Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 24: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತು ಮರುಹಂಚಿಕೆ ಮಾಡುವ ಜತೆಗೆ ಮಂಗಳಸೂತ್ರ, ಚಿನ್ನ ಕಸಿಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದಕ್ಕೆ ಕಿಡಿ ಕಾರಿರುವ ಕರ್ನಾಟಕ ಕಾಂಗ್ರೆಸ್ 10 ವರ್ಷದ ಸುದೀರ್ಘ ಆಡಳಿತ ಮಾಡಿಯೂ ಒಂದೇ ಒಂದು ತನ್ನ ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಮೋದಿಯವರು,ಅತ್ಯಂತ ನಿರ್ಲಜ್ಜ ಹಾಗೂ ಸಂವೇದನಾಶೂನ್ಯರಾಗಿ ಮಾತಾಡುತ್ತಿದ್ದಾರೆ ಎಂದು ಜರಿದಿದೆ.
ಪ್ರಧಾನಿ ವಿರುದ್ಧ ಟ್ವೀಟ್ (X) ಮಾಡಿರುವ ಕರ್ನಾಟಕ ಕಾಂಗ್ರೆಸ್, ಮಂಗಳಸೂತ್ರ ಎಂಬುದು ಮಹಿಳೆಯರ ಭಾವನಾತ್ಮಕ ವಿಚಾರ. ಯಾವ ವಿಚಾರವನ್ನು ಸಹಿಸಿದರೂ ಮಾಂಗಲ್ಯ ವಿಚಾರವನ್ನು ಯಾವ ಮಹಿಳೆಯೂ ಸಹಿಸಲಾರಳು ಎನ್ನುವ ಮೂಲಕ ಪ್ರಧಾನಿಗೆ ತಿರುಗೇಟು ನೀಡಿದೆ.

ಮಂಗಳಸೂತ್ರ ವಿಚಾರದಲ್ಲಿ ರಾಜಕೀಯ
ತಾಳಿ ನಮ್ಮ ದೇಶದ ಜನರ ಸಂಸ್ಕೃತಿ, ಸಂಪ್ರದಾಯ, ಭಾವನೆಗಳಲ್ಲಿ ಅಡಕವಾಗಿರುವ ಪವಿತ್ರ ವಸ್ತುವಾಗಿದೆ. ಇಂತಹ ತಾಳಿಯ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಹತಾಶವನ್ನು ಸೂಚಿಸುತ್ತದೆ. ಪ್ರಧಾನಿ ಮೋದಿಯವರು ದೇಶದ ಮಹಿಳೆಯರ ಮಾಂಗಲ್ಯವನ್ನು ಕಿತ್ತು ವಿಧವೆಯರನ್ನಾಗಿ ನೋಡಲು ಬಯಸುತ್ತಿದ್ದಾರೆಯೇ? ಎಂದು ಕಾಂಗ್ರೆಸ್ ಕಟುವಾಗಿ ಪ್ರಶ್ನಿಸಿದೆ.
ಒಂದು ವೇಳೆ ಪ್ರಧಾನಿ ಮಾಂಗಲ್ಯವನ್ನು ಕಿತ್ತು ವಿಧವೆಯರನ್ನಾಗಿ ನೋಡಲು ಹೀಗೆ ಬಯಸಿದರೂ ಆಶ್ಚರ್ಯವಿಲ್ಲ. ಏಕೆಂದರೆ ಮಾಂಗಲ್ಯ ಕಿತ್ತುಕೊಂಡ ಕರಾಳ ಇತಿಹಾಸವೇ ಇವರಿಗಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
10 ವರ್ಷದ ಸುದೀರ್ಘ ಆಡಳಿತ ಮಾಡಿಯೂ ಒಂದೇ ಒಂದು ತನ್ನ ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಮೋದಿಯವರು,
— Karnataka Congress (@INCKarnataka) April 24, 2024
ಅತ್ಯಂತ ನಿರ್ಲಜ್ಜ ಹಾಗೂ ಸಂವೇದನಾಶೂನ್ಯರಾಗಿ ಮಾತಾಡುತ್ತಿದ್ದಾರೆ,
ಮಂಗಳಸೂತ್ರ ಎಂಬುದು ಮಹಿಳೆಯರ ಭಾವನಾತ್ಮಕ ವಿಚಾರ.
ಯಾವ ವಿಚಾರವನ್ನು ಸಹಿಸಿದರೂ ಮಾಂಗಲ್ಯ ವಿಚಾರವನ್ನು ಯಾವ ಮಹಿಳೆಯೂ ಸಹಿಸಲಾರಳು.
ತಾಳಿ ನಮ್ಮ ದೇಶದ ಜನರ…
ಸಾವಿರಾರು ಜನರ ಮಾಂಗಲ್ಯ ಕಿತ್ತುಕೊಂಡಿಲ್ಲವೇ?
ಇನ್ನೂ ಗೋದ್ರಾ ಗಲಭೆಯಲ್ಲಿ ಸುಮಾರು 2000 ಜನರ ಮಾಂಗಲ್ಯ ಕಿತ್ತುಕೊಂಡವರಲ್ಲವೇ?. ರೈತ ಪ್ರತಿಭಟನೆಯಲ್ಲಿ 700 ರೈತ ಮಹಿಳೆಯರ ಮಾಂಗಲ್ಯ ಕಿತ್ತುಕೊಂಡವರಲ್ಲವೇ?. ಕೋವಿಡ್ ಸಮಯದಲ್ಲಿ ಆಕ್ಸಿಜನ್, ಚಿಕಿತ್ಸೆ ನೀಡದೆ ಸಾವಿರಾರು ಜನರ ಮಾಂಗಲ್ಯ ಕಿತ್ತುಕೊಂಡವರು ನೀವಲ್ಲವೇ? ಎಂದು ಕಾಂಗ್ರೆಸ್ ಆರೋಪಿಸಿತು.

ಇಂತಹ ಮಾಂಗಲ್ಯ ಕಸಿಯುವ ಬಿಜೆಪಿಯಿಂದ ದೇಶದ ಮಹಿಳೆಯರ ಜೀವನಕ್ಕೆ ಭದ್ರತೆ ದೊರೆಯುವುದು ಅಸಾಧ್ಯ. ಇವರಿಗೆ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಪ್ರಧಾನಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಪ್ರಧಾನಿಯವರ ಮಾಂಗಲ್ಯಸೂತ್ರದ ಹೇಳಿಕೆಗೆ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ತಿರುಗೇಟು ನೀಡಿದ್ದಾರೆ. ದೇಶಕ್ಕಾಗಿ ನನ್ನ ತಾಯಿ ಮತ್ತು ಅಜ್ಜಿಯವರು ಮಾಂಗಲ್ಯ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ದಶಕಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿದೆ. ಮಹಿಳೆಯರ ಮಂಗಳಸೂತ್ರವನ್ನು ಕಿತ್ತುಕೊಂಡಿದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಯವರ ಪರ ಮತಯಾಚನೆ ವೇಳೆ ಅವರು ಮಾತನಾಡಿದರು.












Click it and Unblock the Notifications