕು ತಗಲಿದ್ದು, ಚೀನಾದಲ್ಲಿ ಸೋಂಕಿತರ ಸಂಖ್ಯೆ 80,824ಕ್ಕೆ ಏರಿಕೆಯಾಗಿದೆ.

ಕೊರೊನಾ ವೈರಸ್ ಮತ್ತು ಭಾರತಕ್ಕೂ 102 ವರ್ಷಗಳ ಹಳೆಯ ನಂಟು!ಕೊರೊನಾ ವೈರಸ್ ಮತ್ತು ಭಾರತಕ್ಕೂ 102 ವರ್ಷಗಳ ಹಳೆಯ ನಂಟು!

ಚೀನಾ ನಂತರದ ಸ್ಥಾನ ಇಟಲಿಗೆ

ಚೀನಾ ನಂತರದ ಸ್ಥಾನ ಇಟಲಿಗೆ

ಕೊರೊನಾ ವೈರಸ್ ನಿಂದ ನಲುಗಿರುವ ರಾಷ್ಟ್ರ ಚೀನಾ ಆದರೆ, ಅದರ ಪಟ್ಟಿಯಲ್ಲಿ ಇಟಲಿ ಎರಡನೇ ಸ್ಥಾನದಲ್ಲಿದೆ. ಇಟಲಿ ಕೂಡಾ ಕೊರೊನಾ ವೈರಸ್ ಕಾಟಕ್ಕೆ ಸಿಕ್ಕು ನಲುಗಿ ಹೋಗಿದೆ. ಇದುವರೆಗೂ ಇಟಲಿಯಲ್ಲಿ ಮಾರಕ ಸೋಂಕಿನಿಂದ 1,266 ಮಂದಿ ಪ್ರಾಣ ಬಿಟ್ಟಿದ್ದರೆ, 17,660 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು, 1,439 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಬಗ್ಗೆ ತಿಳಿದು ಬಂದಿದೆ.

ಕೊರೊನಾಗೆ ಸಿಕ್ಕು ನಲುಗಿದ ರಾಷ್ಟ್ರಗಳ ಪಟ್ಟಿಯಲ್ಲಿ ಇರಾನ್

ಕೊರೊನಾಗೆ ಸಿಕ್ಕು ನಲುಗಿದ ರಾಷ್ಟ್ರಗಳ ಪಟ್ಟಿಯಲ್ಲಿ ಇರಾನ್

ಮಾರಕ ಕೊರೊನಾ ವೈರಸ್ ಸೋಂಕಿಗೆ ಸಿಕ್ಕು ನಲುಗಿದ ರಾಷ್ಟ್ರಗಳ ಪಟ್ಟಿಯಲ್ಲಿ ಇರಾನ್ ಮೂರನೇ ಸ್ಥಾನದಲ್ಲಿದೆ. ಇರಾನ್ ನಲ್ಲಿ ಇದುವರೆಗೂ ಮಾರಕ ಕೊರೊನಾ ವೈರಸ್ ನಿಂದ 514 ಮಂದಿ ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ 11,364 ಜನರಿಗೆ ಮಾರಕ ಸೋಂಕು ಇರುವುದು ಸ್ಪಷ್ಟವಾಗಿದೆ. ಎಲ್ಲ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, 3,529 ಮಂದಿ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಸ್ಪೇನ್ ರಾಷ್ಟ್ರಕ್ಕೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ

ಸ್ಪೇನ್ ರಾಷ್ಟ್ರಕ್ಕೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ

ಕೊರೊನಾ ವೈರಸ್ ನಿಂದ ತತ್ತರಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಪೇನ್ ನಾಲ್ಕನೇ ಸ್ಥಾನದಲ್ಲಿದೆ. ಸ್ಪೇನ್ ನಲ್ಲಿ ಇದುವರೆಗೂ 133 ಮಂದಿ ಕೊರೊನಾ ವೈರಸ್ ಗೆ ಸಿಕ್ಕು ಜೀವ ಕಳೆದುಕೊಂಡಿದ್ದಾರೆ. ಉಳಿದಂತೆ 5,232 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, 193 ಮಂದಿ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಫ್ರಾನ್ಸ್ ಗೆ ಪಟ್ಟಿಯಲ್ಲಿ ಐದನೇ ಸ್ಥಾನ

ಫ್ರಾನ್ಸ್ ಗೆ ಪಟ್ಟಿಯಲ್ಲಿ ಐದನೇ ಸ್ಥಾನ

ಡೆಡ್ಲಿ ಕೊರೊನಾ ವೈರಸ್ ನಿಂದ ಫ್ರಾನ್ಸ್ ಕೂಡಾ ನಲುಗಿ ಹೋಗಿದ್ದು, ಐದನೇ ಸ್ಥಾನದಲ್ಲಿರುವ ಈ ದೇಶದಲ್ಲಿ ಮಾರಕ ರೋಗಕ್ಕೆ ಇದುವರೆಗೂ 79 ಮಂದಿ ಬಲಿಯಾಗಿದ್ದಾರೆ. 3,661 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, 12 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಕೊರೊನಾ ದಾಳಿಗೆ ದಂಗು ಬಡಿಸಿಕೊಂಡ ದಕ್ಷಿಣ ಕೊರಿಯಾ

ಕೊರೊನಾ ದಾಳಿಗೆ ದಂಗು ಬಡಿಸಿಕೊಂಡ ದಕ್ಷಿಣ ಕೊರಿಯಾ

ಕೊರೊನಾ ವೈರಸ್ ನಿಂದ ದಕ್ಷಿಣ ಕೊರಿಯಾ ಕೂಡಾ ಬೆಚ್ಚಿ ಬಿದ್ದಿದೆ. ಆರನೇ ಸ್ಥಾನದಲ್ಲಿರುವ ದಕ್ಷಿಣ ಕೊರಿಯಾದಲ್ಲಿ ಇದುವರೆಗೂ 72 ಮಂದಿ ಮಾರಕ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 8,086 ಮಂದಿಗೆ ಸೋಂಕು ತಗಲಿದ್ದು, 714 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಯುನೈಟೆಡ್ ಸ್ಟೇಟ್ಸ್ ಗೆ ಏಳನೇ ಸ್ಥಾನ

ಯುನೈಟೆಡ್ ಸ್ಟೇಟ್ಸ್ ಗೆ ಏಳನೇ ಸ್ಥಾನ

ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕಾಗೂ ಕೂಡಾ ಕೊರೊನಾ ವೈರಸ್ ಕಾಟ ತಪ್ಪಿಲ್ಲ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಇದುವರೆಗೂ ಕೊರೊನಾ ವೈರಸ್ ನಿಂದ 50 ಮಂದಿ ಮೃತಪಟ್ಟಿದ್ದು, 2,329 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. 41 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಜಪಾನ್ ಗೆ ಪಟ್ಟಿಯಲ್ಲಿ ಎಂಟನೇ ಸ್ಥಾನ

ಜಪಾನ್ ಗೆ ಪಟ್ಟಿಯಲ್ಲಿ ಎಂಟನೇ ಸ್ಥಾನ

ಸೂರ್ಯ ಉದಯಿಸುವ ನಾಡು ಜಪಾನ್ ಗೂ ಕೂಡಾ ಕೊರೊನಾ ವೈರಸ್ ಕಾಟ ತಪ್ಪಿದ್ದಲ್ಲ. ಟಾಪ್-10 ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್ ಎಂಟನೇ ಸ್ಥಾನದಲ್ಲಿದೆ. ಜಪಾನ್ ನಲ್ಲಿ 21 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದರೆ, ನಾಲ್ಕು ಹೊಸ ಸೋಂಕಿತ ಪ್ರಕರಣಗಳು ಸೇರಿದಂತೆ 738 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 118 ಜನರ ಆರೋಗ್ಯದಲ್ಲಿ ಚೇತರಿಸಿಕೊಂಡಿದೆ.

ಸ್ವಿಡ್ಜರ್ ಲ್ಯಾಂಡ್ ನಲ್ಲಿ 11 ಮಂದಿ ಸೋಂಕಿಗೆ ಬಲಿ

ಸ್ವಿಡ್ಜರ್ ಲ್ಯಾಂಡ್ ನಲ್ಲಿ 11 ಮಂದಿ ಸೋಂಕಿಗೆ ಬಲಿ

ಕೊರೊನಾ ವೈರಸ್ ನಿಂದ ನಲುಗಿದ ರಾಷ್ಟ್ರಗಳ ಪಟ್ಟಿಯಲ್ಲಿ ಸ್ವಿಡ್ಜರ್ ಲ್ಯಾಂಡ್ 9ನೇ ಸ್ಥಾನದಲ್ಲಿದೆ. ಈ ದೇಶದಲ್ಲಿ ಇದುವರೆಗೂ 11 ಮಂದಿ ಮಾರಕ ಸೋಂಕಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಶನಿವಾರವೇ 220 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 1,139 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇನ್ನು, ನಾಲ್ವರು ಸೋಂಕಿತರ ಆರೋಗ್ಯದಲ್ಲಿ ಮಾತ್ರ ಚೇತರಿಕೆ ಕಂಡು ಬಂದಿದೆ.

ಕೊರೊನಾ ವೈರಸ್ ನಿಂದ ಬೇಸತ್ತ ನೆದರ್ ಲ್ಯಾಂಡ್

ಕೊರೊನಾ ವೈರಸ್ ನಿಂದ ಬೇಸತ್ತ ನೆದರ್ ಲ್ಯಾಂಡ್

ಇನ್ನು, ಅಂತಿಮವಾಗಿ ನೆದರ್ ಲ್ಯಾಂಡ್ 10ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಈ ದೇಶದಲ್ಲಿ ಮಾರಕ ಕೊರೊನಾ ವೈರಸ್ ಗೆ ಇದುವರೆಗೂ 10 ಮಂದಿ ಬಲಿಯಾಗಿದ್ದಾರೆ. 804 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಭಾರತದಲ್ಲಿ ಇಬ್ಬರು ಬಲಿ, 83 ಮಂದಿಗೆ ಸೋಂಕು

ಭಾರತದಲ್ಲಿ ಇಬ್ಬರು ಬಲಿ, 83 ಮಂದಿಗೆ ಸೋಂಕು

ಜನವರಿ ಆರಂಭದಲ್ಲೇ ಮಾರಕ ಕೊರೊನಾ ವೈರಸ್ ಹಾವಳಿ ಶುರುವಾಗಿದ್ದರೂ ಭಾರತದಲ್ಲಿ ಒಬ್ಬರೇ ಒಬ್ಬರಿಗೂ ಸೋಂಕು ಪತ್ತೆಯಾಗಿರಲಿಲ್ಲ. ಆರಂಭದಲ್ಲಿ ಕೇರಳದ ಮೂವರಿಗೆ ಸೋಂಕು ಇರುವುದು ಪತ್ತೆಯಾಗಿದ್ದರೂ ಕೂಡಾ ನಂತರ ಎಲ್ಲ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ, ಮಾರ್ಚ್ ಆರಂಭದಲ್ಲಿ ಭಾರತದಲ್ಲೂ ಕೊರೊನಾ ವೈರಸ್ ಭೀತಿ ಜನರಲ್ಲಿ ಹೆಚ್ಚುತ್ತಿದೆ. ಇದುವರೆಗೂ ದೇಶದಲ್ಲಿ ಕೊರೊನಾ ವೈರಸ್ ನಿಂದ ಇಬ್ಬರು ಪ್ರಾಣ ಬಿಟ್ಟಿದ್ದರೆ, 83ಕ್ಕೂ ಹೆಚ್ಚು ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ನಾಲ್ವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ.

English summary
CoronaVirus: Top-10 Countries, Death Rate And Affected Case In World. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X