Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
ಬೆಂಗಳೂರು, ಏಪ್ರಿಲ್ 24: ದೇಶದಲ್ಲಿ ದಿನ ಬಳಕೆಯ ವಸ್ತುಗಳ ದರ ಏರುತ್ತಲೆ ಇರುತ್ತದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೆಲ ದಿನಗಳಿಂದ ಸ್ಥಿರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಳಿತ ಕಾಣುತ್ತಿದ್ದರೂ ಸದ್ಯ ಭಾರತದಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗುತ್ತಿಲ್ಲ.
ಮಾರ್ಚ್ 14 ರಂದು ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಯಿತು. ಸದ್ಯ ಇದೇ ಕೊನೆಯ ಪರಿಷ್ಕರಣೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಪ್ರಮುಖ ಪರಿಷ್ಕರಣೆಯಾಗದೇ ಇರುವುದು ಕಂಡು ಬಂದಿದೆ. ತೈಲ ಮಾರುಕಟ್ಟೆ ಕಂಪನಿಗಳು ಮಾರ್ಚ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ ತಲಾ 2 ರೂಪಾಯಿ ಕಡಿತ ಮಾಡಿತ್ತು.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ
ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.72 ರೂಪಾಯಿ ಇದ್ದು, ಡೀಸೆಲ್ ಬೆಲೆ 87.62 ರೂಪಾಯಿ ಇದೆ.
ಬೆಂಗಳೂರಿನಲ್ಲಿ ಲೀಟರ್ ಬೆಲೆ ಪೆಟ್ರೋಲ್ 99.84 ರೂಪಾಯಿ ಇದ್ದು, ಡೀಸೆಲ್ ಲೀಟರ್‌ಗೆ 85.93 ರೂಪಾಯಿ ಇದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 104.21 ರೂಪಾಯಿ ಇದ್ದು, ಡೀಸೆಲ್ ಬೆಲೆ 92.15 ರೂಪಾಯಿ ಇದೆ.
ಲಕ್ನೋದಲ್ಲಿ ಪೆಟ್ರೋಲ್ ಬೆಲೆ 94.65 ರೂಪಾಯಿ ಇದ್ದು, ಡೀಸೆಲ್ ಬೆಲೆ 87.76 ರೂಪಾಯಿ ಇದೆ.
ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 94.24 ರೂಪಾಯಿ ಇದ್ದು ಡೀಸೆಲ್ ಬೆಲೆ 82.40 ರೂಪಾಯಿ ಇದೆ.
ನೋಯ್ಡಾದಲ್ಲಿ ಪೆಟ್ರೋಲ್ ಬೆಲೆ 94.83 ರೂಪಾಯಿ ಇದ್ದು, ಡೀಸೆಲ್ ಬೆಲೆ 87.96 ರೂಪಾಯಿ ಇದೆ.
ಪಾಟ್ನಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 105.18 ರೂಪಾಯಿ ಇದ್ದು ಡೀಸೆಲ್ ಬೆಲೆ ಲೀಟರ್‌ಗೆ 92.04 ರೂಪಾಯಿ ಇದೆ ಎಂದು ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳ ಪಟ್ಟಿಯಲ್ಲಿ ತಿಳಿಸಲಾಗಿದೆ.












Click it and Unblock the Notifications