ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?

ನವದೆಹಲಿ, ಮಾರ್ಚ್.12: ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿರುವ ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ಪಿಡುಗು ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಘೋಷಿಸಿದೆ. ಸಾಂಕ್ರಾಮಿಕ ರೋಗ ಹಾಗೂ ಸಾಂಕ್ರಾಮಿಕ ಪಿಡುಗು ನಡುವೆ ಸಾಕಷ್ಟು ವ್ಯತ್ಯಾಸಗಳಿವೆ.

ಕರೊನಾ ವೈರಸ್ ರೋಗವನ್ನು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಲು ಕಾರಣವಾದರೂ ಏನು. ಅಸಲಿಗೆ ಸಾಂಕ್ರಾಮಿಕ ಪಿಡುಗು ಹಾಗೂ ಸಾಂಕ್ರಾಮಿಕ ರೋಗ ಎಂದರೇನು. ಕೊರೊನಾ ವೈರಸ್ ಸೋಂಕಿಗೆ ಬಳಲುತ್ತಿರುವ ರಾಷ್ಟ್ರಗಳೆಷ್ಟು. ಇದುವರೆಗೂ ಮಾರಕ ಸೋಂಕಿಗೆ ಪ್ರಾಣ ಬಿಟ್ಟವರು ಎಷ್ಟು ಜನ.

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಎಷ್ಟು. ವಿಶ್ವ ಆರೋಗ್ಯ ಸಂಸ್ಥೆ ಸೋಂಕಿತ ರಾಷ್ಟ್ರಗಳಿಗೆ ನೀಡಿರುವ ನಿರ್ದೇಶನಗಳೇನು. ಇಂಥ ಹಲವು ಪ್ರಶ್ನೆಗಳಿಗೆ ಇದೊಂದು ವರದಿ ವಿಸ್ತೃತವಾಗಿ ಸ್ಪಷ್ಟ ಉತ್ತರವನ್ನು ನೀಡುತ್ತದೆ.

ಕೊರೊನಾಗೆ ಇದುವರೆಗೂ 4,630 ಮಂದಿ ಬಲಿ

ಕೊರೊನಾಗೆ ಇದುವರೆಗೂ 4,630 ಮಂದಿ ಬಲಿ

ಮಾರಣಾಂತಿಕ ಕೊರೊನಾ ವೈರಸ್ ನಿಂದ ಗುರುವಾರದ ಅಂಕಿ-ಅಂಶಗಳ ಪ್ರಕಾರ 4,630ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. 114 ರಾಷ್ಟ್ರಗಳಲ್ಲಿ 1,26,136ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಕೊರೊನಾ ವೈರಸ್ ಪಾಲಿನ ಮಾತೃಭೂಮಿ ಚೀನಾದ ಹುಬೈ ಪ್ರದೇಶದಲ್ಲಿಯೇ 3,056 ಮಂದಿ ಸೋಂಕಿಗೆ ಬಲಿಯಾಗಿದ್ದರೆ, ಚೀನಾದಲ್ಲಿ ಒಟ್ಟು 80,932 ಜನರಿಗೆ ಸೋಂಕು ತಗಲಿರುವ ಬಗ್ಗೆ ವರದಿಯಾಗಿದೆ.

ಕೊರೊನಾ ಸಾಂಕ್ರಾಮಿಕ ಪಿಡುಗು ಎಂದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ಸಾಂಕ್ರಾಮಿಕ ಪಿಡುಗು ಎಂದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್ ಹರಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು ಇದೊಂದು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿದೆ. ಈ ಸೋಂಕು ಕಾಣಿಸಿಕೊಂಡಿರುವ ಎಲ್ಲ ರಾಷ್ಟ್ರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಸಾಂಕ್ರಾಮಿಕ ರೋಗವಲ್ಲ ಕೊರೊನಾ ವೈರಸ್!

ಸಾಂಕ್ರಾಮಿಕ ರೋಗವಲ್ಲ ಕೊರೊನಾ ವೈರಸ್!

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ರೋಗ ಎಂದೇ ಇಷ್ಟುದಿನಗಳ ಕಾಲ ಭಾವಿಸಲಾಗಿತ್ತು. ಆದರೆ, ಬುಧವಾರ ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ಪಿಡುಗು ಎಂದು ಸ್ವತಃ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯೇ ಘೋಷಿಸಿದೆ. ಹಾಗಿದ್ದಲ್ಲಿ ಸಾಂಕ್ರಾಮಿಕ ರೋಗ ಮತ್ತು ಸಾಂಕ್ರಾಮಿಕ ಪಿಡುಗಿನ ನಡುವೆ ದೊಡ್ಡ ವ್ಯತ್ಯಾಸವೇ ಇದೆ.

ನಿಜವಾಗಿಯೂ ಸಾಂಕ್ರಾಮಿಕ ರೋಗ ಎಂದರೇನು?

ನಿಜವಾಗಿಯೂ ಸಾಂಕ್ರಾಮಿಕ ರೋಗ ಎಂದರೇನು?

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಲ್ಲ. ಏಕೆಂದರೆ ಸಾಂಕ್ರಾಮಿಕ ರೋಗ(Epidemic)ಕ್ಕೆ ಒಂದು ನಿರ್ದಿಷ್ಟ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಒಂದು ನಿರ್ದಿಷ್ಟ ಪ್ರದೇಶ, ನಗರ, ರಾಜ್ಯ ಹಾಗೂ ದೇಶದ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡಿದರೆ ಅಂಥದ್ದನ್ನು ಸಾಂಕ್ರಾಮಿಕ ರೋಗ ಎನ್ನಲಾಗುತ್ತದೆ. ಒಂದು ಪ್ರದೇಶದಲ್ಲಿ ಇರುವ 10 ಸಾವಿರ ಜನರ ಪೈಕಿ ಎರಡು ವಾರಗಳಲ್ಲಿ 15 ಜನರಿಗೆ ಸೋಂಕು ತಗಲಿದರೆ ಅದನ್ನು ಸಾಂಕ್ರಾಮಿಕ ರೋಗ ಎಂದು ಗುರುತಿಸಲಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಎಂದಿದ್ದೇಕೆ WHO?

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಎಂದಿದ್ದೇಕೆ WHO?

ಕೊರೊನಾ ವೈರಸ್ ನ್ನು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸುವುದಕ್ಕೂ ಸಾಕಷ್ಟು ಕಾರಣಗಳಿವೆ. ಈ ಕೊರೊನಾ ವೈರಸ್ ಸೋಂಕಿಗೆ ನಿರ್ದಿಷ್ಟ ಪ್ರದೇಶದ ವ್ಯಾಪ್ತಿ ಇಲ್ಲ. ವಿಶ್ವವ್ಯಾಪಿ ಆವರಿಸಿದ ಮಾರಕ ಸೋಂಕುಗಳನ್ನು ಸಾಂಕ್ರಾಮಿಕ ಪಿಡುಗು ಎಂದು ಗುರುತಿಸಲಾಗುತ್ತದೆ. ಚೀನಾದ ಮಟ್ಟಿಗೆ ಸೋಂಕು ಹರಡಿದ್ದಲ್ಲಿ ಇದೊಂದು ಸಾಂಕ್ರಾಮಿಕ ರೋಗ ಎಂದು ಕರೆಸಿಕೊಳ್ಳುತ್ತಿತ್ತು. ಆದರೆ, ಮೂರು ತಿಂಗಳಿನಲ್ಲೇ ವಿಶ್ವದ 114 ರಾಷ್ಟ್ರಗಳಲ್ಲಿ ಹರಡಿರುವ ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ಪಿಡುಗು ಎಂದು ಪರಿಗಣಿಸಲಾಗುತ್ತದೆ. ಸಾಂಕ್ರಾಮಿಕ ಪಿಡುಗು ಒಂದು ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.

ಹಂದಿಜ್ವರ ಕೂಡಾ ಒಂದು ಸಾಂಕ್ರಾಮಿಕ ಪಿಡುಗು

ಹಂದಿಜ್ವರ ಕೂಡಾ ಒಂದು ಸಾಂಕ್ರಾಮಿಕ ಪಿಡುಗು

ಇನ್ನು, ಕೊರೊನಾ ವೈರಸ್ ನಂತೆ 2009ರಲ್ಲಿ ಸಾವಿರಾರು ಜನರ ಪ್ರಾಣ ತೆಗೆದ ಹಂದಿಜ್ವರವನ್ನು ಕೂಡಾ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿತ್ತು. ಕಳೆದ ಫೆಬ್ರವರಿಯಲ್ಲಿ ಕೊರೊನಾ ಕೂಡಾ ಒಂದು ಸಾಂಕ್ರಾಮಿಕ ಪಿಡುಗಿನಂತೆ ಕಾಡುವ ಲಕ್ಷಣಗಳಿವೆ ಎಂದು ಶಂಕಿಸಲಾಗಿತ್ತು.

ಏಡ್ಸ್ ರೋಗ ವಿಶ್ವಕಂಡ ಮೊದಲ ಸಾಂಕ್ರಾಮಿಕ ಪಿಡುಗು

ಏಡ್ಸ್ ರೋಗ ವಿಶ್ವಕಂಡ ಮೊದಲ ಸಾಂಕ್ರಾಮಿಕ ಪಿಡುಗು

1976ರಲ್ಲಿ ಮೊದಲಿಗೆ ಕಾಣಿಸಿಕೊಂಡ ಏಡ್ಸ್ ರೋಗವನ್ನು ಸಾಂಕ್ರಾಮಿಕ ಪಿಡುಗು ಎಂದು ಗುರುತಿಸಲಾಗಿತ್ತು. 1976 ರಿಂದ 1981ರ ಅವಧಿಯಲ್ಲಿ 3 ಕೋಟಿ 60 ಲಕ್ಷ ಜನರು ಏಡ್ಸ್ ರೋಗದಿಂದ ಪ್ರಾಣ ಬಿಟ್ಟಿದ್ದರು. ಇನ್ನು, 2005 ಮತ್ತು 2012ರ ವೇಳೆಗೆ ಏಡ್ಸ್ ರೋಗಕ್ಕೆ ಸೂಕ್ತ ಚಿಕಿತ್ಸೆಗಳನ್ನು ಕಂಡು ಹಿಡಿಯಲಾಗಿತ್ತು. ಇದರ ಪರಿಣಾಮವಾಗಿ ಸಾವಿನ ಸಂಖ್ಯೆಯು 2 ಕೋಟಿ 20 ಲಕ್ಷದಿಂದ 1 ಕೋಟಿ 60 ಲಕ್ಷಕ್ಕೆ ಇಳಿಕೆ ಕಂಡಿತ್ತು.

ಹಾಂಗ್ ಕಾಂಗ್ ಜ್ವರಕ್ಕೆ 10 ಲಕ್ಷ ಜನ ಸಾವು

ಹಾಂಗ್ ಕಾಂಗ್ ಜ್ವರಕ್ಕೆ 10 ಲಕ್ಷ ಜನ ಸಾವು

ಕಳೆದ 1968ರಲ್ಲಿ ಹಾಂಗ್ ಕಾಂಗ್ ನಲ್ಲಿ ಕಾಣಿಸಿಕೊಂಡ ಜ್ವರವನ್ನು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಲಾಗಿತ್ತು. ಮೊದಲಿಗೆ ಹಾಂಗ್ ಕಾಂಗ್ ನಲ್ಲಿ ಕಾಣಿಸಿಕೊಂಡ ಸೋಂಕು ಸಿಂಗಾಪುರ್, ವಿಯೆಟ್ನಾ, ಫಿಲಿಫೈನ್ಸ್, ಆಸ್ಟ್ರೇಲಿಯಾ, ಮತ್ತು ಯುನೈಟೆಡ್ ಸ್ಟೇಟ್ಸ್ ಗೆ ಹರಡಿದ ಜ್ವರದಿಂದ 10ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಚೀನಾದಲ್ಲೇ ಕಾಣಿಸಿಕೊಂಡ ಶೀತಜ್ವರಕ್ಕೆ 20 ಲಕ್ಷ ಜನ ಸಾವು

ಚೀನಾದಲ್ಲೇ ಕಾಣಿಸಿಕೊಂಡ ಶೀತಜ್ವರಕ್ಕೆ 20 ಲಕ್ಷ ಜನ ಸಾವು

ಚೀನಾದಲ್ಲಿ 1956ರಲ್ಲಿ ಮೊದಲಿಗೆ ಕಾಣಿಸಿಕೊಂಡ ಶೀತಜ್ವರವನ್ನು ಹೆಚ್2ಎನ್2 ಎಂದು ಗುರುತಿಸಲಾಗಿತ್ತು. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಶೀತಜ್ವರ ಸಿಂಗಾಪುರ್, ಹಾಂಗ್ ಕಾಂಗ್, ಯುನೈಟೆಡ್ ಸ್ಟೇಟ್ಸ್ ಗೆ ಹರಡಿತು. ಕ್ಷಿಪ್ರಗತಿಯಲ್ಲಿ ಹರಡಿದ ರೋಗಕ್ಕೆ 1956ರಿಂದ 1958ರ ಅವಧಿಯಲ್ಲಿ 20ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದರು.

ಭಾರತದಲ್ಲಿ ಕಾಲರಾ ರೋಗಕ್ಕೆ 8ಲಕ್ಷ ಮಂದಿ ಸಾವು

ಭಾರತದಲ್ಲಿ ಕಾಲರಾ ರೋಗಕ್ಕೆ 8ಲಕ್ಷ ಮಂದಿ ಸಾವು

1910 ರಿಂದ 1911ರಲ್ಲಿ ಅಮೆರಿಕಾದಲ್ಲಿ ಮೊದಲಿಗೆ ಕಾಲರಾ ರೋಗವು ಕಾಣಿಸಿಕೊಂಡಿತು. ಅಲ್ಲಿಂದ ಐದು ಬಾರಿ ಕಾಲರಾ ರೋಗ ಬಾರಿಸಿದ ಮರಣಮೃದಂಗಕ್ಕೆ 2 ಕೋಟಿಗೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದರು. 6ನೇ ಬಾರಿ ಕಾಣಿಸಿಕೊಂಡ ಕಾಲರಾ ರೋಗಕ್ಕೆ ಭಾರತದಲ್ಲಿ 8ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು ಎನ್ನಲಾಗಿದೆ.

ಜಗತ್ತು ಕಂಡ ಅತಿದೊಡ್ಡ ಸಾಂಕ್ರಾಮಿಕ ಪಿಡುಗು ಪ್ಲೇಗ್

ಜಗತ್ತು ಕಂಡ ಅತಿದೊಡ್ಡ ಸಾಂಕ್ರಾಮಿಕ ಪಿಡುಗು ಪ್ಲೇಗ್

ಇನ್ನು, ವಿಶ್ವದಲ್ಲಿ ಸಾಕಷ್ಟು ರೋಗಗಳು ಮರಣ ಮೃದಂಗ ಬಾರಿಸಿ ಹೋಗಿವೆ. ಈ ಪೈಕಿ ಜನರ ಮನಸಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿರುವ ಮಹಾಮಾರಿ ರೋಗ ಎಂದರೆ ಅದು ಪ್ಲೇಗ್. 1346ರಲ್ಲಿ ಕಾಣಿಸಿಕೊಂಡ ಪ್ಲೇಗ್ ರೋಗಕ್ಕೆ ಮನೆಗಳಲ್ಲಿ ಇಲಿಗಳು ಸತ್ತು ಬೀಳುತ್ತಿದ್ದವು. ಇದರಿಂದ ಹರಡಿದ ಸೋಂಕಿಗೆ ಬರೋಬ್ಬರಿ 7.5 ಕೋಟಿಯಿಂದ 20 ಕೋಟಿವರೆಗೂ ಜನರಿಗೆ ಸೋಂಕು ತಗಲಿ ಸಾವಿನ ಮನೆ ಸೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+